“ಆಯುರ್ವೇದ ಗ್ರಂಥಗಳಲ್ಲಿ ವಸಂತ ಋತು ವರ್ಣಿಸಲ್ಪಟ್ಟಿದೆ’
Team Udayavani, Mar 23, 2018, 8:20 AM IST
ಕಟಪಾಡಿ: ವಸಂತ ಋತುವಿನ ವರ್ಣನೆ ಆಯುರ್ವೇದ ಗ್ರಂಥಗಳಲ್ಲಿ ಚೆನ್ನಾಗಿ ವರ್ಣಿಸಲ್ಪಟ್ಟಿದೆ ಎಂದು ಎಸ್.ಡಿ.ಎಂ. ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ| ಮುರಳೀಧರ ಆರ್. ಬಲ್ಲಾಳ್ ಹೇಳಿದರು.
ಅವರು ಮಾ.21ರಂದು ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಉದ್ಯಾವರ ಎಸ್.ಡಿ.ಎಂ.ನ ಅಂತಾ ರಾಷ್ಟ್ರೀಯ ಅರಣ್ಯ ದಿನಾಚರಣೆಯ ಪ್ರಯುಕ್ತ ಔಷಧಿ ಸಸ್ಯೋದ್ಯಾನ ರಾಜವನದಲ್ಲಿ ದ್ರವ್ಯಗುಣ ವಿಭಾಗ ಹಾಗೂ ಸಸ್ಯೋದ್ಯಾನ ಸಮಿತಿಯ ಸಹಯೋಗದಲ್ಲಿ ನಡೆದ ವಸಂತೋತ್ಸವ – 2018ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ| ಶ್ರೀಕಾಂತ ಪಿ. ಪ್ರಸ್ತಾವನೆಯಲ್ಲಿ , ಋತುಗಳು ಪ್ರಕೃತಿಯಲ್ಲಿ ಪರಿವರ್ತನೆ ತರುತ್ತವೆ. ದೇಹದಲ್ಲೂ ಪರಿವರ್ತನೆ ಹೊಂದಿ ಅದಕ್ಕೆ ಪೂರಕವಾಗಿ ತಯಾರಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಎಸ್.ಡಿ.ಎಂ. ಸಸ್ಯೋದ್ಯಾನ ಸಮಿತಿಯ ಅಧ್ಯಕ್ಷೆ ಡಾ| ಚೆ„ತ್ರಾ ಎಸ್.ಹೆಬ್ಟಾರ್ ಅರಣ್ಯ-ಜ್ಞಾನದ ಆಗರ ಎಂಬ ವಿಷಯದ ಬಗ್ಗೆ ಉಪನ್ಯಾಸವಿತ್ತರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಹಾಯಕ ಡೀನ್ ಹಾಗೂ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥೆ ಡಾ|ಮಮತಾ ಕೆ.ವಿ, ದ್ರವ್ಯಗುಣ ವಿಭಾಗದ ಸಹಪ್ರಾಧ್ಯಾಪಕ ಡಾ| ಸುಮಾ ವಿ.ಮಲ್ಯ, ಅಗದತಂತ್ರ ವಿಭಾಗದ ಸಹಪ್ರಾಧ್ಯಾಪಕ ಡಾ| ರವಿಕೃಷ್ಣ ಎಸ್., ಇಂತಹ ಸ್ಪರ್ಧೆಗಳು ಪ್ರಕೃತಿ ಪರವಾಗಿದ್ದು ಬೇಸಿಗೆಯಲ್ಲಿ ಹಕ್ಕಿಗಳಿಗೆ ನೀರುಣಿಸಲು ಹಾಗೂ ಕಾಳುಗಳನ್ನು ಹಾಕುವ ಯೋಜನೆಗೆ ಬಳಕೆಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿರುಪಯೋಗಿ ಕಸದಿಂದ ಹಕ್ಕಿಗಳಿಗೆ ನೀರು-ಕಾಳು ಉಣಿಸಲು ಸಹಾಯಕವಾಗುವ ಪರಿಕರಗಳನ್ನು ಸಿದ್ಧಪಡಿಸುವ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪಸ್ಥಿತರಿದ್ದ ಎಲ್ಲರಿಗೂ ಅಗಸ್ಯ ಸ್ನಾತಕ ವಿದ್ಯಾರ್ಥಿಗಳು ವಸಂತ ವಿಶೇಷವಾದ ಪಾನಕವನ್ನು ತಾವೇ ತಯಾರಿಸಿ ವಿತರಿಸಿದರು. ಹಕ್ಕಿಗಳಿಗೂ ನೀರು ಕಾಳುಗಳನ್ನು ಹಾಕಿ ಪ್ರತಿದಿನವೂ ಪಕ್ಷಿ ಸೇವೆಯನ್ನು ಮಾಡುವ ಸಂಕಲ್ಪ ಕೈಗೊಳ್ಳಲಾಯಿತು.
ಸಹಪ್ರಾಧ್ಯಾಪಕರಾದ ಡಾ| ಶ್ರೀನಿಧಿ ಬಲ್ಲಾಳ್, ಡಾ| ರಾಕೇಶ್‌ಆರ್.ಎನ್. ಉಪಸ್ಥಿತರಿದ್ದರು.ದ್ರವ್ಯಗುಣ ವಿಭಾಗದ ಉಪನ್ಯಾಸಕ ಡಾ| ಮೊಹಮ್ಮದ್‌ಫೆ„ಸಲ್ ಸ್ವಾಗತಿಸಿದರು. ಉಪನ್ಯಾಸಕಿ ಡಾ| ನಿವೇದಿತಾ ಶೆಟ್ಟಿ ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ| ಸುಮಾ ಎಚ್.ಆರ್., ಡಾ| ಶಿಫಾ ಶೆಟ್ಟಿ ಪಿ. ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.