ಆಗ ಕಿರಾಣಿ ಅಂಗಡಿಯ ಹುಡುಗ; ಈಗ ಸಚಿವ
Team Udayavani, Aug 21, 2019, 5:05 AM IST
ಕೋಟ: ಅತಿ ಹಿಂದುಳಿದ ವರ್ಗದ ಮತ್ತು ರಾಜಕೀಯ ಹಿನ್ನೆಲೆಯೇ ಇಲ್ಲದ ಕುಟುಂಬದಲ್ಲಿ ಜನಿಸಿ, ಬಡತನದ ಕಾರಣಕ್ಕೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಕಿರಾಣಿ ಅಂಗಡಿ ಕಾರ್ಮಿಕನಾಗಿ ಬೆಳೆದ ಕೋಟ ಶ್ರೀನಿವಾಸ ಪೂಜಾರಿ ಈಗ 2ನೇ ಅವಧಿಗೆ ರಾಜ್ಯ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಕಿರಾಣಿ ಅಂಗಡಿಯಲ್ಲಿ ಸಾಮಗ್ರಿ ಕಟ್ಟಿಕೊಡುವಲ್ಲಿಂದ ವಿಧಾನ ಸೌಧದ ಮೆಟ್ಟಿಲೇರುವ ತನಕದ ಪೂಜಾರಿ ಯವರ ಯಾನ ಗಮನಿಸುವಂಥದ್ದು.
1960ರ ಜ. 1ರಂದು ಕೋಟತಟ್ಟುವಿ ನಲ್ಲಿ ಆಣ್ಣಪ್ಪ ಪೂಜಾರಿ ಮತ್ತು ಲಚ್ಚಿ ಪೂಜಾರಿ ಅವರ ಪುತ್ರನಾಗಿ ಜನಿಸಿದ ಶ್ರೀನಿವಾಸ ಕೋಟ ಶಾಂಭವೀ ಶಾಲೆಯಲ್ಲಿ 7ನೇ ತರಗತಿ ಶಾಲಾ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿದ್ದರು.
ಕಿರಾಣಿ ಅಂಗಡಿ ಹುಡುಗ
1974ರಲ್ಲಿ 14ನೇ ವಯಸ್ಸಿಗೆ ಕೋಟದ ವಾಸುದೇವ ನಾಯಕ್ ಅವರ ಕಿರಾಣಿ
ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಬಿಡುವಿನ ವೇಳೆಯಲ್ಲಿ ಕೃಷಿ ಕೂಲಿಯಾಗಿಯೂ ದುಡಿಯುತ್ತಿದ್ದರು. 15 ವರ್ಷಗಳ ಅನಂತರ ಛಾಯಚಿತ್ರಗ್ರಾಹಕನಾದರು. ಕ್ರಮೇಣ ಕೋಟದಲ್ಲಿ ಸ್ವಾತಿ ಸ್ಟುಡಿಯೋ ತೆರೆದರು. ಈ ವೃತ್ತಿ 2008ರಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗುವ ತನಕ ಮುಂದುವರಿಯಿತು. ಇವೆಲ್ಲ ಏಳುಬೀಳುಗಳ ನಡುವೆ ಶಾಂತಾ ಅವರ ಬಾಳಸಂಗಾತಿಯಾದರು; ಸ್ವಾತಿ, ಶಶಿಧರ, ಶ್ರುತಿ ಮಕ್ಕಳಾಗಿ ಮನೆ ಬೆಳಗಿದರು.
