ದಾರು ಶಿಲ್ಪ ವೈಭವದ ಮೂಡ್ಲಕಟ್ಟೆ ದೊಡ್ಡಮನೆ
Team Udayavani, Mar 21, 2019, 1:00 AM IST
ಬಸ್ರೂರು: ಉಡುಪಿ ಜಿಲ್ಲೆಯ ಪುರಾತನ ಮನೆತನಗಳ ಹೆಸರು ಬಂದಾಗ ಪ್ರಥಮವಾಗಿ ಕೇಳಿಬರುವುದು ಮೂಡ್ಲಕಟ್ಟೆಯ ದೊಡ್ಡ ಮನೆ.
350 ವರ್ಷಗಳಿಗೂ ಹಿಂದೆ ಈ ಮನೆ ನಂದ್ಯಪ್ಪ ಶೆಟ್ಟಿ ಎಂಬುವರಿಂದ ನಿರ್ಮಿಸಲ್ಪಟ್ಟಿತು. ಮುಂದೆ 13-02-1903 ರಂದು ಈ ದಾರು ಶಿಲ್ಪದ ಐತಿಹ್ಯ ಹೇಳುವ ಮನೆಯ ಒಳ ಪೌಳಿಯನ್ನು ನಿರ್ಮಿಸಲಾತೆಂದು ತಾಳೆಗರಿಯಿಂದ ತಿಳಿದು ಬರುತ್ತದೆ. ಇದು ಮಾಜಿ ಸಂಸದ ದಿ| ಐ.ಎಂ.ಜಯರಾಮ ಶೆಟ್ಟಿ ಅವರ ಮೂಲಮನೆಯಾಗಿದೆ.
ಸುಂದರ ಕೆತ್ತನೆ
ಮೂಡ್ಲಕಟ್ಟೆಯ ದೊಡ್ಡ ಮನೆಯ ಒಳ ಪ್ರವೇಶಿಸುತ್ತಿದ್ದಂತೆ ಹದಿನೆಂಟು ಕಂಬಗಳ ಕೆತ್ತನೆಯು ಗಮನ ಸೆಳೆಯುತ್ತದೆ. ಮನೆಯ ಒಂದೊಂದು ಕಿಟಕಿ, ಬಾಗಿಲು ಮತ್ತು ಮುಚ್ಚಿಗೆಗಳು ಇಲ್ಲಿನ ದಾರು ಶಿಲ್ಪ ವೈಭವಕ್ಕೆ ಸಾಕ್ಷಿಯಾಗ್ತಿವೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳ ಚಲನಚಿತ್ರ, ಕಿರುಚಿತ್ರ, ಹಲವು ವಾಹಿನಿಗಳ ಧಾರಾವಾಹಿಗಳು ಇಲ್ಲಿ ಚಿತ್ರೀಕರಣಗೊಂಡು ಇಲ್ಲಿನ ಸೊಬಗನ್ನು ನಾಡಿಗೆ ಪರಿಚಯಿಸಿವೆ.
ಪುನರ್ ನಿರ್ಮಾಣ
ಈ ಮನೆ ಶಿಥಿಲಾವಸ್ಥೆಗೆ ತಲುಪಿದಾಗ 2010ರಲ್ಲಿ ಜಯರಾಮ ಶೆಟ್ಟಿ ಅವರ ಭಾವ ಡಾ.ಜಿ.ಪಿ.ಶೆಟ್ಟಿ ಮತ್ತು ಮಕ್ಕಳು ಈ ಮನೆಯ ಮೂಲ ಕೆತ್ತನೆಗೆ ಒಂದಿನಿತೂ ಚ್ಯುತಿ ಬಾರದಂತೆ ಪುನರ್ ನಿರ್ಮಾಣ ಮಾಡಿದ್ದಾರೆ. ಬಂಟ ಸಮುದಾಯದ ಕೆಲವೇ ಪ್ರತಿಷ್ಠಿತ ಮನೆತನಗಳಲ್ಲಿ ಈ ಮನೆಯೂ ಒಂದಾಗಿದೆ.
ವಿದೇಶದಿಂದಲೂ ವೀಕ್ಷಕರು
ನಾಡಿನ ವಿವಿಧೆಡೆಗಳಿಂದ ಮನೆಯ ವೈಭವ ವೀಕ್ಷಿಸಲು ನಿತ್ಯವೂ ಇಲ್ಲಿಗೆ ಜನ ಆಗಮಿಸುತ್ತಾರೆ. ವಿದೇಶದಿಂದಲೂ ವೀಕ್ಷಕರು ಆಗಮಿಸಿದ್ದಾರೆ.
ಪುನರ್ ನಿರ್ಮಾಣ
2008 ರಲ್ಲಿ ಶಿಥಿಲವಾದ ಈ ಮನೆ ಕೆಡವಿ ಮರು ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. 350 ವರ್ಷಗಳ ಹಿಂದಿನ ಕೆತ್ತನೆಗೆ ಚ್ಯುತಿ ಬಾರದಂತೆ 100 ಕುಶಲಕರ್ಮಿಗಳಿಂದ ಪುನರ್‌ನಿರ್ಮಿಸಲಾಗಿದೆ. ಕಲಾಕೌಶಲ ಮುಂದಿನ ತಲೆಮಾರಿಗೂ ಉಳಿಯಲಿ.
-ಡಾ| ಜಿ.ಪಿ.ಶೆಟ್ಟಿ,, ಮನೆ ಯಜಮಾನ
ವ್ಯವಸ್ಥೆ ಬೇಕು
ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ದೊಡ್ಡಮನೆಯ ದಾರುಶಿಲ್ಪದ ಬಗ್ಗೆ ಕೇಳಿದ ತಕ್ಷಣ ನೋಡುವ ಉತ್ಸಾಹದಿಂದ ಅಲ್ಲಿಗೆ ಹೋಗಿ ವೀಕ್ಷಿಸಿದ್ದು, ಸಂತೋಷಪಟ್ಟಿದ್ದೇನೆ. ಪ್ರವಾಸಿಗರಿಗೆ ಇಲ್ಲಿ ಸೂಕ್ತ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಮಾಡಬೇಕಿದೆ.
-ಉದಯ, ಬೆಂಗಳೂರು ನಿವಾಸಿ
- ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.