“ರಂಗಭೂಮಿ ನಾಟಕಗಳಿಗೆ ಪ್ರೇಕ್ಷಕ ವರ್ಗ ಮಾನದಂಡವಲ್ಲ’


Team Udayavani, Mar 25, 2018, 6:55 AM IST

Suresh-Anagalli.jpg

ಕುಂದಾಪುರದಲ್ಲಿ ರಂಗ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಭಾರತೀಯ ರಂಗ ಮಹೋತ್ಸವದಲ್ಲಿ  ಸುರೇಶ್‌ ಆನಗಳ್ಳಿ  ಅವರ ನಿರ್ದೇಶನದಲ್ಲಿ ಮಹಾರಾಜ ಉಬು ನಾಟಕ ಪ್ರದರ್ಶನಗೊಂಡಿತು. ಈ ಸಂದರ್ಭ ಉದಯವಾಣಿಯೊಂದಿಗೆ ಅವರ ಮಾತುಕತೆ.

ಸೂಕ್ಷ್ಮಸಂವೇದನೆಯ ನಾಟಕಗಳಿಗೆ ಪ್ರೇಕ್ಷಕ ವರ್ಗದ ಅಭಾವ ಇದೆಯಾ? 
    ಇಲ್ಲ. ಸಿನೆಮಾ ಅಥವಾ ತುಳು ಹಾಸ್ಯ ನಾಟಕಗಳನ್ನು ನೂರು ಜನ ನೋಡುವುದಕ್ಕೂ, ರಂಗಭೂಮಿಯ ಸೂಕ್ಷ್ಮ ಸಂವೇದನಾ ನಾಟಕಗಳನ್ನು 10 ಪ್ರಬುದ್ಧ ವೀಕ್ಷಕರು ನೋಡುವುದಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ. 

ನಾಟಕಗಳನ್ನು ಹೆಚ್ಚು ಆಕರ್ಷಣೀಯವಾಗಿಸ ಬೇಕೇ? 
    ಯಕ್ಷಗಾನ, ನಾಗಮಂಡಲ, ಹೊಸ ಸಂವೇದನೆ ನಾಟಕಗಳೆಲ್ಲವೂ ರಂಗಭೂಮಿ. ಯಕ್ಷಗಾನ, ನಾಗಮಂಡಲ ಜಿಲ್ಲೆಯಲ್ಲಿ ತುಂಬ ಪ್ರಭಾವ ಬೀರಿದೆ. ಇದನ್ನು ಕೆಲವರು ಧಾರ್ಮಿಕ ನೆಲೆಯಲ್ಲಿ ಕಂಡರೆ, ಇನ್ನು ಕೆಲವರು ಬೇರೆ ಆಯಾಮದಲ್ಲಿ ನೋಡುತ್ತಾರೆ. ಇದು ಜನರ ಮನಸ್ಥಿತಿಗೆ ಬಿಟ್ಟ ವಿಚಾರ. ಹಾಗಂತ ಹೊಸ ಸಂವೇದನೆ ಅಥವಾ ಸೂಕ್ಷ್ಮ ಸಂವೇದನೆ ನಾಟಕಗಳಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯ ಇಲ್ಲ. ಅದರ ಪ್ರೇಕ್ಷಕ ವರ್ಗವೇ ಬೇರೆ. 

ಕನ್ನಡದ ಲೇಖಕರ ಬದಲು ಇಂಗ್ಲಿಷ್‌ ಲೇಖಕರ ಕತೆ, ಕಾದಂಬರಿ, ಕೃತಿಗಳೇ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇದೂ ಪ್ರೇಕ್ಷಕರು ದೂರ ವಿರಲು ಕಾರಣವಿರಬಹುದೇ? 
   ಷೇಕ್ಸ್‌ಪಿಯರ್‌, ಕಾಳಿದಾಸ ಬರೆದಿರುವ ಕೃತಿಗಳು ಅಂದಿಗೂ, ಇಂದಿಗೂ, ಎಂದಿಗೂ ಪ್ರಸ್ತುತ. ಬೆಂಗಳೂರಿನಲ್ಲೇ ದಿನಕ್ಕೆ 5 ರಿಂದ 8 ನಾಟಕಗಳು ಬೇಕಾಗಿವೆ. ಕನ್ನಡದ ಲೇಖಕರಾದ ಕಂಬಾರರು, ಕಾರ್ನಾಡರು ವರ್ಷಕ್ಕೆ 8-10 ಕೃತಿಗಳು ಬರೆದರೆ ಅದು ಸಾಕಾಗದು. ರಂಗಭೂಮಿ ನಾಟಕಕ್ಕೆ ಕನ್ನಡದಲ್ಲಿ ಕೃತಿಗಳ ಕೊರತೆ ಬಹಳಷ್ಟಿದೆ. 

