ಐತಾಳ್‌ಬೆಟ್ಟಿನಲ್ಲಿ ಹತ್ತಾರು ಮನೆಗಳಿಗೆ ರಸ್ತೆಯೇ ಇಲ್ಲ; ಒಳಚರಂಡಿ ಬೇಕಿದೆ


Team Udayavani, Feb 20, 2020, 6:32 AM IST

1902KDLM8PH11111111

ಕುಂದಾಪುರ: ಸಂಗಮ್‌ನಿಂದ ಆನಗಳ್ಳಿಗೆ ಹೋಗುವ ರಸ್ತೆಯಲ್ಲಿ ಸಾಗಿದಾಗ ಚಿಕ್ಕನ್‌ಸಾಲ್‌ ಶಾಲೆ ಎದುರು ಸಾಗಿದ ರಸ್ತೆಯಲ್ಲಿ ಹೋಗೋಣ ಎಂದು ಹೊರಟರೆ ಗಾಡಿಯನ್ನು ಅರ್ಧಕ್ಕೆ ನಿಲ್ಲಿಸಬೇಕು. ಮನೆಯಂಗಳದಲ್ಲಿ ಮೋಟಾರು ನಿಲ್ಲಿಸಿ ಸಾಗಿದರೆ 16ಕ್ಕಿಂತ ಅಧಿಕ ಮನೆಗಳಿವೆ. ಇವ್ಯಾವ ಮನೆಗಳಿಗೂ ರಸ್ತೆಯೇ ಇಲ್ಲ. ಅಸಲಿಗೆ ಸುಸಜ್ಜಿತವಾದ ಕಾಲುದಾರಿಯೂ ಇಲ್ಲ.

ಐತಾಳ್‌ಬೆಟ್ಟು ಜನತೆಯ ಪಾಡು
ಐತಾಳ್‌ಬೆಟ್ಟು ಎಂಬಲ್ಲಿನ ಜನ ಪ್ರತಿಯೊಂದಕ್ಕೂ ತಲೆಹೊರೆಯನ್ನೇ ಆಶ್ರಯಿಸಿದ್ದಾರೆ. ಮನೆಗಳಲ್ಲಿ ಶುಭ ಸಮಾರಂಭ ನಡೆಯಬೇಕಿದ್ದರೂ ಅಷ್ಟೂ ವಸ್ತುಗಳು ತಲೆಹೊರೆಯಲ್ಲೇ ಸಾಗಬೇಕು. ಯಾರಿಗಾದರೂ ಅನಾರೋಗ್ಯವಾದರೂ ಅವರನ್ನು ಹೊತ್ತುಕೊಂಡೇ ಹೋಗಬೇಕು. ಅಷ್ಟೂ ಮನೆಗಳ ಪೈಕಿ ಯಾರಾದರೂ ಸ್ವಂತ ವಾಹನ ತೆಗೆದುಕೊಂಡರೂ ಅವರು ಅದನ್ನು ಮುಖ್ಯ ರಸ್ತೆ ಬದಿ ನಿಲ್ಲಿಸಿ ಮನೆಗೆ ನಡೆದೇ ಬರಬೇಕು. ಈ ಭಾಗದ ಮನೆಗಳಿಗೆ ಎಂದರೆ ರಿಕ್ಷಾದವರೂ ಬರಲೊಲ್ಲರು. ನಗರದಲ್ಲೂ ಇಂತಹ ಪರಿಸ್ಥಿತಿ ಕಂಡುಬರುತ್ತಿರುವುದು ತೀರಾ ದುರಂತ. ಹಾಗಂತ ಏಕಾಏಕಿ ರಸ್ತೆಯೂ ಮಾಡುವಂತಿಲ್ಲ. ಅದಕ್ಕಾಗಿ ಒಂದಷ್ಟು ದೊಡ್ಡ ಮಟ್ಟದ ಪ್ರಯತ್ನಗಳೇ ಆಗಬೇಕು. ದೊಡ್ಡ ಅನುದಾನವೇ ಬೇಕು. ಖಾಸಗಿ ಜಾಗದ ಅವಶ್ಯವೂ ಇದೆ. ಇರುವ ಜಾಗವನ್ನೇ ಸಣ್ಣಪುಟ್ಟದಾಗಿ ಸರಿಪಡಿಸಿ ರಿಕ್ಷಾ ಬರುವಂತಾದರೂ ಮಾಡಿಕೊಡಿ ಎಂದು ಇಲ್ಲಿನವರು ಕೇಳುತ್ತಾರೆ. ಇದ್ದ ವಿದ್ಯುತ್‌ ಕಂಬವನ್ನು ಬದಿಗೆ ಸರಿಸಿ ಇಂಟರ್‌ಲಾಕ್‌ ಹಾಕಿಕೊಟ್ಟರೆ ರಿಕ್ಷಾಗಳಾದರೂ ಬರಬಹುದು ಎಂಬ ಸಣ್ಣ ಆಸೆ. ಆದರೆ ಇನ್ನೂ ನೆರವೇರಿಲ್ಲ. ಸುದಿನ ವಾರ್ಡ್‌ ಸುತ್ತಾಟ ಸಂದರ್ಭ ಚಿಕ್ಕನ್‌ ಸಾಲ್‌ ಬಲಬದಿ ವಾರ್ಡ್‌ನ ವಿವಿಧೆಡೆ ತೆರಳಿದಾಗ ಈ ವಾರ್ಡ್‌ನಲ್ಲಿ ಕಂಡ ಸಮಸ್ಯೆ ಇದು.

