ಆಗಿರುವ ಕೆಲಸವೇ ಪ್ರಚಾರಕ್ಕೆ ವಸ್ತು


Team Udayavani, Mar 18, 2018, 8:00 AM IST

Amrit-Shenoy.jpg

ಕಾಂಗ್ರೆಸ್‌ನ ಪ್ರಭಾವಿ ಯುವನಾಯಕನೆಂದು ಗುರುತಿಸಲ್ಪಟ್ಟಿರುವ, ಮಾತಿನಲ್ಲೇ ಕಾರ್ಯಕರ್ತರನ್ನು ಆಕರ್ಷಿಸಬಲ್ಲ ಶಕ್ತಿ ಹೊಂದಿರುವ ಅಮೃತ್‌ ಶೆಣೈ ಅವರು ಮೊನ್ನೆ ಮೊನ್ನೆ ಎಐಸಿಸಿ ಸದಸ್ಯರಾಗಿ ನೇಮಕಗೊಂಡವರು. ರಾಜ್ಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ, ಉಡುಪಿ-ಚಿಕ್ಕಮಗಳೂರು ಯುವ ಕಾಂಗ್ರೆಸ್‌ ಉಪಾಧ್ಯಕ್ಷರಾಗಿ, ಮಂಗಳೂರು ವಿ.ವಿ. ಸೆನೆಟ್‌ ಸದಸ್ಯರಾಗಿ ದುಡಿದಿರುವ ಅಮೃತ್‌ ಶೆಣೈ ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪ್ರಚಾರ ಸಮಿತಿಯ ಉಸ್ತುವಾರಿ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ. ರಾಜ್ಯ ಸರಕಾರ, ಅದರಲ್ಲೂ ವಿಶೇಷವಾಗಿ ಪ್ರಮೋದ್‌ ಮಧ್ವರಾಜ್‌ ಅವರು ಮಾಡಿರುವ ಜನಪರ ಕೆಲಸಗಳೇ ನಮ್ಮ ಪ್ರಚಾರದ ಮುಖ್ಯ ವಿಷಯ ಎನ್ನುತ್ತಾರೆ ಅಮೃತ್‌ ಶೆಣೈ.

ಪ್ರಚಾರ ಯಾವ ರೀತಿ?
ಈಗಾಗಲೇ ಬೂತ್‌ ಸಮಿತಿ ಸಭೆಗಳು ಶೇ. 90ರಷ್ಟು ಮುಗಿದಿವೆ. ಬೂತ್‌ ಮಟ್ಟದಲ್ಲಿ ವಿವಿಧ ಘಟಕಗಳನ್ನು ರಚಿಸಲಾಗಿದ್ದು ಅವರೆಲ್ಲರೂ ಕೂಡ ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.  ವಾಟ್ಸಪ್‌, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸೂಕ್ತ ರೀತಿಯ ಪ್ರಚಾರ ಮಾಡುತ್ತಿದ್ದೇವೆ.

ಪ್ರಮೋದ್‌ ಮಧ್ವರಾಜ್‌ ಅಂಥದ್ದೇನು ಮಾಡಿದ್ದಾರೆ?
24 ಗಂಟೆ ವಿದ್ಯುತ್‌ ದೊರೆಯುತ್ತಿದೆ. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ವಾರಾಹಿಯಿಂದ ನೀರು ತರುವ ಯೋಜನೆಗೆ ಚಾಲನೆ ಸಿಕ್ಕಿದೆ. 18,000 ಕುಟುಂಬಗಳಿಗೆ ಬಿಪಿಎಲ್‌ ನೀಡಲಾಗಿದೆ. ಪಡುಕರೆ ಸೇತುವೆ, ಬೀಡಿನಗುಡ್ಡೆ ಬಯಲು ರಂಗಮಂಟಪ, ಕ್ರೀಡಾಂಗಣ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಹಕ್ಕುಪತ್ರ ವಿತರಣೆ ಇತ್ಯಾದಿ ಜನಪರ ಕೆಲಸಗಳು ಆಗಿವೆ. ಬಿ.ಆರ್‌.ಶೆಟ್ಟಿ ಅವರೊಂದಿಗಿನ ಒಪ್ಪಂದದಿಂದಾಗಿ ಉತ್ತಮ ಆಸ್ಪತ್ರೆ ದೊರೆಯುವಂತಾಗಿದೆ. ರಾಜ್ಯ ಸರಕಾರದ ಇತರ ಯೋಜನೆಗಳು ಕೂಡ ಉಡುಪಿಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನವಾಗಿವೆ.

ಸಚಿವರು ಉಡುಪಿಗೆ ಸೀಮಿತರಾಗಿದ್ದಾರಾ?
ಹಾಗೇನಿಲ್ಲ. ಉಡುಪಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲ ಕಡೆ ಗಮನ ಹರಿಸಿದ್ದಾರೆ. ಜನಬೆಂಬಲ ದೊರೆಯುತ್ತಿದೆ.ನೀವೂ ಕೂಡ ಹಿಂದೆ ಆಕಾಂಕ್ಷಿ ಎಂಬ ಮಾತುಗಳಿದ್ದವು…ನಾನಾಗಿ ಸ್ಥಾನಮಾನ, ಪಕ್ಷದ ಟಿಕೆಟ್‌ ಕೇಳಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಅವಕಾಶ ನೀಡಬೇಕೆಂಬ ಬೇಡಿಕೆ ನನ್ನ ಬೆಂಬಲಿಗರದ್ದು. ನನಗೆ ಇಷ್ಟರ ವರೆಗೆ ಕೇಳದೆಯೇ ದೇವರು ಕೊಡುತ್ತಾ ಬಂದಿದ್ದಾನೆ.

ಉಡುಪಿಯಲ್ಲಿ ಕೆಲಸ ಬಾಕಿ ಇಲ್ಲವೆ?
ಹೆಚ್ಚಿನ ಕೆಲಸಗಳು ಪ್ರಮೋದ್‌ ಅವರಿಂದ ನಡೆದಿವೆ. ಕುಡಿಯುವ ನೀರಿನ ಯೋಜನೆಯಂಥ ಕೆಲವು ಕಾಮಗಾರಿಗಳು ಆರಂಭಗೊಂಡಿವೆ ಮಾತ್ರ. ಅವು ಪೂರ್ಣಗೊಳ್ಳಬೇಕಿದೆ. ಉಳಿದಂತೆ ಸಮರ್ಪಕ ಒಳಚರಂಡಿ ಮತ್ತಿತರ ಕೆಲಸಗಳು ನಡೆಯಬೇಕಿವೆ.

– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.