ರಸ್ತೆ ಸುರಕ್ಷಾ ಮಸೂದೆಯಲ್ಲಿ ಚಾಲಕರಿಗೆ ಸುರಕ್ಷೆ ಇಲ್ಲ: ವರಲಕ್ಷ್ಮೀ
Team Udayavani, Aug 7, 2017, 7:30 AM IST
ಕುಂದಾಪುರ: ಕೇಂದ್ರ ಸರಕಾರವು ತಂದಿರುವ ರಸ್ತೆ ಸುರಕ್ಷತಾ ಮಸೂದೆಯಲ್ಲಿ ಸುರಕ್ಷತೆಗಿಂತ ಚಾಲಕರನ್ನು ಶಿಕ್ಷಿಸುವ ಕಾಯಿದೆಗಳು ಅಡಕವಾಗಿವೆ. ಸ್ವಂತ ಹಣದಿಂದ ಆಟೋ ತೆಗೆದುಕೊಂಡು ಸ್ವಂತ ಉದ್ಯೋಗ ಮಾಡುವ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಆಟೋ ಚಾಲಕರಿಗೆ ಸರಕಾರದಿಂದ ಯಾವುದೇ ಸೌಲಭ್ಯವನ್ನು ನೀಡದೆ ಇಂದು ಬೇರೆ ಬೇರೆ ತೆರಿಗೆಗಳನ್ನು ವಿ ಧಿಸಿ ಅವರ ಬದುಕಿನಲ್ಲಿ ಅತಂತ್ರ ಪರಿಸ್ಥಿತಿಯನ್ನು ತಂದಿಟ್ಟಿದೆ ಎಂದು ಸಿಐಟಿಯುನ ರಾಜ್ಯ ಸಮಿತಿ ಅಧ್ಯಕ್ಷೆ ಎಸ್. ವರಲಕ್ಷ್ಮೀ ಹೇಳಿದರು.
ಅವರು ಜು.23ರಂದು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ನಡೆದ ಕುಂದಾಪುರ ತಾಲೂಕು ಆಟೋರಿûಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಇದರ 41ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘದ ಅಧ್ಯಕ್ಷ ಕೆ. ಲಕ್ಷ್ಮಣ ಬರೆಕಟ್ಟು ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಸಿಐಟಿಯುನ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ, ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷ ಎಚ್. ನರಸಿಂಹ, ಸಂಘದ ಗೌರವಾಧ್ಯಕ್ಷ ಎಚ್. ಕರುಣಾಕರ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಂಘದ ವಾರ್ಷಿಕ ಚಟುವಟಿಕೆಯ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ಮಂಡಿಸಿದರು. ಕೋಶಾ ಧಿಕಾರಿ ಸಂತೋಷ ಕಲ್ಲಾಗರ ಲೆಕ್ಕಪತ್ರವನ್ನು ನೀಡಿದರು.
ನಂತರ ನಡೆದ ನೂತನ ಪದಾಧಿ ಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಕೆ. ಲಕ್ಷ್ಮಣ ಬರೆಕಟ್ಟು, ಗೌರವಾಧ್ಯಕ್ಷರಾಗಿ ಎಚ್. ಕರುಣಾಕರ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ, ಸಂಘಟನಾ ಕಾರ್ಯದರ್ಶಿಯಾಗಿ ರಾಜು ದೇವಾಡಿಗ, ಕೋಶಾಧಿಕಾರಿಯಾಗಿ ಸಂತೋಷ ಕಲ್ಲಾಗಾರ, ಸಂಘದ ಸಲಹೆಗಾರರಾಗಿ ವಿ. ಚಂದ್ರ ಅವರು ಆಯ್ಕೆಗೊಂಡರು.ರಾಜು ದೇವಾಡಿಗ ಸ್ವಾಗತಿಸಿದರು. ರವಿ ವಿ. ಎಂ. ವಂದಿಸಿದರು.
ಇಂದು 40 ವರ್ಷ ಮೇಲ್ಪಟ್ಟ ಚಾಲಕರು ಅ ಧಿಕ ಸಂಖ್ಯೆಯಲ್ಲಿದ್ದು, ಅಂತವರಿಗೆ ಬ್ಯಾಡ್ಜ್ ನೀಡಲು ಸರಕಾರವು 10ನೇ ತರಗತಿ ತೇರ್ಗಡೆ ಹೊಂದಿರುವ ಪ್ರಮಾಣಪತ್ರ ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಅಂತಹ ಚಾಲಕರು ಈ ಸಮಯದಲ್ಲಿ ಪರೀಕ್ಷೆ ಬರೆದು ಪ್ರಮಾಣಪತ್ರ ಪಡೆಯುವುದು ಕಷ್ಟಸಾಧ್ಯ. ಇಂತಹ ಕಾನೂನನ್ನು ಹಿಂಪಡೆಯಬೇಕು ಮತ್ತು ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ರಾತ್ರಿ ಹಗಲೆನ್ನದೆ ದುಡಿಯುವ ಆಟೋಚಾಲಕರಿಗೆ ಸಿಗಬೇಕು.
ಇಂದಿನ ಕಾಲದಲ್ಲಿ ಒಬ್ಬ ಆಟೋಚಾಲಕ ತಾನು ದುಡಿದು ಬಂದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಮನೆ ಅಡುಗೆ ಸಾಮಗ್ರಿಗಳನ್ನು ತಂದುಕೊಂಡು ಜೀವನ ನಡೆಸುವುದು ಕಷ್ಟಕರವಾಗಿದೆ. ಸರಕಾರವು ಆಟೋಚಾಲಕರಿಗೆ ಪಿ.ಎಫ್., ಇ.ಎಸ್.ಐ. ಮುಂತಾದ ಸೌಲಭ್ಯಗಳನ್ನು ನೀಡಬೇಕು.
-ಎಸ್. ವರಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.