ರಾಜ್ಯ ಸರಕಾರ ಕಣ್ಣು ,ಕಿವಿ ಕಳೆದು ಕೊಂಡಿದೆ: ಕೋಟ
Team Udayavani, Aug 17, 2017, 7:15 AM IST
ಕೋಟ: ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಬೇಕಾದ, ಬಡ ವರ್ಗದವರ ಕಷ್ಟದ ಕುರಿತು ದೃಷ್ಠಿ ಹರಿಸಬೇಕಾದ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಣ್ಣು-ಕಿವಿ ಕಳೆದು ಕೊಂಡು ಕುಳಿತಿದೆ. ಇದರಿಂದಾಗಿ ರಾಜ್ಯದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕುಂದಾಪುರ ವತಿಯಿಂದ 94ಸಿ, 94ಸಿಸಿ, ಅಕ್ರಮ ಸಕ್ರಮ, ಹಕ್ಕು ಪತ್ರ, ಪಡಿತರ ಗೊಂದಲ, ಅಸಮರ್ಪಕ ಮರಳು ನೀತಿ ಸೇರಿದಂತೆ ರಾಜ್ಯಸರಕಾರ ಹಾಗೂ ಜಿಲ್ಲಾಡಳಿತದ ಬಡವರ ವಿರೋಧಿ ಧೋರಣೆಯನ್ನು ಖಂಡಿಸಿ ಆ.16ರಂದು ಮಾಬುಕಳದಿಂದ ಕುಂದಾಪುರದ ತನಕ ನಡೆದ ಪಾದಯಾತ್ರೆಯಲ್ಲಿ ಪ್ರಾಸ್ತಾವಿಕ ಮಾತನಾಡಿದರು.
ಹಕ್ಕು ಪತ್ರಕ್ಕಾಗಿ ಉಡುಪಿ ಜಿಲ್ಲೆಯಲ್ಲಿ 32 ಸಾವಿರ ಮಂದಿ ಅರ್ಜಿಸಲ್ಲಿಸಿ ಕಾಯುತ್ತಿದ್ದಾರೆ. ಕುಂದಾಪುರದಲ್ಲಿ 12ಸಾವಿರ ಮಂದಿ ಅರ್ಜಿ ಹಾಕಿದ್ದಾರೆ. ಆದರೆ ಇದುವರೆಗೆ ಇವರಿಗೆ ಹಕ್ಕುಪತ್ರವನ್ನು ನೀಡುವ ಕೆಲಸ ಸರಕಾರ ಮಾಡಿಲ್ಲ. ಪಡಿತರ ಚೀಟಿಯ ಸಮಸ್ಯೆ ದೊಡ್ಡಮಟ್ಟದಲ್ಲಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಜನಸಾಮಾನ್ಯರು ಪಡಿತರ ಚೀಟಿ ನೀಡಿ ಎಂದು ಕೇಳಿದರೆ ಸಚಿವರು ಪಡಿತರ ಅಂಗಡಿಗಳಲ್ಲಿ ವಿಮಾನ ಟಿಕೇಟ್ ನೀಡುವುದಾಗಿ ಮಾತನಾಡುತ್ತಾರೆ. ನಿರಂತರವಾಗಿ ಹಿಂದೂ ಯುವಕರ ಹತ್ಯೆಯಾಗುತ್ತಿದೆ. ಮರಳು ಅಭಾವದಿಂದ ಕಾರ್ಮಿಕರು ತತ್ತರಗೊಂಡಿದ್ದಾರೆ. ಸರಕಾರದ ಇಂಥ ಹತ್ತು ಹಲವು ಸಮಸ್ಯೆಗಳು° ಮುಂದಿಟ್ಟುಕೊಂಡು ಇಂದು ಪಾದಯಾತ್ರೆ ನಡೆಯುತ್ತಿದೆ ಎಂದು ಪೂಜಾರಿಯವರು ತಿಳಿಸಿದರು.
