ಶಾಲೆ, ದೇವಾಲಯ ಗ್ರಾಮದ ಪರಿಪೂರ್ಣತೆಯ ದ್ಯೋತಕ


Team Udayavani, Apr 28, 2018, 8:00 AM IST

2704Kpe1.jpg

ಕಾಪು: ಮನುಷ್ಯನ ತಲೆ ಮತ್ತು  ಹೃದಯ ಎರಡೂ ಸರಿಯಾಗಿದ್ದರೆ ಅದು ಪರಿಪೂರ್ಣತೆಯ ಲಕ್ಷಣ. ಯಾವುದಾದರೂ ಒಂದು ಸರಿಯಿಲ್ಲದಿದ್ದರೂ ಆಗ ಜೀವನವೇ ಅಸ್ತವ್ಯಸ್ತವಾಗುತ್ತದೆ. ಅದೇ ರೀತಿಯಲ್ಲಿ ಒಂದು ಗ್ರಾಮ ಆರೋಗ್ಯಪೂರ್ಣವಾಗಿ ಪ್ರಗತಿ ಸಾಧಿಸಬೇಕಾದರೆ ಗ್ರಾಮದ ಶಾಲೆ ಮತ್ತು ದೇವಸ್ಥಾನ ಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಾಲೆ ಗ್ರಾಮದ ಶಿರವಾಗಿದ್ದರೆ, ದೇವಾಲಯ ಹೃದಯವಿದ್ದಂತೆ. ವಿದ್ಯಾಲಯ ಮತ್ತು ದೇವಾಲಯಗಳು ಗ್ರಾಮದ ಪರಿಪೂರ್ಣತೆಯ ದ್ಯೋತಕಗಳಾಗಿವೆ ಎಂದು ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಉಂಡಾರು ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಜರಗಿದ ನವೀಕೃತ ದೇವಾಲಯ ಸಮರ್ಪಣೆ, ಬಿಂಬ ಪ್ರತಿಷ್ಠಾಪನೆೆ, ಬ್ರಹ್ಮಕಲಶ ಮಹೋತ್ಸವ ಹಾಗೂ ಮನ್ಮಹಾರಥೋತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗ್ರಾಮಸ್ಥರ ಸಹಕಾರ ಅವಿಸ್ಮರಣೀಯ
ಇನ್ನಂಜೆ ಗ್ರಾಮದಲ್ಲಿ ಸೋದೆ ಮಠದ ಮೂಲಕ ಸ್ಥಾಪನೆಗೊಂಡ ಶಾಲೆ ಹಾಗೂ ಸೋದೆ ಮಠದ ಆಡಳಿತ ದಲ್ಲಿರುವ ದೇವಾಲಯ ಎರಡೂ ಪ್ರಸಿದ್ಧಿಯಾಗಿದೆ. ದೇವಾಲಯ ಸರ್ವ ಸುಂದರವಾಗಿ ಮೂಡಿ ಬರುವಲ್ಲಿ  ಗ್ರಾಮಸ್ಥರು ನಿರೀಕ್ಷೆಗೂ ಮೀರಿ ನೀಡಿದ ಸಹಕಾರ ಅವಿಸ್ಮರಣೀಯವಾಗಿದೆ. ಮುಂದೆ ವಿದ್ಯಾಲಯದ ಪುನಶ್ಚೇತನದಲ್ಲಿಯೂ ಗ್ರಾಮಸ್ಥರ ಪರಿಪೂರ್ಣ ಸಹಕಾರ ಅತ್ಯಗತ್ಯವಾಗಿ ದೊರಕಬೇಕಿದೆ ಎಂದರು.

ಸಂತರು ನಾಡಿಗೆ ಬಂದರೆ ಊರು ಪಾವನ
ಧಾರ್ಮಿಕ ಉಪನ್ಯಾಸ ನೀಡಿದ ವಿದ್ವಾನ್‌ ವೆಂಕಟೇಶ ಕುಲಕರ್ಣಿ ಮಾತನಾಡಿ, ಆಚಾರ್ಯ ಮಧ್ವರು ಮತ್ತು ವಾದಿರಾಜರು ಕರಾವಳಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲೂ ನಡೆಸಿರುವ ಪವಾಡಗಳ ಘಟನೆಗಳನ್ನು ವಿವರಿಸಿದರು. ಉಂಡಾರು ವಿಷ್ಣುಮೂರ್ತಿ ಸನ್ನಿಧಾನವು ವಿಶೇಷ  ಸಾಧನಾ ಕ್ಷೇತ್ರವಾಗಿದ್ದು, ಸಂತರು ನಾಡಿಗೆ ಬಂದರೆ ಊರು ಪಾವನವಾಗುತ್ತದೆ ಎನ್ನುವುದಕ್ಕೆ ಉಂಡಾರು ಗ್ರಾಮವೇ ಉದಾಹರಣೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ ಬಿ. ಪುಂಡಲೀಕ ಮರಾಠೆ ಮಾತನಾಡಿ, ಸೋದೆ ಶ್ರೀಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಊರವರ ಸಕ್ರಿಯ ಸೇವೆಯಿಂದಾಗಿ ವಿಷ್ಣುಮೂರ್ತಿ ದೇಗುಲವು ಆಕರ್ಷಕವಾಗಿ ಪುನಃ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಈ ತಾಣವು ಭವ್ಯ ಯಾತ್ರಾ ಕ್ಷೇತ್ರವಾಗಿ ಮೂಡಿಬರುವ ಎಲ್ಲ ಲಕ್ಷಣಗಳಿವೆ ಎಂದರು.

