ಜಿಲ್ಲೆಯನ್ನು ಮತ್ತೆ ಕಾಡಿದ ಮರಳು ಸಂಕಷ್ಟ

 ಪರವಾನಿಗೆ ಅವಧಿ ಇಂದಿಗೆ ಮುಕ್ತಾಯ

Team Udayavani, Feb 3, 2020, 5:54 AM IST

SAND3

ಉಡುಪಿ: ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಪರವಾನಿಗೆ ಅವಧಿ ಫೆ.3ಕ್ಕೆ ಮುಗಿಯಲಿದೆ. ನಾನ್‌ ಸಿಆರ್‌ಝೆಡ್‌ನಿಂದಲೂ ಮರಳು ಲಭ್ಯವಾಗುತ್ತಿಲ್ಲ. ಬಜೆ ಅಣೆಕಟ್ಟಿನಿಂದ ಹೂಳೆತ್ತಿ ಮರಳು ಒದಗಿಸುವ ಪ್ರಕ್ರಿಯೆಯೂ ಸ್ಥಗಿತವಾಗಿದೆ.

ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್‌) ವ್ಯಾಪ್ತಿಯ ಎಂಟು ದಿಬ್ಬಗಳಲ್ಲಿದ್ದ 7,96,55,03 ಮೆಟ್ರಿಕ್‌ ಟನ ಮರಳು ತೆರವಿಗೆ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಝಡ್‌ಎಂಎ) 170 ಪರವಾನಿಗೆದಾರರಿಗೆ ನೀಡಿದ್ದ ನಿರಾಕ್ಷೇಪಣಾ ಪತ್ರದ ಅವಧಿ ಫೆ.3ಕ್ಕೆ ಕೊನೆಯಾಗಲಿದೆ. ಫೆ.4ರಿಂದ ಮರಳು ದಿಬ್ಬ ತೆರವಿಗೆ ಅವಕಾಶವಿಲ್ಲ.

ಸ್ವರ್ಣಾ ನದಿಯಲ್ಲಿ 6, ಸೀತಾನದಿಯಲ್ಲಿ 3, ಪಾಪನಾಶಿನಿ ನದಿಯಲ್ಲಿ 1 ಸಹಿತ ಒಟ್ಟು 10 ಮರಳು ದಿಬ್ಬಗಳಿಂದ 7,13,000 ಮೆಟ್ರಿಕ್‌ ಟನ್‌ ಮರಳು ತೆರವಿಗೆ ಜ.21ರಂದು ಪ್ರಾದೇಶಿಕ ನಿರ್ದೇಶಕರು (ಪರಿಸರ), ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ(ಕೆಎಸ್‌ಝೆಡ್‌ಎಂಎ) ಪ್ರಸ್ತಾವನೆ ಸಲ್ಲಿಸಿದ್ದು, ಸಭೆ ಕರೆದು ಅಂಗೀಕಾರ ನೀಡುವ ಪ್ರಕ್ರಿಯೆ ನಡೆದಿಲ್ಲ.

700 ಮೆಟ್ರಿಕ್‌ಟನ್‌ ಮರಳು ದಾಸ್ತಾನು
ದಿನಕ್ಕೆ 50 ಮೆಟ್ರಿಕ್‌ ಟನ್‌, ಮೂರು ತಿಂಗಳಿಗೆ ತಲಾ 500 ಮೆಟ್ರಿಕ್‌ ಟನ್‌ನಂತೆ 3,15,425 ಮೆಟ್ರಿಕ್‌ ಟನ್‌ ಮರಳು ಪರವಾನಿಗೆದಾರರಿಗೆ ವಿಂಗಡಿಸಿದ್ದು, 14,864 ಮೆಟ್ರಿಕ್‌ ಟನ್‌ ಬಾಕಿಯಿದೆ. ಮೂರು ದಿಬ್ಬದಲ್ಲಿ 2,28,483 ಮೆಟ್ರಿಕ್‌ ಟನ್‌ ಮರಳು ತೆರವಿಗೆ ಯಾರೂ ಮುಂದೆ ಬಂದಿಲ್ಲ.

