ಚೋರಾಡಿ ರಸ್ತೆಯಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ!

Team Udayavani, Mar 30, 2018, 6:55 AM IST

1403kdme1ph2.jpg

ಕುಂದಾಪುರ: ಆಧುನಿಕ‌ ಸಂಚಾರ ವ್ಯವಸ್ಥೆ, ರಸ್ತೆ ಸೌಕರ್ಯದ ಬಗ್ಗೆ ಎಷ್ಟೇ ಮಾತನಾಡಿದರೂ, ಹಾಲಾಡಿ ಸಮೀಪ ಚೋರಾಡಿ ಎಂಬ ಊರಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯವೇ ಇಲ್ಲ.  

ಈ ಪ್ರದೇಶದ ಜನರು ಈಗಲೂ ಆರೆಂಟು ಕಿ.ಮೀ. ನಡೆಯಬೇಕು. ಇಲ್ಲದಿದ್ದರೆ ಖಾಸಗಿ ವಾಹನಗಳ ಮೊರೆ ಹೋಗಬೇಕು. ಒಟ್ಟು 9 ಕಿ.ಮೀ. ಇರುವ ಈ ರಸ್ತೆ ಹಾಲಾಡಿ – ಚೋರಾಡಿ- ವಂಡಾರು – ಮಾವಿನಕಟ್ಟೆಯನ್ನು ಸಂಧಿಸುತ್ತದೆ. 

ಎಲ್ಲಿದೆ…?
ಹಾಲಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದೆ ಚೋರಾಡಿ ಎಂಬ ಊರು. ಈ ಊರಿಗೆ ಸಂಪರ್ಕ ಕಲ್ಪಿಸಲು ಸುವ್ಯಸ್ಥಿತ ಡಾಮರು ರಸ್ತೆಯಿದೆ. ಅಗಲ ಕಿರಿದಾದರೂ ಹೇಳಿಕೊಳ್ಳುವಷ್ಟು ಹಾಳಾಗಿಲ್ಲ. ಈ ರಸ್ತೆಯಲ್ಲಿ ಸಾಗಿದರೆ,  ಚೇರ್ಕೆ, ಮುದೋರಿ, ಬಾಬಿನಾಡಿ, ತೊಟ್ಟೊಟ್ಟು, ಕಾಸಾಡಿ, ಗೋಳಿಯಂಗಡಿ ಮೊದಲಾದ ಪ್ರದೇಶಗಳಿವೆ. ಇಷ್ಟೂ ಊರಿನ ಸಂಪರ್ಕಕ್ಕೆ ಇರುವ ಪ್ರಮುಖ ರಸ್ತೆ ಇದಾದರೂ ಬಸ್ಸುಗಳಿಲ್ಲ, ರಿಕ್ಷಾ, ಜೀಪು ಸರ್ವೀಸ್‌ ಇಲ್ಲ ಎನ್ನುತ್ತಾರೆ ಗ್ರಾ.ಪಂ. ಸದಸ್ಯ ಅಶೋಕ್‌ ಶೆಟ್ಟಿ. 

ಬವಣೆ
ಹಾಲಾಡಿ ಪೇಟೆ ಈ ಭಾಗದ ಜನರಿಗೆ ಮುಖ್ಯ. ಕಾರಣ, ಹಾಲಾಡಿ ಕುಂದಾಪುರ, ಆಗುಂಬೆ, ಸಾಗರ, ಹೆಬ್ರಿ, ಕಾರ್ಕಳ, ಕೊಲ್ಲೂರು, ಶಿವಮೊಗ್ಗ ಮೊದಲಾದ ಕಡೆಗೆ ನೇರ ಸಂಪರ್ಕ ಸಾಧಿಸುವ ತಾಣ.  ಎಲ್ಲ ಹಳ್ಳಿಯವರಿಗೂ ಇದೇ ಪ್ರದೇಶ ಶಾಲಾ-ಕಾಲೇಜುಗಳಿಗೆ ತೆರಳಲು, ನಿತ್ಯದ ವ್ಯವಹಾರಕ್ಕೆ,   ಬ್ಯಾಂಕ್‌ ಕೆಲಸ, ಪಡಿತರ, ಆಸ್ಪತ್ರೆಗೆ ತೆರಳಲು, ಬಸ್ಸು ಸಂಪರ್ಕಕ್ಕೆ ಸುಲಭ ಆಯ್ಕೆ. ಆದರೆ ಚೋರಾಡಿಯಿಂದ ಹಾಲಾಡಿ ತಲುಪುವುದೇ ಕಷ್ಟ. ಬೆಳಗ್ಗೆ ಮತ್ತು ಸಂಜೆ ಆರೆಂಟು ಕಿ.ಮೀ. ನಡೆಯುವುದೇ ಶಿಕ್ಷೆ. ಮಧ್ಯಾಹ್ನದ ಬಿಸಿಲಿದ್ದರೆ ಕೇಳುವುದೇ ಬೇಡ. ಹಾಗಾಗಿ ಶಾಲಾ ಕಾಲೇಜು ಮಕ್ಕಳಿಗಷ್ಟೇ ಅಲ್ಲ ಎಲ್ಲರಿಗೂ ಸಮಸ್ಯೆ ತಂದಿತ್ತಂತಾಗಿದೆ.