ರಸ್ತೆಯಾಗಲಿ
ರಸ್ತೆಯೊಂದು ಆದರೆ ನಮ್ಮ ಈ ಭಾಗದ ಸಮಸ್ಯೆ ಬಹುಪಾಲು ಈಡೇರಿಕೆ ಯಾದಂತೆಯೇ ಸರಿ. ಸರಿಸುಮಾರು 20 ವರ್ಷಗಳಿಂದ 50ಕ್ಕಿಂತ ಹೆಚ್ಚು ಬಾರಿ ಭರವಸೆಗಳನ್ನು ಕೇಳಿದ್ದೇವೆ. ಪ್ರತೀ ಚುನಾವಣೆ ಬಂದಾಗಲೂ ಆಶ್ವಾಸನೆ ನೀಡುತ್ತಾರೆ. ಈಡೇರಲೇ ಇಲ್ಲ.
-ಗಿರಿಜಾ, ಐತಾಳ್‌ಬೆಟ್ಟು

ಒಳಚರಂಡಿಯೇ ಇಲ್ಲ
ಈ ಭಾಗದಲ್ಲಿ ಒಳಚರಂಡಿಯೇ ಇಲ್ಲ. ಒಳಚರಂಡಿ ಮಾಡಿದರೆ ಇಲ್ಲಿನ ರಸ್ತೆ ಬೇಡಿಕೆಯೂ ಜತೆಯಾಗಿಯೇ ಈಡೇರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಗಮನಹರಿಸಲಿ.
-ಸೋಮನಾಯ್ಕ, ಚಿಕ್ಕನ್‌ಸಾಲ್‌ ಬಲಬದಿ ವಾರ್ಡ್‌

ಚರಂಡಿ ಬೇಡಿಕೆ
ಸಂಗಮ್‌ ಕ್ರಾಸ್‌ನಿಂದ ದೇವಸ್ಥಾನ ವರೆಗೆ ಚರಂಡಿಯೇ ಇಲ್ಲ. ಎಷ್ಟು ಹೇಳಿದರೂ ಸ್ಪಂದನೆ ಇಲ್ಲ. ಒಳಚರಂಡಿ ಮಾಡಬೇಕೆಂದು ಈ ಭಾಗದ ಜನರ ಬೇಡಿಕೆಯಿದೆ. ಆದಕ್ಕಾಗಿ ಸರ್ವೆ ಕೂಡಾ ನಡೆದಿದೆ. ಆದರೆ ಜಾಗದ ಕೊರತೆಯಿಂದಲೋ ಏನೋ ಒಳಚರಂಡಿ ಯೋಜನೆ ಇತ್ತ ಸುಳಿದಿಲ್ಲ. ಏಕೆಂದರೆ ಇಲ್ಲಿ ಒಳಚರಂಡಿ ಪೈಪ್‌ ಅಳವಡಿಸುವಂತಹ ವಿಶಾಲ ರಸ್ತೆಯಿಲ್ಲ. ಒಳಚರಂಡಿ ಯೋಜನೆ ಯಾದರೂ ಬಂದರೆ ಹಾಗಾದರೂ ರಸ್ತೆ ಲಭಿಸಬಹುದೋ ಏನೋ ಎಂಬ ಆಸೆಯ ಸುಳಿ ಇಲ್ಲಿನವರದ್ದು.
ಶ‌¾ಶಾನಇದೇ ರಸ್ತೆಯಲ್ಲಿ ಶ್ಮಶಾನವೊಂದಿದ್ದು ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಹಿಂದೂ ರುದ್ರಭೂಮಿಯ ಅಭಿವೃದ್ಧಿ ಮಾಡಲಾಗಿದ್ದು ಇಂಟರ್‌ಲಾಕ್‌, ಶೆಡ್‌, ಸಿಲಿಕಾನ್‌ ಬಾಕ್ಸ್‌ ಇತ್ಯಾದಿ ಹಾಕಿ ಸುಸಜ್ಜಿತ ಮಾಡಲಾಗಿದೆ.