ರಾಜಕೀಯ ಜೀವನ
1993ರಲ್ಲಿ ಕೋಟತಟ್ಟು ಗ್ರಾ.ಪಂ. ಸದಸ್ಯನಾದರು. ಬಿಜೆಪಿ ಜತೆ ಗುರುತಿಸಿ ಕೊಂಡು ಉಪಾಧ್ಯಕ್ಷರಾದರು. ಗ್ರಾ.ಪಂ. ಸದಸ್ಯನಾಗಿರುವಾಗಲೇ 1996ರ ಉಡುಪಿ ತಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಅನಂತರ 1999 ಮತ್ತು 2004ರಲ್ಲಿ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆ. ಜಯಪ್ರಕಾಶ್ ಹೆಗ್ಡೆ ವಿರುದ್ಧ ಪರಾಭವಗೊಂಡರು. 2006ರಲ್ಲಿ ಪಂ. ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಸದಸ್ಯರಾಗಿದರು. 2008ರಲ್ಲಿ ಸ್ಥಳೀಯಾ ಡಳಿತದ ಸ್ಥಾನದಿಂದ ಉಡುಪಿ-ದ.ಕ. ಅವಳಿ ಜಿಲ್ಲೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಮೊದಲ ಬಾರಿಗೆ ಆಯ್ಕೆಯಾದರು. ಮತ್ತೆ 2010ರಲ್ಲಿ ಅವಿರೋಧವಾಗಿ ಆಯ್ಕೆಯಾದರು. 2012ರಲ್ಲಿ ರಾಜ್ಯ ಬಂದರು, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಸಚಿವ ಸ್ಥಾನವನ್ನು ಉತ್ತಮ ವಾಗಿ ನಿಭಾಯಿಸಿದರು. 2015ರಲ್ಲಿ ಮತ್ತೂಮ್ಮೆ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಗೊಂಡು 2018ರಲ್ಲಿ ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರಾದರು.
ಬಸ್ ಟಿಕೆಟ್ ಹೋರಾಟ
ಅದೊಂದು ದಿನ ಬೆಂಗಳೂರಿಗೆ ತೆರಳಿ ವಾಪಸಾಗುವಾಗ ಬಸ್‌ನಲ್ಲಿ ಶ್ರೀನಿವಾಸ ಪೂಜಾರಿಯವರಿಗೆ ಮೀಸಲಾಗಿದ್ದ ಆಸನ ಬಿಟ್ಟು ಬೇರೆ ಸೀಟ್‌ನಲ್ಲಿ
ಕುಳ್ಳಿರಿಸ ಲಾಯಿತು. ಇದನ್ನು ಪ್ರತಿಭಟಿಸಿ ಅವರು ಬಳಕೆದಾರರ ವೇದಿಕೆಯ ಮೂಲಕ ಹೋರಾಟ ಆರಂಭಿಸಿದರು. ಅನಂತರ ಇವರ ಪರ ತೀರ್ಪು
ಬಂದು ಬಸ್‌ನವರಿಗೆ ದಂಡ ವಿಧಿಸಲಾಯಿತು.
ಈ ಘಟನೆ ಅವರಲ್ಲಿ ಹೋರಾಟದ ಕಿಚ್ಚು ಹೆಚ್ಚುವಂತೆ ಮಾಡಿತು. 1989ರಲ್ಲಿ ಶೇಂದಿ ನಿಷೇಧ ಕಾಯ್ದಿ ಜಾರಿಗೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಸಂಘಟಿಸಿದ್ದರ ಫಲವಾಗಿ ಅಂದಿನ ಸರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಂದಿ ನಿಷೇಧ ಕೈಬಿಟ್ಟಿತ್ತು. ಬಂಗಾರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಮೂರ್ತೆದಾರರ ಪರ ದೊಡ್ಡ
ಹೋರಾಟ ಸಂಘಟಿಸಿದ್ದರು.
ಹೋರಾಟ ಮತ್ತು ಕಾರ್ಯವೈಖರಿಯನ್ನು ಗುರುತಿಸಿ ಪಕ್ಷ ನನಗೆ ಈ ಜವಾಬ್ದಾರಿ ನೀಡಿದೆ. ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ
ಹೋರಾಟ- ವಾಕ್ ಚಾತುರ್ಯ
ಹೋರಾಟದ ಮನೋಭಾವ ಮತ್ತು ಪ್ರಕರ ವಾಕ್ ಚಾತುರ್ಯ ಪೂಜಾರಿಯವರಿಗೆ ವರದಾನ. ಕತೆ – ಉಪಕತೆಗಳನ್ನು ಹೇಳುತ್ತ ಮಂತ್ರಮುಗ್ಧಗೊಳಿಸುವಂತೆ ಮಾತನಾಡುವ ಶಕ್ತಿ, ಅಧ್ಯಯನಶೀಲತೆ, ಪೂರ್ವ ತಯಾರಿಯೊಂದಿಗೆ ವಿಷಯ ಮಂಡನೆ ಇವರ ವಿಶೇಷತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.