ಶ್ರೀಕೃಷ್ಣ ನಾಡಿಗೆ ಸಾಧು ಸಂತರ ಪಾದಸ್ಪರ್ಶ


Team Udayavani, Nov 23, 2017, 9:16 AM IST

23-10.jpg

ಉಡುಪಿ: “ಧರ್ಮಸಂಸದ್‌’ಗೆ ಕ್ಷಣಗಣನೆ ಆರಂಭವಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ನೂರಾರು ಸಂತರು ಶ್ರೀಕೃಷ್ಣನ ನಾಡು ಉಡುಪಿಗೆ ಆಗಮಿಸುತ್ತಿದ್ದಾರೆ. ಬುಧವಾರದವರೆಗೆ ಸುಮಾರು 200 ಮಂದಿ ಸಾಧುಸಂತರು ಉಡುಪಿ ಪ್ರವೇಶಿಸಿದ್ದಾರೆ.

ಹರಿದ್ವಾರ, ಸೌರಾಷ್ಟ್ರ, ತಮಿಳುನಾಡು, ಉತ್ತರಾಖಂಡ, ಛತ್ತೀಸ್‌ಗಢ, ಅಮೃತ್‌ಸರ ಸೇರಿದಂತೆ ವಿವಿಧೆಡೆಯ ಸಂತರು ಆಗಮಿಸಿದ್ದಾರೆ. ಹಲವು ಮಂದಿ ಈಗಾಗಲೇ ಶ್ರೀಕೃಷ್ಣ ಮಠ, ಧರ್ಮಸಂಸದ್‌ ಸಭಾಂಗಣಕ್ಕೂ ಭೇಟಿ ನೀಡಿದ್ದಾರೆ. ಛತ್ತೀಸ್‌ಗಢದ ಬಜರಂಗ ಪ್ರಸಾದ್‌ ನೇತೃತ್ವದಲ್ಲಿ ಇಬ್ಬರು ಸಾಧ್ವಿಗಳು ಸೇರಿದಂತೆ 20 ಮಂದಿ ಸಂತರು ಆಗಮಿಸಿದ್ದಾರೆ. ಪಂಜಾಬ್‌ನ ಶ್ರೀ ಸದ್ಗುರು ದಲೀಪ್‌ಸಿಂಗ್‌ ಮಹಾರಾಜ್‌ ಅವರ 23 ಮಂದಿ ಶಿಷ್ಯರು ತಯೇಂದ್ರಸಿಂಗ್‌ ನಾಮಧಾರಿ ಅವರ ನೇತೃತ್ವದಲ್ಲಿ ಆಗಮಿಸಿದ್ದು ದಲೀಪ್‌ಸಿಂಗ್‌ ಮಹಾರಾಜ್‌ ಅವರು ಗುರುವಾರ ಆಗಮಿಸಲಿದ್ದಾರೆ. 

ಹರಿದ್ವಾರದ ಸಂತರು ಮಂಗಳವಾರದಂದು ವಿಮಾನದ ಮೂಲಕ ಆಗಮಿಸಿದ್ದಾರೆ. ರೈಲಿನಲ್ಲಿ ಹೊರಟ ಸಂತರು ಗುರುವಾರ ಮಧ್ಯಾಹ್ನದ ಒಳಗೆ ಉಡುಪಿ ತಲುಪಲಿದ್ದಾರೆ. ವಿಮಾನದ ಮೂಲಕವೂ ಮತ್ತಷ್ಟು ಸಂತರು ಆಗಮಿಸಲಿದ್ದಾರೆ. ಕರ್ನಾಟಕದ ಹೆಚ್ಚಿನ ಸ್ವಾಮೀಜಿಗಳು ನ. 24ರಂದೇ ಉಡುಪಿ ತಲುಪಲಿದ್ದಾರೆ ಎಂದು ಸಂತರನ್ನು ಕರೆತರುವ ಜವಾಬ್ದಾರಿ ನಿರ್ವಹಿಸುತ್ತಿರುವ ಸುಮಿತ್‌ ಕೌಡೂರು  ತಿಳಿಸಿದ್ದಾರೆ.  ಉಡುಪಿಗೆ ಆಗಮಿಸಿರುವ ಸಂತರು ಇಲ್ಲಿನ ವಾಸ್ತವ, ಆತಿಥ್ಯ ವ್ಯವಸ್ಥೆಯ ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಿ ಸಿದ್ಧಪಡಿಸಿಕೊಂಡು ವ್ಯವಸ್ಥಿತ ಸೇವೆ ಯಾರು? ಎಲ್ಲಿಂದ? ಯಾವ ನಿಲ್ದಾಣವಾಗಿ ಬರುತ್ತಾರೆ ಎನ್ನುವ ಬಗ್ಗೆ ಸರಿಯಾಗಿ ಗೊತ್ತಾಗದೆ ವ್ಯವಸ್ಥೆಯಲ್ಲಿ ಗೊಂದಲಗಳಾಗುವುದಿಲ್ಲವೇ? ಎಂದು ಸುಮಿತ್‌ ಶೆಟ್ಟಿ ಅವರನ್ನು ಪ್ರಶ್ನಿಸಿದಾಗ, ಅವ್ಯವಸ್ಥೆಯಾಗ ಕೂಡದು ಎನ್ನುವ ನೆಲೆಯಲ್ಲಿಯೇ ರಾಜ್ಯದೊಳಗಿನ ಹಾಗೂ ಅನ್ಯರಾಜ್ಯ ಸಂತರು ಯಾರೆಲ್ಲ? ಎಲ್ಲಿಂದ? ಹೇಗೆ? ಯಾವ ಸಮಯಕ್ಕೆ? ಎಲ್ಲಿಗೆ ಬರುತ್ತಾರೆ ಎನ್ನುವ ನಿಖರವಾದ ಚಾರ್ಟ್‌ ತಯಾರಿಸಿ ಇಟ್ಟುಕೊಂಡಿದ್ದೇವೆ. ಅದರಂತೆ ಸಂತರ ಪ್ರಯಾಣಕ್ಕೆ ನಿಖರ ಸೇವೆ ಒದಗಿಸಲಿದ್ದೇವೆ. ಎಲ್ಲಿಯೂ ದೋಷವಾಗದಂತೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಪೇಜಾವರ ಶ್ರೀ ಭೇಟಿ
ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬುಧವಾರ ರಾತ್ರಿ ಧರ್ಮಸಂಸತ್‌ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧರ್ಮಸಂಸದ್‌ನ ಪ್ರಧಾನ ವೇದಿಕೆ ಹಾಗೂ ಭೋಜನ ಶಾಲೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು. ಮಠದಿಂದ ಧರ್ಮಸಂಸದ್‌ ನಡೆಯುವ ರೋಯಲ್‌ಗಾರ್ಡನ್‌ ವರೆಗೂ ಶ್ರೀಗಳು ವೀಲ್‌ಚೇರ್‌ನಲ್ಲಿಯೇ ಆಗಮಿಸಿದ್ದರು.

ಟಾಪ್ ನ್ಯೂಸ್

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

7

Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್‌; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.