ಅಭಿವೃದ್ಧಿ
ಅಧಿಕಾರ ಇಲ್ಲದಿದ್ದರೂ ಅನುದಾನ ಕಡಿಮೆ ಇದ್ದರೂ ಒಂದಷ್ಟು ಅಭಿವೃದ್ಧಿ ಕಾಮಗಾರಿಗಳು ಈ ಭಾಗದಲ್ಲಿ ನಡೆದಿವೆ. ಬಟ್ರಾಡಿ ರಸ್ತೆಯ ಸರಕಾರಿ ಕೆರೆ ತೀರಾ ಅಪಾಯಕಾರಿಯಾಗಿತ್ತು. ಆವರಣ ಗೋಡೆಯಿಲ್ಲದೇ ಮಹಿಳೆಯೊಬ್ಬರು ಮೃತಪಟ್ಟಿದ್ದೂ ಇತ್ತು ಇಲ್ಲಿ. ಅನಂತರವೂ ಪುಟ್ಟ ಪುಟ್ಟ ಮಕ್ಕಳು ಸೈಕಲ್‌ನಲ್ಲಿ ಓಡಾಡುತ್ತಿದ್ದಾಗ ಮನೆಯವರಿಗೆ ಆತಂಕವಾಗುತ್ತಿತ್ತು. ಪಕ್ಕದಲ್ಲೇ ಇರುವ ಕಾಂಕ್ರೀಟ್‌ ರಸ್ತೆ ಕೆರೆಯಿದೆ ಎನ್ನುವುದನ್ನು ಮರೆಸಿ ವಾಹನ ಓಡಿಸುವಂತಿತ್ತು. ಈಚೆಗೆ ಅದಕ್ಕೆ ತಡೆಗೋಡೆ ರಚಿಸಲಾಗಿದೆ. ಕಡ್ಗಿರಸ್ತೆಯಲ್ಲಿ ಹೆದ್ದಾರಿ ಕಾಮಗಾರಿ ಸಂದರ್ಭ ಆದ ಅನಾಹುತಗಳನ್ನು ದುರಸ್ತಿಪಡಿಸಲಾಗಿದೆ. ತಡೆಗೋಡೆ ರಚಿಸಲಾಗಿದೆ.

ಬೆಳಕು ಬಂತು
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಿಂದೆ ಮಸೀದಿ ಬಳಿ, ಕಡ್ಗಿ ರಸ್ತೆಯಲ್ಲಿ, ಪುರಸಭೆ ಸದಸ್ಯ ಸಂದೀಪ್‌ ಖಾರ್ವಿ ಮನೆ ಸಮೀಪ ಹೊಸದಾಗಿ ಬೀದಿದೀಪಗಳನ್ನು ಅಳವಡಿಸಲಾಗಿದೆ.
ವಾರ್ಡ್‌ ಸದಸ್ಯರು ವೈಯಕ್ತಿಕವಾಗಿಯೂ ಇದಕ್ಕಾಗಿ ಮೊತ್ತ ಭರಿಸಿದ್ದಾರೆ. ಕೆಎಸ್‌ಆರ್‌ಟಿಸಿಯ ಹಿಂದೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಅನುದಾನದಲ್ಲಿ ರಸ್ತೆಯೊಂದು ನಿರ್ಮಾಣವಾಗುತ್ತಿದ್ದು ಇದನ್ನು ವಿಸ್ತರಿಸಿ ಇನ್ನಷ್ಟು ಮಂದಿಗೆ ಪ್ರಯೋಜನ ಮಾಡಿಕೊಡಬೇಕೆಂದು ಪುರಸಭೆ ಸದಸ‌Âರು ಮಾಡಿದ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಈಡೇರುತ್ತಿದೆ
ಅನುದಾನದ ಕೊರತೆ ಮಧ್ಯೆಯೂ ಅನೇಕ ಬೇಡಿಕೆಗಳನ್ನು ಈಡೇರಿಸ ಲಾಗುತ್ತಿದೆ. ಇನ್ನೊಂದಷ್ಟು ಕೆಲಸಗಳು ಅಧಿಕಾರ ದೊರೆತು, ಅನುದಾನ ಬಂದ ಕೂಡಲೇ ಮಾಡಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ.
-ಕೆ.ಜಿ. ನಿತ್ಯಾನಂದ,
ಸದಸ್ಯರು, ಪುರಸಭೆ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.