ಗ್ರಾಮಸ್ಥರಿಂದ ಸಮ್ಮಾನ
ಉಂಡಾರು ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ವಿಶೇಷವಾಗಿ ತೊಡಗಿಸಿಕೊಂಡ ಮುಂಬಯಿ ಸಮಿತಿಯ ಚಂದ್ರಹಾಸ ಗುರುಸ್ವಾಮಿಯವರನ್ನು ಗ್ರಾಮಸ್ಥರು ಶ್ರೀಗಳ ಮೂಲಕವಾಗಿ ಅದ್ದೂರಿಯಾಗಿ ಸಮ್ಮಾನಿಸಿ ಗೌರವಿಸಿದರು. ದಾನಿಗಳನ್ನು ಜೀರ್ಣೋದ್ಧಾರ ಸಮಿತಿ ಮತ್ತು ದೇಗುಲದ ವತಿಯಿಂದ ಸಮ್ಮಾನಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ದಯಾನಂದ ಶೆಟ್ಟಿ ಮಂಡೇಡಿ, ಸಮಿತಿಯ ಕೋಶಾಧಿಕಾರಿ ವಿ.ಜಿ. ಶೆಟ್ಟಿ, ಸತೀಶ್‌ ಶೆಟ್ಟಿ ಶಂಕರಪುರ ಉಪಸ್ಥಿತರಿದ್ದರು.

ಬಂಟಕಲ್ಲು ರಾಮಕೃಷ್ಣ ಶರ್ಮಾ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಯು. ನಂದನ ಕುಮಾರ್‌ ದಾನಿಗಳ ಪಟ್ಟಿ ವಾಚಿಸಿದರು. ನವೀನ್‌ ಅಮೀನ್‌ ಶಂಕರಪುರ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲಾ ಶೆಟ್ಟಿ ವಂದಿಸಿದರು.

ಪಾಕೆಟ್‌ಮನಿ ದೇವರಿಗೆ ಸಮರ್ಪಿಸಿದ ಬಾಲಕಿ
ಉಂಡಾರು ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ಹಿರಿಯರೊಂದಿಗೆ ಕರಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮನೆಯಲ್ಲಿ ಹಿರಿಯರು ತಿಂಡಿಗಾಗಿ ನೀಡಿದ ಪಾಕೆಟ್‌ಮನಿಯನ್ನು ಸಂಗ್ರಹಿಸಿ ರೂ.1,600/-ನ್ನು ದೇವರ ಕಾರ್ಯಕ್ಕೆ ಸಮರ್ಪಿಸಿದ 4ನೇ ತರಗತಿಯ ವಿದ್ಯಾರ್ಥಿನಿ ಅಂಚೆಪಾಲಕಿ ರೇಖಾ ಶೆಟ್ಟಿ ಮತ್ತು ಕರುಣಾಕರ ಶೆಟ್ಟಿ ದಂಪತಿಯ ಪುತ್ರಿ ವೈಷ್ಣವಿಯ ಸೇವೆಯನ್ನು ಸೋದೆ ಶ್ರೀ ವಿಶೇಷವಾಗಿ ಉಲ್ಲೇಖೀಸಿದರು. ವೈಷ್ಣವಿಯ ಸೇವೆಯನ್ನು ರಾಮಾಯಣದಲ್ಲಿ ಸೇತುವೆ ನಿರ್ಮಾಣ ಕಾರ್ಯದಲ್ಲಿ ವಾನರ ಸೇನೆಯ ನಡುವೆ ಅಳಿಲು ಸಲ್ಲಿಸಿದ ಸೇವೆಗೆ ಹೋಲಿಸಿ, ಈಕೆಯ ದೇವ ಕಾರ್ಯ ಇತರಿಗೆ ಮಾದರಿಯಾಗಿದೆ ಎಂದು ಹರಸಿ ಸಮ್ಮಾನಿಸಿದರು.

ಟಾಪ್ ನ್ಯೂಸ್

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ

1-h-d-r

ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್‌ ಸಿಂಗ್

Shrigeri-Mutt

Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ

1-tunel

ನಾಳೆ ಕಾಶ್ಮೀರದ ಸೋನಾ ಮಾರ್ಗ್‌ ಸುರಂಗ ಉದ್ಘಾಟನೆ

Basanagowda-Yatnal

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Udupi: ಬಸ್‌ನಿಂದ ಬಿದ್ದು ಬಾಲಕನಿಗೆ ಗಾಯ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

Karkala: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ

1-a-mahe-bg

ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ

siddanna-2

ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ

1-h-d-r

ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್‌ ಸಿಂಗ್

Shrigeri-Mutt

Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.