ಕಲ್ಮಾಡಿ ಪಂದುಬೆಟ್ಟು ಮುಖ್ಯರಸ್ತೆಯ ಇಕ್ಕೆಲಗಳು ತ್ಯಾಜ್ಯದ ಆಗರ
Team Udayavani, Jan 18, 2019, 12:50 AM IST
ಮಲ್ಪೆ: ಮಹತ್ವದ ಸಂಕಲ್ಪ ಯೋಜನೆಯಾದ ಸ್ವತ್ಛ ಭಾರತ ನಮ್ಮ ಉಡುಪಿಯಲ್ಲಿ ಇನ್ನೂ ಸಾಕಾರಕ್ಕೆ ಬಂದಿಲ್ಲ ಎಂಬುದು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರಮುಖ ರಸ್ತೆಯನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಎಲ್ಲೆಂದರಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುವ ಪ್ರವೃತ್ತಿ ಇನ್ನೂ ಮುಂದುವರಿದೆ.
ಕಲ್ಮಾಡಿಯಲ್ಲಿ ಡಂಪಿಂಗ್ ಯಾರ್ಡ್?
ಆದಿವುಡುಪಿಯಿಂದ ಮಲ್ಪೆಗೆ ಬರುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲೂ ಕಸ ರಾರಾಜಿಸುತ್ತಿದೆ. ಕಲ್ಮಾಡಿ ಚರ್ಚ್ ಸಮೀಪದ ಒಂದು ಕಡೆ ಡಂಪಿಂಗ್ ಯಾರ್ಡ್ ನಿರ್ಮಾಣಗೊಳ್ಳುತ್ತಿದೆ. ಈ ಭಾಗದಲ್ಲಿ ರಾತ್ರಿ ಸ್ವಲ್ಪ ಕತ್ತಲು ಇರುವುದರಿಂದ ಕಸ ಎಸೆಯುವವರಿಗೆ ವರದಾನವಾಗಿದೆ. ರಸ್ತೆಗಳು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಈ ಭಾಗದಲ್ಲಿ ಸುರಿದ ಕಸದ ರಾಶಿಯನ್ನು ತೆರವುಗೊಳಿಸದೆ ಎರಡು ಮೂರು ತಿಂಗಳು ಕಳೆದು ಹೋಗಿದ್ದು, ಪರಿಹಾರವೇ ಕಂಡುಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಪಂದುಬೆಟ್ಟುವಿನಿಂದ ಕಲ್ಮಾಡಿವರೆಗಿನ ರಸ್ತೆಯ ಇಕ್ಕೆಲಗಳು ಸಾರ್ವಜನಿಕ ಕಸ ಎಸೆಯುವ ಸ್ಥಳವಾಗಿ ಗುರುತಿಸಿಕೊಂಡಿದೆ. ರಾತ್ರಿ ಹೊತ್ತಲ್ಲಿ ಬಂದು ಕಸವನ್ನು ಎಸೆದು ಹೋಗುವುದು ವಾಡಿಕೆಯಾಗಿದೆ.
ಸಾಂಕ್ರಾಮಿಕ ರೋಗ ಭೀತಿ
ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಹೋಗುವ ಪ್ರವೃತ್ತಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರು ವುದು ನಗರ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವುದರ ಜತೆಗೆ ಸಮಸ್ಯೆ ಸೃಷ್ಟಿಸುತ್ತದೆ.
ಕೊಳೆತ ತ್ಯಾಜ್ಯಗಳನ್ನು ನಾಯಿಗಳು ಕಾಗೆಗಳು ಹೆಕ್ಕಿ, ಕುಕ್ಕಿ ತಿನ್ನುತ್ತಾ ಎಲ್ಲಡೆ ಎಸೆಯುವುದರಿಂದ ಪರಿಸರದಲ್ಲಿ ರೋಗ ಹರಡುವ ಭೀತಿ ಎದುರಾಗಿದೆ.
ಕಟ್ಟು ಕಟ್ಟು ಕಸ
ಸಂಬಂಧಪಟ್ಟ ಆಡಳಿತ ಎರಡು ಮೂರು ದಿನಕ್ಕೆ ಕಸವನ್ನು ತೆರವುಗೊಳಿಸಿದರೂ ತೆರವುಗೊಳಿಸಿ ಮಾರನೇ ದಿನವೇ ಅಷ್ಟೆ ಎತ್ತರದಲ್ಲಿ ಕಸದ ರಾಶಿ ಪ್ರತ್ಯಕ್ಷವಾಗುವುದು ಆಡಳಿತಕ್ಕೆ ತಲೆನೋವಾಗಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ದ ಕಠಿನ ಕ್ರಮ ಕೈಗೊಳ್ಳುವ ಆದೇಶಗಳು, ಜನಜಾಗೃತಿ ಮೂಡಿಸುವ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದರೂ ಜನ ತಮ್ಮ ಎಂದಿನ ಚಾಳಿಯನ್ನು ಬಿಡದೆ ಗೋಣಿ ಚೀಲದಲ್ಲಿ ತಂದು ಎಸೆದು ಹೋಗುವ ಜನರ ವರ್ತನೆಗೆ ಆಡಳಿತ ವ್ಯವಸ್ಥೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಈ ಕಾರಣದಿಂದಲೇ ತ್ಯಾಜ್ಯ ಮತ್ತೆ ಮತ್ತೆ ರಸ್ತೆ ಬದಿಯಲ್ಲಿ ರಾಶಿ ಬೀಳುತ್ತಿದೆ.
