Thekkatte: ನವರಾತ್ರಿಗೆ ಮತ್ತೆ ಹೊಸತು ಬರುತಿದೆ!
ಕೃಷಿ ಬದುಕಿನ ಭಾಗ ಹೊಸತು ಹಬ್ಬ-ಕದಿರು ಕಟ್ಟುವ ಹಬ್ಬ ಸಾಂಪ್ರದಾಯಿಕ ಆಚರಣೆ
Team Udayavani, Oct 4, 2024, 1:20 PM IST
ತೆಕ್ಕಟ್ಟೆ: ನಿಸರ್ಗದೊಂದಿಗೆ ಬೆರೆತಿರುವ ಗ್ರಾಮೀಣ ಕೃಷಿಕರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಹೊಸತು ಹಬ್ಬ (ಕದಿರು ಕಟ್ಟುವ ಹಬ್ಬ)ವನ್ನು ನವರಾತ್ರಿಯ ಎರಡನೇ ದಿನವಾದ ಗುರುವಾರ ಹೆಚ್ಚಿನ ಕಡೆ ಆಚರಿಸಲಾಯಿತು. ನವರಾತ್ರಿಯ ಬೇರೆ ಬೇರೆ ದಿನಗಳಲ್ಲಿ ಇದರ ಆಚರಣೆ ನಡೆಯುತ್ತದೆ. ತಾವು ಬೆಳೆದ ಭತ್ತದ ಪೈರಿನ ಹೊಸ ಫಲವನ್ನು ಗ್ರಾಮಸ್ಥರು ಒಂದಾಗಿ ದೇವರಿಗೆ ಸಮರ್ಪಿಸಿ ಅಲ್ಲಿಂದ ಎಲ್ಲರೂ ತಮ್ಮ ಮನೆಗಳಿಗೆ ಕದಿರು ಒಯ್ಯುವ ಸಂಪ್ರದಾಯ ಒಂದಾದರೆ, ಕೆಲವು ಕೃಷಿಕರು ನೇರವಾಗಿ ಮನೆಗೆ ಹೊಸ ಪೈರನ್ನು ತೆಗೆದುಕೊಂಡು ಹೋಗಿ ಅಲ್ಲೇ ಪೂಜೆ ಮಾಡಿ ಕಟ್ಟುವುದು ಇನ್ನೊಂದು ವಿಧಾನ.
ಮನೆಗಳಲ್ಲಿ ಆಚರಣೆ ಹೇಗೆ?
ಹೊಸತು ಹಬ್ಬ (ಕದಿರು ಹಬ್ಬ)ದಂದು ಲಕ್ಷ್ಮೀ ಮನೆಗೆ ಪ್ರವೇಶಿಸುತ್ತಿದ್ದಾಳೆ ಎನ್ನುವ ಭಕ್ತಿ ಭಾವದಿಂದ ಇಡೀ ಮನೆಯನ್ನು ಸ್ವತ್ಛಗೊಳಿಸಲಾಗುತ್ತದೆ. ಮನೆಯ ಪ್ರಧಾನ ದ್ವಾರ ಸೇರಿದಂತೆ ಹೊಸ್ತಿಲುಗಳಿಗೆ ಶೇಡಿಯಿಂದ ಅಲಂಕಾರ ಮಾಡಲಾಗುತ್ತದೆ.
ಸಂಪ್ರದಾಯದಂತೆ ಕೃಷಿಕರು ತಮ್ಮದೇ ಗದ್ದೆಯಿಂದ ತಮ್ಮ ಮನೆಗೆ ತೆನೆ ಕೊಂಡೊಯ್ಯಬಾರದು ಎಂಬ ನಿಯಮವಿದೆ. ಹೀಗಾಗಿ ಹೊಸ್ತು ಹಬ್ಬ ಆಚರಿಸುವ ಮುನ್ನಾ ದಿನ ರಾತ್ರಿ ಇಲ್ಲವೇ ಅದೇ ದಿನ ಮುಂಜಾನೆ ವೇಳೆ ಯಾರಿಗೂ ತಿಳಿಯದಂತೆ ಬೇರೆಯವರ ಕೃಷಿ ಭೂಮಿಯಿಂದ ತೆನೆಯನ್ನು ತೆಗೆಯಲಾಗುತ್ತದೆ!