ರಸ್ತೆಗೆ ಕಂಟಕ
ಸ್ವರ್ಣಾನದಿ ನೀರು ವರ್ಷದ 8 ತಿಂಗಳು ಮಾತ್ರ ಸಾಲುತ್ತಿದ್ದು ಉಳಿದ 4 ತಿಂಗಳಿಗೆ ವಾರಾಹಿ ನದಿಯಿಂದ ಉಡುಪಿಗೆ ನೀರು ಕೊಡುವ ಯೋಜನೆ ತಯಾರಾಗಿದೆ. ಇದಕ್ಕಾಗಿ ಅಮೃತ್‌ (ಅಟಲ್‌ ಮಿಶನ್‌ ರೆಜುವಿನೇಶನ್‌ ಆಂಡ್‌ ಅರ್ಬನ್‌ ಟ್ರಾನ್ಸ್‌ಫಾರ್ಮೇಶನ್‌) ಯೋಜನೆಯಲ್ಲಿ 122.5 ಕೋ.ರೂ. ವೆಚ್ಚದಲ್ಲಿ ಡಿಪಿಆರ್‌ ಮಾಡಲಾಗಿದೆ. ಹಾಲಾಡಿಯ ಭರತ್ಕಲ್‌ನಿಂದ 864 ಎಂಎಂ ಗಾತ್ರದ ಪೈಪಿನಲ್ಲಿ 38.5 ಕಿಮೀ.ದೂರದ ಬಜೆ ಅಣೆಕಟ್ಟಿಗೆ ನೀರು ಹಾಕಿ ಅಲ್ಲಿ ಶುದೀœಕರಿಸಿ ಉಡುಪಿಗೆ ಕಳುಹಿಸಲಾಗುತ್ತದೆ. ಆದರೆ ಹಾಗೆ ಕಳುಹಿಸುವಾಗ ಪೈಪ್‌ಗಾಗಿ ಅಗೆತ ಮಾಡಿ ಈ ಚೋರಾಡಿ ರಸ್ತೆಗೆ ಗಂಡಾಂತರ ಬರಲಿದೆ ಎಂಬ ಆತಂಕ ಊರವರದ್ದು.

ಸಮಸ್ಯೆಗಳು
ಈಗಿನ ಡಿಪಿಆರ್‌ನಂತೆ ರಸ್ತೆ ಬದಿ ಅಥವಾ ರಸ್ತೆಯನ್ನೇ ಬಗೆದು 1.5 ಮೀ.ಅಗಲ, 2 ಮೀ. ಆಳದಲ್ಲಿ ಪೈಪ್‌ಲೈನ್‌ ಅಳವಡಿಸಲಾಗುತ್ತದೆ. ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳು ತೀರಾ ಕಿರಿದಾಗಿದ್ದು ಕಾಮಗಾರಿಯಿಂದಾಗಿ ಹಾನಿಯಾಗಲಿದೆ. ಭವಿಷ್ಯದಲ್ಲಿ ರಸ್ತೆ ಅಗಲಗೊಳಿಸಲಾಗದು. ಪೈಪ್‌ಲೈನ್‌ ಹಾದುಹೋಗುವ ಬಹುತೇಕ ಕಡೆ ರಸ್ತೆಯ ಎರಡೂ ಬದಿ ಗದ್ದೆ, ತೋಟ, ಮನೆ, ಖಾಸಗಿ ಜಾಗ ಇದ್ದು ಡಿಪಿಆರ್‌ನಲ್ಲಿ  ಭೂಸ್ವಾಧೀನಕ್ಕೆ ಅನುದಾನ ಇಟ್ಟಿಲ್ಲ. ಆದ್ದರಿಂದ ರಸ್ತೆ ಹಾಳುಗೆಡವದಂತೆ ಡಿಪಿಆರ್‌ ಬದಲಿಸಬೇಕು ಎಂಬ ಬೇಡಿಕೆ ಇದೆ. ಹಾಲಾಡಿ ಗ್ರಾಮ ಪಂಚಾಯತ್‌ ಹಾಲಾಡಿ 28 ಹಾಗೂ ಹಾಲಾಡಿ 76 ಎಂಬ ಎರಡು ಗ್ರಾಮಗಳನ್ನು ಹೊಂದಿದೆ. ಇಲ್ಲಿ ಕ್ರಮವಾಗಿ 335 ಹಾಗೂ 764 ಮನೆಗಳಿದ್ದು ಒಟ್ಟು 5,307 ಜನಸಂಖ್ಯೆಯಿದೆ. ಪಂಚಾಯತ್‌ನಲ್ಲಿ 11 ಜನ ಸದಸ್ಯರಿದ್ದಾರೆ. ಚೋರಾಡಿಯ ಜನರ ಸಾರಿಗೆ ಬೇಡಿಕೆ ಈಡೇರಿಕೆಗೆ ಇವರು ಸ್ಪಂದಿಸಲಿದ್ದಾರೆಯೇ ಎಂದು ನೋಡಬೇಕಿದೆ.

ಅತ್ಯವಶ್ಯ
ಈ ರಸ್ತೆ ಮೂಲಕ ಸಾರ್ವಜನಿಕ ಸಾರಿಗೆ ತುರ್ತಾಗಿ ಆರಂಭವಾಗಬೇಕು. ಸಂಬಧಪಟ್ಟವರು ಗಮನಿಸಿ ಶಾಲಾ ಕಾಲೇಜು ಮಕ್ಕಳ, ಗೃಹಿಣಿಯರ ಸಂಕಷ್ಟ ನಿವಾರಿಸಬೇಕು. 
– ಅಶೋಕ್‌ ಶೆಟ್ಟಿ, 
ಪಂಚಾಯತ್‌ ಸದಸ್ಯರು, ಹಾಲಾಡಿ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.