ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ ಮರ-ವಿದ್ಯುತ್ ಕಂಬ
Team Udayavani, May 6, 2019, 6:30 AM IST
ಕಾರ್ಕಳ: ಮುರತ್ತಂಗಡಿ – ಇರ್ವತ್ತೂರು ಸಂಪರ್ಕಿಸುವ ಕುಕ್ಕೆಟ್ಟೆ ಎಂಬಲ್ಲಿ ರಸ್ತೆ ಬದಿ ಮರಗಳು ಹಾಗೂ ವಿದ್ಯುತ್ ಕಂಬ ಬೀಳುವಂತೆ ಇದೆ. ಮರ ಬಿದ್ದಲ್ಲಿ ವಿದ್ಯುತ್ ತಂತಿ ಮೇಲೆಯೇ ಬೀಳುವ ಸಾಧ್ಯತೆ ಅಧಿಕವಾಗಿದೆ.
ಮುರತ್ತಂಗಡಿಯಿಂದ ಇರ್ವತ್ತೂರು ಜಂಕ್ಷನ್ ವರೆಗಿನ ಸುಮಾರು 3.5 ಕಿ.ಮೀ. ರಸ್ತೆಯು ಸಿಆರ್‌ಎಫ್ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 5 ಕೋಟಿ ರೂ. ಅನುದಾನದಲ್ಲಿ ರಸ್ತೆ ವಿಸ್ತರಣೆಯೊಂದಿಗೆ ಕಾಂಕ್ರೀಟೀಕರಣ ಗೊಳ್ಳುತ್ತಿದೆ.
ಈ ಪ್ರದೇಶದಲ್ಲಿ ಏರಿನ ರಸ್ತೆ ತಗ್ಗಿಸಲಾಗಿದೆ. ಈ ವೇಳೆ ರಸ್ತೆಯಂಚಿನಲ್ಲಿದ್ದ ಮರಗಳು, ವಿದ್ಯುತ್ ಕಂಬ ಅಪಾಯಕ್ಕೆಡೆಮಾಡಿದೆ.
ಆಮೆಗತಿ ಕಾಮಗಾರಿ
ಟೆಂಡರ್ ನಿಯಮಾನುಸಾರ 3.5 ಕೀ.ಮಿ. ರಸ್ತೆ ಅಭಿವೃದ್ಧಿಗೊಳಿಸಲು 6 ತಿಂಗಳು ಕಾಲಾವಕಾಶವಿದೆ. ಆದರೆ, ಗುತ್ತಿಗೆದಾರರು ವರ್ಷವಾದರೂ ಕಾಮ ಗಾರಿ ಪೂರ್ಣಗೊಳಿಸಿಲ್ಲ. ಕಾಮಗಾರಿ ನಡೆ ಯುತ್ತಿರುವದರಿಂದ ಇಲ್ಲಿನ ಜನತೆ ರೋಸಿ ಹೋಗಿದ್ದಾರೆ.
ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದರೆ ಈ ಪ್ರದೇಶ ಕೆಸರು ಗದ್ದೆಯಂತಾಗುತ್ತಿದೆ. ಕಳೆದ ವರ್ಷ ಅದೆಷ್ಟೋ ಮಂದಿ ದ್ವಿಚಕ್ರ ಸವಾರರು ಜಾರಿ ಬಿದ್ದಿದ್ದಾರೆ. ಮಳೆಗಾಲದಲ್ಲಿ ಕೆಸರಾದರೆ, ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ವಸಂತ ಪೈ.
ಕ್ರಮ ಕೈಗೊಳ್ಳುತ್ತೇವೆ
ವಿದ್ಯುತ್ ಕಂಬ ಶಿಫ್ಟ್ ಮಾಡುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಮರ ಕಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗುವುದು.
-ನಾಗರಾಜ್ ನಾಯಕ್, ರಾ.ಹೆ. ಎಂಜಿನಿಯರ್
ಒತ್ತಡ ಹೇರಲಾಗುವುದು
ನಿಧಾನಗತಿ ಕಾಮಗಾರಿಯಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಕುರಿತು ಪದೇ ಪದೇ ಎಂಜಿನಿಯರ್ ಗಮನಕ್ಕೆ ತಂದಾಗ ಮರಳು ಸಿಗುತ್ತಿಲ್ಲ ಎಂಬ ಕಾರಣ ನೀಡುತ್ತಿದ್ದರು. ಇದೀಗ ನೀರಿನ ಅಭಾವವೆನ್ನುತ್ತಾರೆ. ಅಪಾಯಕಾರಿಯಾಗಿರುವ ಮರ ಮತ್ತು ವಿದ್ಯುತ್ ಕಂಬ ತೆರವುಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಮೇಲೆ ಒತ್ತಡ ಹೇರಲಾಗುವುದು.
– ದಿವ್ಯಾ ಗಿರೀಶ್ ಅಮೀನ್, ಜಿ.ಪಂ. ಸದಸ್ಯರು, ಮಿಯ್ನಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.