ಪತಿಯ ಗೆಲುವಿಗೆ ಮಹಿಳಾ ತಂಡ ಕಟ್ಟಿ ಮತ ಯಾಚಿಸಿದ್ದೆ
Team Udayavani, Apr 6, 2018, 7:05 AM IST
ಕೋಟ: ಸಾಸ್ತಾನದ ಪಿ. ಬಸವರಾಜ್ 1985ರಲ್ಲಿ ಹಾಗೂ 1989ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅನಂತರ 1994ರಲ್ಲಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಸೋತು ತೆರೆಮರೆಗೆ ಸರಿದರು. ಪತಿಯ ರಾಜಕೀಯ ಜೀವನದ ಕುರಿತು ಪತ್ನಿ ಅನಸೂಯ ಬಿ. ರಾಜ್ ಉದಯವಾಣಿಯೊಂದಿಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚುನಾವಣೆ ಪ್ರಚಾರದ ಸಂದರ್ಭ ನಾನು ಮಹಿಳೆಯರ ತಂಡ ಕಟ್ಟಿಕೊಂಡು ಬೇರೆ-ಬೇರೆ ಊರುಗಳಿಗೆ ತೆರಳಿ ನಮ್ಮವರಿಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದೆ. ನಾನು ಸ್ಥಳೀಯ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿದ್ದರಿಂದ ಮಹಿಳೆಯರನ್ನು ಸಂಘಟಿಸುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ ಎನ್ನುತ್ತಾರೆ ಅನಸೂಯ.
ಗೆದ್ದ ಮೇಲೆ ಜನಸೇವೆಗೆ ಸಹಾಯ
ಆ ದಿನಗಳಲ್ಲಿ ತಮ್ಮ ಅಹವಾಲುಗಳನ್ನು ಹಿಡಿದುಕೊಂಡು ಮನೆ ಬಾಗಿಲಿಗೆ ಬರುವ ಜನತೆಯನ್ನು ಗುರುತಿಸಿ ಆತ್ಮೀಯವಾಗಿ ಮಾತನಾಡಿಸುವುದೇ ಖುಷಿಯ ಸಂಗತಿಯಾಗಿತ್ತು. ಕೆಲವು ಮಹಿಳೆಯರು ತಮ್ಮ ಕೆಲಸಗಳಿಗಾಗಿ ನನ್ನನ್ನೇ ಅರಸಿ ಬರುತ್ತಿ ದ್ದರು ಎಂದು ಖುಷಿಯಿಂದ ಹೇಳುತ್ತಾರೆ.
ಹುರಿಹಗ್ಗದ ಕೈಗಾರಿಕೆ ಹಿಂದೆ ಪತ್ನಿ
ಮಹಿಳೆಯರ ಸ್ವ ಉದ್ಯೋಗಕ್ಕೆ ಅನುಕೂಲ ವಾಗುವಂತೆ ಹಾಗೂ ತರಬೇತಿ ಪಡೆಯುವ ಮಹಿಳೆಯರಿಗೆ ಸರಕಾರದಿಂದ ಅನುದಾನ ಬರುವ ರೀತಿ ಹುರಿ ಹಗ್ಗದ ಕಾರ್ಖಾನೆ ಸ್ಥಾಪಿಸಬೇಕು ಎಂದು ಅನಸೂಯಾ ಪತಿ ಯನ್ನು ಒತ್ತಾಯಿಸುತ್ತಿದ್ದರಂತೆ. ಅದರಂತೆ ಪಾಂಡೇಶ್ವರದಲ್ಲಿ ಸರಕಾರಿ ಪ್ರಾಯೋಜಿತ ಹುರಿಹಗ್ಗದ ಕೈಗಾರಿಕೆ ಸ್ಥಾಪನೆಗೊಂಡಿತು. ಅದು ಆ ಕಾಲದಲ್ಲಿ ಮಹಿಳೆಯರು ಸ್ವಾವಲಂಬಿ ಗಳಾಗುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಸೋತಾಗ ಸಮಾಧಾನ
ನಾನು ಸದಾ ಕಾಲ ಜನಸೇವೆಯಲ್ಲಿ ತೊಡಗಿಕೊಳ್ಳುವಂತೆ ಹಾಗೂ ಸಂಸಾರದ ಜವಾಬ್ದಾರಿ ಹೆಚ್ಚಿನ ಮಟ್ಟಿಗೆ ನನ್ನ ಹೆಗಲಿಗೆ ಬೀಳದಂತೆ ನನ್ನಾಕೆ ಎಚ್ಚರ ವಹಿಸುತ್ತಿದ್ದಳು. 1994ರ ಚುನಾವಣೆಯಲ್ಲಿ ಸೋತಾಗ “ಇಷ್ಟು ದಿನ ಜನ ನಮಗೆ ಅವಕಾಶ ನೀಡಿದ್ದರು; ಈಗ ಬೇರೆಯವರಿಗೆ ನೀಡಿದ್ದಾರೆ. ಅದರಿಂದ ಹತಾಶರಾಗುವುದು ಬೇಡ’ ಎಂದು ಸಮಾಧಾನಿಸಿ ದೈರ್ಯ ತುಂಬಿದ್ದಳು ಎಂದು ಬಸವರಾಜ್ ನೆನಪಿಸಿಕೊಳ್ಳುತ್ತಾರೆ.
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.