ಪತ್ತೆ ಹಚ್ಚಲು ನಿರ್ಧಾರ
ಹಲವಾರು ಬಾರಿ ಇಲ್ಲಿನ ಕಸವನ್ನು ಸ್ಥಳೀಯರೇ ತೆರವು ಮಾಡಿದ್ದರು. ಆದರೆ ಮರುದಿನ ಮತ್ತೆ ಅಷ್ಟೆ ಕಸ ಬಂದು ಬೀಳುತ್ತಿತ್ತು. ನಗರದ ಸ್ವತ್ಛತೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಬೇಕಾಬಿಟ್ಟಿಯಾಗಿ ಕಸ ಎಸೆಯುವ ಆನಾಗರಿಕರಾಗಿ ವರ್ತಿಸುವ ಇಂತವರನ್ನು ಮುಂದೆ ಕಾದು ಕುಳಿತು ಪತ್ತೆ ಹಚ್ಚಲು ಸ್ಥಳೀಯರು ಮುಂದಾಗಿದ್ದಾರೆ.
ಕಸ ಎಸೆದವರಿಂದಲೇ ತೆರವುಗೊಳಿಸುತ್ತೇವೆ
ಹಲವಾರು ಬಾರಿ ಇಲ್ಲಿನ ಕಸವನ್ನು ಸ್ಥಳೀಯರೇ ಶ್ರಮದಾನದ ಮೂಲಕ ತೆರವು ಮಾಡಿದ್ದರು. ಆದರೆ ಮರುದಿನ ಮತ್ತೆ ಅಷ್ಟೆ ಕಸ ಬಂದು ಬೀಳುತ್ತಿತ್ತು. ನಗರದ ಸ್ವತ್ಛತೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಬೇಕಾಬಿಟ್ಟಿಯಾಗಿ
ಕಸ ಎಸೆಯುವ ಅನಾಗರಿಕರಾಗಿ ವರ್ತಿಸುವ ಇಂತಹವರನ್ನು ಮುಂದೆ ರಾತ್ರಿ ಪೂರ್ತಿ ಕಾದು ಕುಳಿತು ಪತ್ತೆ ಹಚ್ಚಿ ಅವರಿಂದಲೇ ಕಸ ತೆಗಿಸಲು ಮುಂದಾಗಿದ್ದೇವೆ.
-ಸುಂದರ್ ಜೆ. ಕಲ್ಮಾಡಿ, ನಗರಸಭಾ ಸದಸ್ಯ
ಸೂಕ್ತ ಕ್ರಮಕ್ಕೆ ನಿರ್ಧಾರ
ಕಸ ವಿಲೇವಾರಿಗೆ ಪಂಚಾಯತ್‌ನಿಂದ ಯಾವುದೇ ವ್ಯವಸ್ಥೆ ಇಲ್ಲ. ಹಿಂದೆ ನಗರಸಭೆಗೆ ಹೇಳಿ ವಿಲೇವಾರಿ ಮಾಡಲಾಗುತ್ತಿತ್ತು. ಇದೀಗ ಎರಡು ತಿಂಗಳಿನಿಂದ ಕಸ ಬಾಕಿ ಉಳಿದಿದೆ. ಪಂಚಾಯತ್ ಮುಖಾಂತರ ಸಿಬಂದಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಶ್ರಮದಾನದ ಮೂಲಕ ಕಸ ತೆರವು ಮಾಡಲು ನಿರ್ಧರಿಸಲಾಗಿದ್ದು, ಮುಂದೆ ಇಲ್ಲಿ ಕಸ ಎಸೆಯುವವರ ವಿರುದ್ದವೂ ಸೂಕ್ತ ಕ್ರಮ ತೆಗೆದುಕೊಳ್ಳುವ ತೀರ್ಮಾನವನ್ನು ಕೈಗೊಂಡಿದ್ದೇವೆ.
– ವಸಂತಿ, ಪಿಡಿಒ, ಅಂಬಲಪಾಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.