3,00,561 ಮೆಟ್ರಿಕ್‌ ಟನ್‌ ಮರಳನ್ನು ಗ್ರಾಹಕರಿಗೆ ಪೂರೈಸಲಾಗಿದೆ. ಲಾರಿಗಳಿಗೆ ಬಾಡಿಗೆಯೂ ಆನ್‌ಲೈನ್‌ ಮೂಲಕ ಪಾವತಿಸಲಾಗುತ್ತಿದೆ. ಹಿರಿಯಡ್ಕದ ಬಜೆ ಅಣೆಕಟ್ಟಿನಿಂದ ಹೂಳೆತ್ತಿ 10,499 ಮೆಟ್ರಿಕ್‌ ಟನ್‌ ಮರಳನ್ನು ಉಡುಪಿ ಸ್ಯಾಂಡ್‌ ಬಾರ್‌ ಆ್ಯಪ್‌ ಬುಕ್ಕಿಂಗ್‌ ಮೂಲಕ ಬೇಡಿಕೆ ಇಟ್ಟವರಿಗೆ ಪೂರೈಸಲಾಗಿದೆ. ಹಿರಿಯಡ್ಕದ ಯಾರ್ಡ್‌ನಲ್ಲಿ 700 ಮೆಟ್ರಿಕ್‌ಟನ್‌ ಮರಳು ದಾಸ್ತಾನಿದ್ದು, ನಗರಸಭೆ ಹೂಳೆತ್ತುವ ಗುತ್ತಿಗೆ ವಹಿಸಿಕೊಂಡವರಿಗೆ ಟೆಂಡರ್‌ ಹಣ ನೀಡದ ಕಾರಣಕ್ಕೆ ಹೂಳೆತ್ತುವ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ಡ್ರೆಜ್ಜಿಂಗ್‌ ಶೀಘ್ರ ಆರಂಭಿಸಿ ಮರಳು ಒದಗಿಸಲು ಕ್ರಮಕ್ಕೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಶೀಘ್ರ ಹೊಸ ಪರವಾನಿಗೆ
ಸಿಆರ್‌ಝೆಡ್‌ ವ್ಯಾಪ್ತಿಯ 3 ಮರಳು ದಿಬ್ಬಗಳಲ್ಲಿ ಮರಳಿದ್ದರೂ ತೆರವಿಗೆ ಯಾರು ಕೂಡ ಪರವಾನಿಗ ಪಡೆದುಕೊಂಡಿಲ್ಲ. ನೀಡಿರುವ ಪರವಾನಿಗೆದಾರರ ಅವಧಿ ಮುಗಿದಿದೆ. 10 ಮರಳು ದಿಬ್ಬಗಳ ಪ್ರಸ್ತಾವನೆಯನ್ನು ಕೆಎಸ್‌ಝೆಡ್‌ಎಂಎಗೆ ಸಲ್ಲಿಸಲಾಗಿದೆ. ಅಂಗೀಕಾರವಾದರೆ ಶೀಘ್ರದಲ್ಲೇ ಹೊಸದಾಗಿ ಪರವಾನಿಗೆ ನೀಡಲಾಗುವುದು.
-ರಾನಿj ನಾಯಕ್‌,
ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ

