ಅಶಕ್ತರ ಸೇವೆ ಭಗವಂತನ ಸೇವೆಗಿಂತ ದೊಡ್ಡದು: ಸುಕುಮಾರ ಶೆಟ್ಟಿ
Team Udayavani, May 14, 2019, 6:00 AM IST
ಕೊಲ್ಲೂರು: ದುಡಿಮೆಯ ಒಂದಷ್ಟು ಭಾಗವನ್ನು ಸತ್ಕಾರ್ಯಕ್ಕೆ ದಾನ ಮಾಡುವ ವ್ಯಕ್ತಿ ಜನಮಾನಸದಲ್ಲಿ ಉಳಿಯುತ್ತಾನೆ. ನಮ್ಮ ಸುತ್ತಮುತ್ತಲಿನ ಅಶಕ್ತರಿಗೆ ಮಾಡುವ ಸಮಾಜಸೇವೆ ಭಗವಂತನ ಸೇವೆಗಿಂತಲೂ ದೊಡ್ಡದು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಎಂ.ಎಸ್. ಮಂಜ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಚಿತ್ತೂರು ಮಾರಣಕಟ್ಟೆಯಲ್ಲಿ ನಡೆದ ನಡೆದ ದಿ| ಸುಬ್ರಹ್ಮಣ್ಯ ಮಂಜ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾರಂಭವನ್ನು ಮಾತೃಶ್ರೀ ವಿಶಾಲಾಕ್ಷಿ ಅಮ್ಮನವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಕೃಷ್ಣಮೂರ್ತಿ ಮಂಜ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ಎಂ.ಎನ್. ಚಂದ್ರಶೇಖರ ಮಂಜ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘದ ಮಾಜಿ ಅಧ್ಯಕ್ಷ ಬಾಳೆಕುದ್ರು ರಾಮಚಂದ್ರ ಉಪಾದ್ಯಾಯ, ಡಾ| ಅತುಲ್ ಕುಮಾರ್ ಶೆಟ್ಟಿ, ಲೆಕ್ಕ ಪರಿಶೋಧಕ ರಾಜೀವ ಶೆಟ್ಟಿ ಭಾಗವಹಿಸಿದ್ದರು. ಟ್ರಸ್ಟ್‌ನ ಕಾರ್ಯಾಧ್ಯಕ್ಷ ನಾಗರಾಜ ಮಂಜ ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಜಿ. ಸುಬ್ರಹ್ಮಣ್ಯ ಉಡುಪ ಕೊಕ್ಕರ್ಣೆ ಪ್ರಾಸ್ತಾವಿಸಿದರು. ಗೌರವಾಧ್ಯಕ್ಷ ಮಾರಣಕಟ್ಟೆ ಶ್ರೀಧರ ಮಂಜ ಸ್ವಾಗತಿಸಿದರು.
ಚಿತ್ತೂರು ಪ್ರೌಢಶಾಲಾ ಮುಖ್ಯಶಿಕ್ಷಕ ಜಗದೀಶ್ ಶೆಟ್ಟಿ, ಚಿತ್ತೂರು ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಆನಂದ ಶೆಟ್ಟಿ, ಆಲೂರು ಹಿ. ಪ್ರಾ. ಶಾಲಾ ಮುಖ್ಯಶಿಕ್ಷಕ ಶಶಿಧರ ಶೆಟ್ಟಿ, ಪ್ರೇರಣಾ ಯುವ ಸಂಘಟನೆ ಸದಸ್ಯ ನಾಗರಾಜ ಶೆಟ್ಟಿ ನೈಕಂಬಳಿ ಸಮ್ಮಾನಪತ್ರ ವಾಚಿಸಿದರು. ಚಿತ್ತೂರು ಹಿ.ಪ್ರಾ. ಶಾಲೆಯ ದೈ.ಶಿ. ಶಿಕ್ಷಕ ಬಾಲಕೃಷ್ಣ ಶೆಟ್ಟಿ ವಿವಿಧ ಕ್ಷೇತ್ರಗಳಿಗೆ ಟ್ರಸ್ಟ್ ವತಿಯಿಂದ ನೀಡಿದ ಆರ್ಥಿಕ ಸಹಕಾರದ ಪಟ್ಟಿ ವಾಚಿಸಿದರು. ಎಚ್.ಎಂ.ಎಂ. ಶಾಲೆ ಶಿಕ್ಷಕಿ ಶ್ರೀಲಕ್ಷ್ಮೀ ವಂದಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿದರು.
ಸಮ್ಮಾನ
ಸಮಾರಂಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ನೆಂಪು ನರಸಿಂಹ ಭಟ್ ಅವರಿಗೆ ವೈದಿಕ ರತ್ನ ಪ್ರಶಸ್ತಿ, ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿ ವಂಡ್ಸೆ ಗ್ರಾ.ಪಂ.ನಲ್ಲಿ ಎಸ್.ಎಲ್.ಆರ್.ಎಂ. ಘಟಕ ಸ್ಥಾಪಿಸಿ ಸ್ವತ್ಛತೆಗೆ ಆದ್ಯತೆ ನೀಡಿ ಕಸ ನಿರ್ವಹಣೆಯಲ್ಲಿ ರಾಜ್ಯದಲ್ಲೇ ಗಮನಾರ್ಹ ಕೆಲಸ ಮಾಡಿರುವ ವಂಡ್ಸೆ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ, ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಕೊಪ್ಪಾಟೆ ಮುತ್ತ ಗೌಡ ಅವರಿಗೆ ಕಲಾ ರತ್ನ ಪ್ರಶಸ್ತಿ,ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ನಾಗ ಯಕ್ಷಿ ಪಾತ್ರಿ ಹಿಲ್ಕೋಡು ಶ್ರೀಧರ ಮಂಜರಿಗೆ ವಿಶೇಷ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.