ಗ್ರಾಮೀಣ ಅಂಚೆ ನೌಕರರ ಮುಷ್ಕರ
Team Udayavani, Aug 17, 2017, 7:25 AM IST
ಉಡುಪಿ: ಕಮಲೇಶ್‌ಚಂದ್ರ ವರದಿ ಕೂಡಲೇ ಅನುಷ್ಠಾನವಾಗಬೇಕು. ಜಿಡಿಎಸ್ ನೌಕರರಿಗೆ 8ಗಂಟೆ ಖಾಯಂ ನೌಕರಾತಿ ಪರಿಗಣಿಸಬೇಕು. ನಿಚ್ಚಳ ನಿವೃತ್ತಿ ವೇತನ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಸದಸ್ಯರು ಆ. 16ರಂದು ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ಧಿಷ್ಠಾವಧಿ ಮುಷ್ಕರವನ್ನು ಆರಂಭಿಸಿದರು.
ಇಲಾಖಾ ವರಿಷ್ಠರು 2011ರಲ್ಲಿ ಆದೇಶ ಮಾಡಿದಂತೆ ಮಾರ್ಚ್ 2014ರ ಅನಂತರ ನಿವೃತ್ತರಾಗುವ ನೌಕರರಿಗೆ ನಿವೃತ್ತಿ ವೇತನ ನೀಡಬೇಕು ಹಾಗೂ ಅಧಿಕಾರಿಗಳು ಟಾರ್ಗೆಟ್‌ನೆಪದಲ್ಲಿ ನೌಕರರ ಮೇಲೆ ಮಾಡುವ ಶೋಷಣೆಯನ್ನು ನಿಲ್ಲಿಸಬೇಕೆಂದು ಸದಸ್ಯರು ಬೇಡಿಕೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬಸವ ಬಿಲ್ಲವ, ಕಾರ್ಯದರ್ಶಿ ಸಂತೋಷ್ ಮಧ್ಯಸ್ಥ, ಕೋಶಾಧಿಕಾರಿ ರಾಮನಾಥ ಪ್ರಮುಖರಾದ ಪ್ರಮೀಳಾ ಫೆರ್ನಾಂಡಿಸ್, ಅನಿತಾ, ಪೂರ್ಣಿಮಾ, ಶಕುಂತಳಾ, ಮೊಯ್ಲಿ, ರೈತಸಂಘದ ರಂಗನಾಥ ಶೆಟ್ಟಿ, ಭಾಸ್ಕರ ಶೆಟ್ಟಿ, ಶಂಕರ್ ಶೆಟ್ಟಿ, ಇಸಿ ಸದಸ್ಯ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.