ನಾನ್‌ಸಿಆರ್‌ಝೆಡ್‌ನ‌ಲ್ಲೂ ಖಾಲಿ
ನಾನ್‌ ಸಿಆರ್‌ಝೆಡ್‌ ವ್ಯಾಪ್ತಿಯ ಕಾವ್ರಾಡಿ ಬ್ಲಾಕ್‌ನಲ್ಲಿ 56,821 ಮೆಟ್ರಿಕ್‌ ಟನ್‌ ಮರಳಿನ ಪೈಕಿ ಕೇವಲ 8,800 ಮೆಟ್ರಿಕ್‌ ಟನ್‌ ಬಾಕಿಯಿದ್ದರೂ ಬಂದ್‌ ಮಾಡಲಾಗಿದೆ. ಹಲಾ°ಡು ಬ್ಲಾಕ್‌ನಲ್ಲಿದ್ದ 27,218 ಮೆಟ್ರಿಕ್‌ ಟನ್‌ ಮರಳು ಖಾಲಿಯಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳ್ಳಂಪಳ್ಳಿಯಲ್ಲಿ ಎರಡು ಬ್ಲಾಕ್‌ ಶೀಘ್ರ ಆರಂಭವಾಗಲಿದೆ. ನಾನ್‌ ಸಿಆರ್‌ಝೆಡ್‌ ವ್ಯಾಪ್ತಿಯ ಮರ್ಣೆ, ಹಿರ್ಗಾನದ ಬ್ಲಾಕ್‌ ಸಿದ್ದವಾಗಿದೆ. ಲೋಕೋಪಯೋಗಿ ಇಲಾಖೆ ಮರಳುಗಾರಿಕೆಗೆ ಮುಂದಾಗದಿದ್ದರೆ ಅನ್ಯ ಇಲಾಖೆಯ ಮೂಲಕ ಮರಳುಗಾರಿಕೆಗೆ ವಿಚಾರ ವಿಮರ್ಶೆ ನಡೆದಿದೆ. ಕಾರ್ಕಳದಲ್ಲಿ 14 ಕಿಂಡಿ ಅಣೆಕಟ್ಟಿನ ಹೂಳೆತ್ತುವ ಪ್ರಕ್ರಿಯೆ ಆರಂಭವಾಗಿದ್ದು, ಮುಂಡ್ಲಿ ಜಲಾಶಯ, ಬಸೂÅರು(1.20 ಲಕ್ಷ ಮೆಟ್ರಿಕ್‌ ಟನ್‌) ಜಲಾಶಯದಿಂದ ಹೂಳೆತ್ತಿ ಮರಳು ಒದಗಿಸಲು ಆ್ಯಪ್‌ ಮೂಲಕ ಬುಕ್ಕಿಂಗ್‌ ನಡೆಯಲಿದೆ. ಬಜೆ ಅಣೆಕಟ್ಟಿನ ಎರಡನೇ ಹಂತದ ಹೂಳೆತ್ತುವ ಪ್ರಕ್ರಿಯೆಗೂ ಚಾಲನೆ ಸಿಗಲಿದೆ.

ಟಾಪ್ ನ್ಯೂಸ್

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

16-skin

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ

Raichur: hit for setting firecrackers in front of house

Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

28

Indrali ರೈಲ್ವೇ ನಿಲ್ದಾಣಕ್ಕೆ ಶೆಲ್ಟರ್‌ ಅಳವಡಿಕೆ

27

Deepavali ಹಿರಿಯರ ನೆನಪಿನ ಬೆಳಕು; ನರಕ ಚತುರ್ದಶಿಗೂ ಮೊದಲೇ ನಡೆಯುತ್ತದೆ ಸೈತಿನಕ್ಲೆನ ಪರ್ಬ

Udupi District Rajyotsava Award for Udupi District Working Journalists Association

Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

10-udupi

Udupi: ಶ್ರೀ ಪುತ್ತಿಗೆ ಮಠದ ವತಿಯಿಂದ ನಟ ರಜನೀಕಾಂತ್ ಆಮಂತ್ರಣ

2-udupi

Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

19-bng

Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ

18-bng

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಚಾಲಕನ ಬಂಧನ

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

17-bng

Bengaluru: ನಟ ದರ್ಶನ್‌ಗೆ ಜಾಮೀನು: ಸುಪ್ರೀಂಗೆ ಪೊಲೀಸರ ಮೊರೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.