ಜನರಿಗೆ ಮರಳು ಚಿಂತೆ; ಸರಕಾರಕ್ಕೆ ಗುತ್ತಿಗೆ ಚಿಂತೆ : ಕಳೆದ ಒಂದು ವರ್ಷದಿಂದ ಕಾರ್ಮಿಕರು ಮರಳು ಸಮಸ್ಯೆಯಿಂದ ಕೆಲಸವಿಲ್ಲದೆ ತತ್ತರಿಸುತ್ತಿದ್ದಾರೆ. ಕಾನೂನು ತಿದ್ದುಪಡಿಯ ಮೂಲಕ ಮರಳು ಸಮಸ್ಯೆ ಬಗೆಹರಿಸುವ ಎಲ್ಲ ಅವಕಾಶಗಳಿದ್ದರು ಸರಕಾರ ಈ ಕುರಿತು ಯೋಚಿಸಿಲ್ಲ. ಇದೀಗ ವಿದೇಶದಿಂದ ಮರಳು ತರಿಸುವುದಾಗಿ ಹೇಳುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಅವಕಾಶವಿದ್ದರು ಯಾರಿಗೆ ಮರಳು ಗುತ್ತಿಗೆಯನ್ನು ನೀಡಬೇಕು ಎನ್ನುವ ಚಿಂತೆಯಲ್ಲಿಯೇ ಸರಕಾರ ಮುಳುಗಿದೆ ಎಂದು ಮಾಜಿ ಸಚಿವ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪಾದಯಾತ್ರೆಗೆ ಚಾಲನೆ ನೀಡಿದರು.
ಅನಂತರ ಮಾಬುಕಳ, ಸಾಸ್ತಾನ, ಕೋಟ, ತೆಕ್ಕಟ್ಟೆ, ಕೋಟೇಶ್ವರದಲ್ಲಿ ಜನಜಾಗೃತಿ ಸಭೆ ನಡೆದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು ಹಾಗೂ ಕುಂದಾಪುರದಲ್ಲಿ ಪಾದಯಾತ್ರೆ ಸಮಾರೋಪ ಜರಗಿತು.
ಪಾದಯಾತ್ರೆಯ ಸಂದರ್ಭ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಕಿರಣ್ ಕುಮಾರ್, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಹಿಂದುಳಿದ ಮೋರ್ಚಾ ಕುಂದಾಪುರ ಕ್ಷೇತ್ರಾಧ್ಯಕ್ಷ ರವೀಂದ್ರ ತಿಂಗಳಾಯ ಪಡುಕರೆ, ಬಿಜೆಪಿ ಮುಖಂಡರಾದ ಯಶಪಾಲ್ ಸುವರ್ಣ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ಯಾಮಲ ಕುಂದರ್, ಗೀತಾಂಜಲಿ ಸುವರ್ಣ, ನಯನ ಗಣೇಶ್, ಶಂಕರ್ ಪೂಜಾರಿ, ಕಿಶೋರ್ ಕುಮಾರ್ ಕುಂದಾಪುರ, ರಾಜೇಶ ಕಾವೇರಿ, ಜಿ.ಪಂ.ಸದಸ್ಯ ಕೋಟ ರಾಘವೇಂದ್ರ ಕಾಂಚನ್, ಶ್ರೀಲತಾ ಸುರೇಶ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಗಣಪತಿ ಶ್ರೀಯಾನ್, ಶ್ಯಾಮ್ ಸುಂದರ್ ನಾೖರಿ, ವಿಟuಲ ಪೂಜಾರಿ ಸಾಸ್ತಾನ, ತಾ.ಪಂ.ಸದಸ್ಯ ಜ್ಯೋತಿ ಉದಯ್ ಪೂಜಾರಿ, ಮಹೇಶ್ ಪೂಜಾರಿ, ಶಂಕರ್ ಅಂಕದಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.