ಯುವಕರಲ್ಲಿ ರಂಗಭೂಮಿ ಬಗ್ಗೆ ಒಲವು ಕಡಿಮೆಯಾಗುತ್ತಿದೆಯಾ?
    ವೀಕ್ಷಕರ ದೃಷ್ಟಿಯಲ್ಲಿ ಕಡಿಮೆ ಆಗುತ್ತಿರುವುದು ನಿಜ. ದೃಶ್ಯ ಮಾಧ್ಯಮ, ಸಿನೆಮಾಗಳಿಂದಾಗಿ ಸೂಕ್ಷ್ಮ ಸಂವೇದನೆಯ ನಾಟಕಗಳತ್ತ ಯುವಕರ ಒಲವು ಕಡಿಮೆ. ಆದರೆ ರಂಗಭೂಮಿ ನಾಟಕ ತರಬೇತಿಗೆ ಬರುತ್ತಿರುವ ಹುಡುಗರ ಸಂಖ್ಯೆ ಹೆಚ್ಚಿದೆ. ಅಷ್ಟೇ ಬೇಗ ಹೊರ ಹೋಗುತ್ತಿರುವವರ ಸಂಖ್ಯೆಯೂ ಸಾಕಷ್ಟಿದೆ. ಆರ್ಥಿಕ ಸ್ಥಿತಿಯೂ ಇದಕ್ಕೆ ಕಾರಣವಾಗಿರಬಹುದು. ಸಿನೆಮಾದಲ್ಲಾದರೆ ಉತ್ತಮ ಸಂಭಾವನೆ ಸಿಕ್ಕರೆ, ನಾಟಕದಲ್ಲಿ ಅಂತಹ ಸಂಭಾವನೆ ಸಿಗುತ್ತಿಲ್ಲ. ರಂಗಭೂಮಿಯಿಂದ ದೂರವಾಗಲು ಇದು ಕೂಡ ಕಾರಣವಾಗಿರಬಹುದು. 

ಚಲನಚಿತ್ರ ಹಾಗೂ ರಂಗಭೂಮಿಗಿರುವ ವ್ಯತ್ಯಾಸಗಳು ಏನು?
    ರಂಗಭೂಮಿ ಒಂದು ಜೀವಂತ, ಸಾಹಸಿಕ ಮಾಧ್ಯಮ. ಇಲ್ಲಿ ಸವಾಲುಗಳು ಹೆಚ್ಚಿರುತ್ತವೆ. ಆದರೆ ಚಲನಚಿತ್ರ ಹಾಗಲ್ಲ. ಸಿನೆಮಾ ಒಂದು ಯಾಂತ್ರಿಕ, ತಾಂತ್ರಿಕ ಮಾಧ್ಯಮ. ಕ್ಯಾಮರಾದಲ್ಲಿ ಚೆನ್ನಾಗಿ ಕಾಣಬೇಕು ಅಂತ ದೇಹವನ್ನು ಫಿಟ್‌ ಮಾಡಿಕೊಂಡರೆ ಮಾತ್ರ ಸಾಲದು. ನಟನೆಯೂ ಮುಖ್ಯ. ಆದರೆ ರಂಗಭೂಮಿಯಲ್ಲಿ ದೇಹಕ್ಕಿಂತ ನಟನೆ ಮಾತ್ರ ಮುಖ್ಯವಾಗುತ್ತದೆ. 

 ನಾಟಕಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಲು ಏನು ಮಾಡಬೇಕು?
     ರಂಗಭೂಮಿ ಒಂದು ದೊಡ್ಡ ಕಲ್ಪನೆ. ಇಲ್ಲಿನ ನಾಟಕಗಳಿಗೆ ಎಲ್ಲ ವರ್ಗದ ಪ್ರೇಕ್ಷಕರು ಬರುವುದಿಲ್ಲ. ಆದರೆ ಇಲ್ಲಿ ನಾಟಕದ ಯಶಸ್ಸಿಗೆ ಜನರು ಮಾನದಂಡ ಅಲ್ಲವೇ ಅಲ್ಲ. ಇದು ಜೀವನ ದರ್ಶನವನ್ನು ಮಾಡಿಕೊಡುವ ನಾಟಕಗಳು. ಜನಪ್ರಿಯ, ಜನ ಪ್ರತೀತ, ಸೂಕ್ಷ್ಮ ಸಂವೇದನೆ ಎನ್ನುವ ಮೂರು ರೀತಿಯ ಕಲೆಗಳಿದ್ದು, ಕಿಶೋರ್‌ ಕುಮಾರ್‌, ಎಸ್‌ಪಿಬಿ ಹಾಡುಗಳಿಗೆ ಹೆಚ್ಚಿನ ಪೇಕ್ಷಕ ವರ್ಗ ಬರುತ್ತಾರೆ. ಹಾಗಂತ ಪಂಡಿತ್‌ ಭೀಮ್‌ಸೇನ್‌ ಜೋಷಿ ಅವರ ಸಂಗೀತ ಗಾಯನಕ್ಕೆ ಬರುವ ಜನ ಕಡಿಮೆಯಾದರೂ, ಆ ಬಂದಂತಹ ಜನ ಯಾರು ಎನ್ನುವುದು ಇಲ್ಲಿ ಮುಖ್ಯ.ರಂಗಭೂಮಿ ಇದ್ದಂತೆ ಇದ್ದರೆ ಸಾಕು. 

ಬಸ್ರೂರು ಸಮೀಪದ ಆನಗಳ್ಳಿ ಮೂಲದ ಸುರೇಶ್‌ ಅವರು ನೀನಾಸಂನಿಂದ ರಂಗಭೂಮಿ ಕಡೆಗೆ ಆಸಕ್ತಿ ಬೆಳೆಸಿಕೊಂಡವರು. ಅನಂತರ ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ, ಅಲ್ಲಿಯೇ 1 ವರ್ಷಗಳ ಕಾಲ ಫೆಲೋಶಿಪ್‌, ಭೋಪಾಲದ ರಂಗ ಮಂಡಲದಲ್ಲಿ 2 ವರ್ಷಗಳ ತಾಂತ್ರಿಕ ನಿರ್ದೇಶಕರಾಗಿ, 1988 ರಿಂದ 97 ರವರೆಗೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಾಟಕ ನಿರ್ದೇಶನ, ರಂಗ ತರಬೇತಿ ನೀಡಿದ್ದಾರೆ. 1997 ರಿಂದ 2013 ರವರೆಗೆ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗದ ವಲಯ ನಿರ್ದೇಶಕರಾಗಿ ಹಲವಾರು ರಂಗ ತರಬೇತಿ, ನಾಟಕ, ಸೆಮಿನಾರ್‌, ನಾಟಕೋತ್ಸವ, ಸಂಘಟನೆ ಕೆಲಸ ಮಾಡಿದವರು. ಈವರೆಗೆ ಒಟ್ಟು 190 ಸೂಕ್ಷ್ಮ ಸಂವೇದನೆಯ ನಾಟಕಗಳನ್ನು ನಿರ್ದೇಶಿಸಿ ಅನುಭವಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಕಲಾವಿದರು ಇವರ ಗರಡಿಯಲ್ಲೇ ಪಳಗಿ ಹೆಸರು ಮಾಡಿದ್ದಾರೆ.  

ಸಂದರ್ಶನ: ಪ್ರಶಾಂತ ಪಾದೆ

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

suicide (2)

Manipal: ಬಾವಿಗೆ ಬಿದ್ದು ಕಾರ್ಮಿಕ ಸಾ*ವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.