ಮಠದಂಗಡಿ ಕಿರು ಸೇತುವೆ ಪಕ್ಕ ಇಲ್ಲ ತಡೆಬೇಲಿ
Team Udayavani, Jul 4, 2019, 5:00 AM IST
ಕಟಪಾಡಿ: ಉದ್ಯಾವರ ಪೇಟೆ-ಪಿತ್ರೋಡಿ ಸಂಪರ್ಕದ ಮೀನುಗಾರಿಕಾ ಇಲಾಖಾ ರಸ್ತೆಯ ಮಠದಂಗಡಿ ಬಳಿಯ ಕಿರು ಸೇತುವೆ ಸನಿಹ ಯಾವುದೇ ತಡೆ ಬೇಲಿ ಇಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಿರು ಸೇತುವೆ ಇಕ್ಕಟ್ಟಾಗಿರುವುದರಿಂದ ವಾಹನಗಳು ತುಸು ಬದಿಗೆ ಹೋದರೂ ವಾಹನಗಳು ಕೆಳಗೆ ಬೀಳುವ ಅಪಾಯವಿದೆ. ಈಗಾಗಲೇ ಇಂತಹ ಎರಡು ಘಟನೆಗಳು ಸಂಭವಿಸಿವೆ. ಸೇತುವೆ ಪಕ್ಕ ತಡೆಬೇಲಿ ಹಾಕದ್ದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಂದಲೇ
ತಾತ್ಕಾಲಿಕ ವ್ಯವಸ್ಥೆ
ವಾಹನ ಬಂದಾಗ ಬದಿಗೆ ಹೋದ ಮಹಿಳೆಯೊಬ್ಬರು ಆಯ ತಪ್ಪಿ ತೋಡಿಗೆ ಬಿದ್ದ ಘಟನೆ ಇತ್ತೀಚೆಗೆ ನಡೆದಿದ್ದು, ಬಳಿಕ ಅಡಕೆ ಮರವನ್ನು ಅಡ್ಡಲಾಗಿ ಕಟ್ಟಲಾಗಿದೆ. ಮತ್ತೂಂದು ಭಾಗದಲ್ಲಿ ವ್ಯಾಪಾರಿಗಳು ಕಬ್ಬಿಣದ ಗೇಟ್ ಮಾದರಿಯ ತಡೆಯನ್ನಿರಿಸಿ ತಾತ್ಕಾಲಿಕ ಸುರಕ್ಷತೆ ಕಲ್ಪಿಸಿದ್ದಾರೆ.
ಈ ರಸ್ತೆಯು ದಟ್ಟನೆಯಿಂದ ಕೂಡಿದ್ದು, ಸ್ಥಳೀಯಾಡಳಿತದ ಕಚೇರಿಗಳು, ಪ್ರಾರ್ಥನಾ ಮಂದಿರಳು, ವಾಣಿಜ್ಯ ಮಳಿಗೆ, ಮೀನು ಮಾರುಕಟ್ಟೆಗೆ ಪ್ರಮುಖ ಸಂಪರ್ಕ ರಸ್ತೆಯೂ ಆಗಿದೆ.
ವಾಹನ ದಟ್ಟನೆ
ಸಿಟಿ ಬಸ್ಗಳು, ವಾಣಿಜ್ಯ ವ್ಯವಹಾರದ ವಾಹನಗಳು, ಖಾಸಗಿ ವಾಹನಗಳು ಇದೇ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತವೆ. ರಾತ್ರಿ ವೇಳೆಯಲ್ಲಿ ಅದೂ ಅಧಿಕ ಮಳೆಯಾಗುವ ಸಂದರ್ಭದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕೂಡಲೇ ವ್ಯವಸ್ಥೆ ಕಲ್ಪಿಸಲು ಜನ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.