ಹಾಗೆ ಗದ್ದೆಯಿಂದ ತಂದ ತೆನೆಯನ್ನು ತುಳಸಿಕಟ್ಟೆಯ ಮುಂದೆ ಇರಿಸಿ, ವಿಶೇಷ ಅಲಂಕಾರಗಳೊಂದಿಗೆ ಪೂಜಿಸಲಾಗುತ್ತದೆ. ಪೂಜೆಗೊಂಡ ಭತ್ತದ ತೆನೆಯನ್ನು ಮನೆಯ ಹಿರಿಯರು ತಲೆಯಲ್ಲಿ ಹೊತ್ತು ಮನೆಯೊಳಗೆ ಪ್ರವೇಶಿಸುತ್ತಾರೆ. ಈ ಹಂತದಲ್ಲಿ ಮನೆಯೊಡತಿ ಯಜಮಾನನ ಪಾದ ತೊಳೆದು, ಆರತಿ ಮಾಡುತ್ತಾರೆ. ನಂತರ ಕದಿರನ್ನು ಮನೆಯ ಪ್ರಧಾನ ದ್ವಾರ ಮತ್ತು ಎಲ್ಲ ಕೃಷಿ ಪರಿಕರಗಳಿಗೆ ಕಟ್ಟಲಾಗುತ್ತದೆ.
ಕದಿರು ಕಟ್ಟುವುದು ಹೇಗೆ?
ಭತ್ತದ ತೆನೆಯನ್ನು ಮಾವು, ಹಲಸು ಮತ್ತು ಬಿದಿರಿನ ಎಲೆಗಳನ್ನು ಸೇರಿಸಿ ತೆಂಗಿನ ನಾರಿನಿಂದ ಮಾಡಿದ ಹಗ್ಗದಿಂದ ಕಟ್ಟಲಾ ಗುತ್ತದೆ. ಪೈರಿನಿಂದ ಭತ್ತ ಬಿದ್ದರೂ ಈ ಹೊರಾವರಣ ರಕ್ಷಾ ಕವಚವಾಗಿರುತ್ತದೆ. ಅದರ ಜತೆಗೆ ಈ ಎಲ್ಲ ವಸ್ತುಗಳ ಪರಸ್ಪರ ಜೋಡಣೆಯೂ ವಿಶೇಷವಾಗಿದೆ.ಮನೆಯ ಮೇಜು, ಕುರ್ಚಿ, ಕಂಪ್ಯೂಟರ್, ವಾಹನಗಳಿಗೆ, ತಿಜೋರಿ, ಬಾವಿ ಸೇರಿದಂತೆ ಎಲ್ಲ ಪರಿಕರಗಳಿಗೆ ಕದಿರು ಕಟ್ಟುವ ಕ್ರಮವಿದೆ. ಈ ಮೂಲಕ ಹೊಸತನಕ್ಕೆ ನಾಂದಿಯಾಗಲಿ ಎಂಬ ಆಶಯವಿದೆ.
ಮುಂದೆಯೂ ಉಳಿಯಬೇಕು
ಸಂಸ್ಕೃತಿಯ ರಕ್ಷಣೆ, ಪರಿಸರ ಜಾಗೃತಿ, ಮನೆ ಮನಗಳ ಸ್ವತ್ಛತೆ, ಸಂಬಂಧಗಳನ್ನು ಬೆಸೆಯುವುದು, ಎಲ್ಲದದರಲ್ಲೂ ಹೊಸತನ್ನು ಕಾಣುವ ವಿಶೇಷ ಆಶಯ ಈ ಗ್ರಾಮೀಣ ಕೃಷಿ ಆಚರಣೆಯಲ್ಲಿದೆ. ಈ ಆಚರಣೆಗಳು ಮುಂದಿನ ತಲೆಮಾರುಗಳಿಗೂ ಉಳಿಯಬೇಕು.
– ಪಾಂಡುರಂಗ ದೇವಾಡಿಗ ತೆಕ್ಕಟ್ಟೆ, ಕೃಷಿಕರು
ಹೊಸ ಅಕ್ಕಿ ಊಟ ವಿಶೇಷ
ಹೊಸತು ಹಬ್ಬ ಆಚರಣೆಯಂದು ಒಂಬತ್ತು ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದಕ್ಕೆ ಹೊಸ ಅಕ್ಕಿಯನ್ನು ಬೆರೆಸಿದಾಗ ಅದು ಪರಿಪೂರ್ಣವಾಗುತ್ತದೆ. ಹೊಸ ಅಕ್ಕಿಯಿಂದ ತಯಾರಾದ ಅನ್ನ ಊಟ ಮಾಡುವ ಮೊದಲು ಕಿರಿಯರು ಹಿರಿಯರ ಆಶೀರ್ವಾದ ಪಡೆಯಬೇಕು.
-ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
Naxal Encounter: ಬಂಧಿತ ಸುರೇಶ್ ಅಂಗಡಿ ಮಾಹಿತಿಯಂತೆ ʼಆಪರೇಷನ್ ವಿಕ್ರಂ ಗೌಡʼ
Naxal Encounter: ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.