ನಿಯಮ ಗಾಳಿಗೆ ತೂರಿ ಕಲ್ಲು ಬಂಡೆ ಸಿಡಿತ: ಪ್ರತಿಭಟನೆ
Team Udayavani, Feb 25, 2017, 12:13 PM IST
ಕುಂದಾಪುರ: ಕುಂದಾಪುರ ಗ್ರಾಮದ ಯಡಾಡಿ ಮತ್ಯಾಡಿ ಗ್ರಾಮದ ಹಳನೀರು ಪ್ರದೇಶದಲ್ಲಿ ವಾರಾಹಿ ನೀರಾವರಿ ನಿಗಮ ನಿಯಮಿತ ಉಪಕಾಲುವೆ 31ರಲ್ಲಿ ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿ ಕಾಲುವೆಯಲ್ಲಿ ಎದುರಾದ ಬಂಡೆಗಳನ್ನು ನ್ಪೋಟಿಸಿದ್ದರಿಂದ ಸುಮಾರು 1ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವವರಿಗೆ ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ಉಗ್ರವಾಗಿ ಪ್ರತಿಭಟಿಸಿದರು.
ಕಾಮಗಾರಿಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಒಮ್ಮೆಲೆ 3-4 ಕಂಪ್ರಸರ್ ಒಟ್ಟಾಗಿ ಸುಮಾರು 100ರಿಂದ 200 ಗುಳಿಗಳನ್ನು ನಿಯಮದಂತೆ ಮಾಡದೆ ಅದಕ್ಕಿಂತಲೂ ಹೆಚ್ಚಿನ ಆಳದ ಗುಳಿಗಳನ್ನು ತೋಡಿ ಸ್ಫೋಟಿಸಿದ್ದರಿಂದ ತೊಂದರೆ ಆಗುತ್ತಿರುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ. ಸ್ಫೋಟದ ವೇಳೆ ಗುಳಿಗಳನ್ನು ಮರಳು ಚೀಲದಿಂದ ಮುಚ್ಚದೆ ಏಕಾಏಕಿ ಸ್ಫೋಟಿಸಿರುವುದರಿಂದ ಅಪಾಯ ಹೆಚ್ಚು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಪ್ರತಿಭಟನೆಯಲ್ಲಿ ತಾ.ಪಂ. ಅಧ್ಯಕ್ಷೆ ಜಯಶ್ರೀ ಸುಧಾಕರ, ತಾ.ಪಂ. ಮಾಜಿ ಸದಸ್ಯ ರಮೇಶ ಶೆಟ್ಟಿ ಹಾಲಾಡಿ, ಹೊಂಬಾಡಿ ಮಂಡಾಡಿ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಪೂಜಾರಿ, ಗ್ರಾ.ಪಂ. ಸದಸ್ಯ ಬಿ. ಅರುಣ ಕುಮಾರ ಹೆಗ್ಡೆ, ಮಾಜಿ ಗ್ರಾ.ಪಂ ಅಧ್ಯಕ್ಷ ಗಣೇಶ ಶೆಟ್ಟಿ, ಆನಂದ ಮೊಗವೀರ, ಬಾಲಕೃಷ್ಣ ಶೆಟ್ಟಿ, ತಾ| ರೈತಮೋರ್ಚಾ ಅಧ್ಯಕ್ಷ ನರಾಡಿ ಬಾಲಕೃಷ್ಣ ಶೆಟ್ಟಿ, ಎಪಿಎಮ್‌ಸಿ ಮಾಜ ಅಧ್ಯಕ್ಷ ದೀನ್‌ಪಾಲ್ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಯಮ ಗಾಳಿಗೆ ತೂರಿ ಬಂಡೆ ಸ್ಫೋಟಿಸಿದ ಬಗ್ಗೆ ಬೇಸರವಾಗಿದೆ. ಗ್ರಾಮಸ್ಥರಿಗೆ ಉಂಟಾದ ತೊಂದರೆಯನ್ನು ಸರಿಪಡಿಸಲು ಫೆ. 27ರಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಮುಂದಿನ ಕಾರ್ಯ ನಡೆಸುವಂತೆ ಸೂಚಿಸುವೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.