![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 25, 2020, 4:09 AM IST
ಬೆಳ್ಮಣ್: ನಿರಂತರ ಸುಡು ಬಿಸಿಲ ಬೇಗೆಗೆ ಜಿಲ್ಲೆಯ ಹೆಚ್ಚಿನ ನದಿಗಳು ಬತ್ತಿ ಹೋಗಿ ಇನ್ನೇನು ಕೆಲವೇ ದಿನಗಳಲ್ಲಿ ನೀರಿನ ಹಾಹಾಕಾರ ಪ್ರಾರಂಭವಾಗಲಿದೆ ಎನ್ನುವಷ್ಟರಲ್ಲಿ ಸಂಕಲಕರಿಯದ ಶಾಂಭವಿ ನದಿ ತುಂಬಿದೆ. ಮಳೆ ಕೊರತೆಯಿಂದಾಗಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿಯೇ ಬತ್ತಿ ಹೋಗಿದ್ದ ಇದೇ ನದಿ ಈ ಬಾರಿ ಮಾರ್ಚ್ ಕೊನೆಯ ವಾರದವರೆಗೂ ತುಂಬಿದೆ. ನದಿಯಲ್ಲಿರುವ ಅಣೆಕಟ್ಟೆಗೆ ಹಲಗೆ ಹಾಕಲಾಗಿದ್ದು, ಸಮರ್ಪಕ ನಿರ್ವಹಣೆಯನ್ನೂ ಮಾಡಲಾಗಿದೆ. ಇದರಿಂದ ನೀರು ತುಂಬಿದೆ.
ಕೃಷಿಕರಿಗೆ ಹರ್ಷ..!
ಈ ಬಾರಿ ಉತ್ತಮ ಮಳೆಯಾದ್ದರಿಂದ ಶಾಂಭವಿ ನದಿಯಲ್ಲಿ ನೀರಿನ ಪ್ರಮಾಣ ಈ ಹಿಂದಿನ ವರ್ಷಗಳಿಗಿಂತ ಅಧಿಕವಾಗಿದೆ. ಸಚ್ಚೇರಿಪೇಟೆ, ಕಡಂದಲೆಯವರೆಗೂ ನೀರು ಏರಿದ್ದು ಮುಂಡ್ಕೂರು, ಸಂಕಲಕರಿಯ, ಏಳಿಂಜೆ, ಐಕಳ,ಪೊಸ್ರಾಲು, ಕೊಟ್ರಪಾಡಿ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಆಧಿಕವಾಗಿದೆ, ಈ ಭಾಗದ ಮನೆಯ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದ್ದು ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇದೇ ರೀತಿಯ ನೀರಿನ ಒರತೆ ಉಳಿದಲ್ಲಿ ಮುಂದಿನ ಬೆಳೆಗೆ ನೇಜಿ ಹಾಕಲು ಇದು ಪೂರಕವಾಗಲಿದೆ. ಸಂಕಲಕರಿಯದ ಸಾಮಾಜಿಕ ಕಳಕಳಿಯ ಸುಧಾಕರ ಸಾಲ್ಯಾನ್ ಎಂಬುವವರು ಇದರ ನಿರ್ವಹಣೆ ಮಾಡುತ್ತಿದ್ದು, ನೀರಿನ ಕೊರತೆ ನೀಗಿಸುವಲ್ಲಿ ಶ್ರಮವಹಿಸಿದ್ದಾರೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.