ಇದ್ದೂ ಇಲ್ಲದಂತಾಗಿದೆ “ಸುರಕ್ಷಾ ಪೊಲೀಸ್‌ ಆ್ಯಪ್‌’


Team Udayavani, Feb 7, 2018, 10:38 AM IST

police.jpg

ಉಡುಪಿ: ಕಾನೂನು ಉಲ್ಲಂಘನೆ, ಕಿರುಕುಳ ನೀಡಿದರೆ, ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಕ್ಷಣಮಾತ್ರದಲ್ಲಿ ಪೊಲೀಸರಿಗೆ ತಿಳಿಸಲು ಉಡುಪಿ ಪೊಲೀಸರು 3 ವರ್ಷದ ಹಿಂದೆ “ಸುರಕ್ಷಾ ಪೊಲೀಸ್‌ ಆ್ಯಪ್‌’ ಹೊರತಂದಿದ್ದರು. ಆದರೆ ಈ ಆ್ಯಪ್‌ ಇದೀಗ ಇದ್ದೂ ಇಲ್ಲದಂತಾಗಿದೆ.  

ಅಣ್ಣಾಮಲೈ ಅವರು ಎಸ್‌ಪಿ ಯಾಗಿದ್ದ ಸಂದರ್ಭ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ಅತ್ಯಲ್ಪ ಸಮಯದಲ್ಲಿ ಸಮಸ್ಯೆ ಬಗೆಹರಿಸಲು 2017 ಮಾ.27ರಂದು ಆ್ಯಪ್‌ ಹೊರತಂದಿದ್ದರು. ಇದಕ್ಕೆ ಹಲವಾರು ದೂರುಗಳೂ ಬರುತ್ತಿದ್ದವು. ಆದರೆ ಅಣ್ಣಾಮಲೈ ನಿರ್ಗಮನ ಬಳಿಕ ಕೆ.ಟಿ. ಬಾಲಕೃಷ್ಣ ಎಸ್‌.ಪಿ.ಯಾಗಿದ್ದು, ಅವರ 1 ವರ್ಷದ ಕಾರ್ಯಾವಧಿಯಲ್ಲಿ ಆ್ಯಪ್‌ ಸ್ತಬ್ಧವಾಗಿತ್ತು. ಬಳಿಕ ಎಸ್‌.ಪಿ.ಯಾಗಿ ಡಾ| ಸಂಜೀವ್‌ ಎಂ. ಪಾಟೀಲ್‌ ಅವರು ಬಂದಿದ್ದು ಕೆಲವೊಂದು ದೂರುಗಳು ಬರುತ್ತಿದ್ದವು. 

ಅಧಿಕಾರಿಗಳಿಗೆ ನಿರಾಸಕ್ತಿ
ನೋಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ, ರಸ್ತೆಯಲ್ಲಿ ನಡೆದಾಡುವ ಮಹಿಳೆಯರಿಗೆ ಕಿರುಕುಳ, ಇನ್ನಿತರ ದೂರುಗಳು ಕ್ಷಣಮಾತ್ರದಲ್ಲಿ ಆ್ಯಪ್‌ ಮೂಲಕ ಪರಿಹಾರ ಕಾಣುತ್ತಿದ್ದವು. ಅಣ್ಣಾಮಲೈ ನಿರ್ಗಮನ ಬಳಿಕ ಆ್ಯಪ್‌ ವ್ಯವಸ್ಥೆ ಮುಂದುವರಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದರೂ ಕಾಟಾಚಾರಕ್ಕಷ್ಟೇ ಆಗಿದೆ.  

ಕನ್ನಡದಲ್ಲೂ ದೂರಿಗೆ ಅವಕಾಶ
ಆ್ಯಪ್‌ನಲ್ಲಿ ಕನ್ನಡ ಯುನಿಕೋಡ್‌ ಮೂಲಕ ಟೈಪ್‌ ಮಾಡಿಯೂ ಆ್ಯಪ್‌ನಲ್ಲಿ ದೂರು ಕಳಿಸಬಹುದು. ಒಂದು ವೇಳೆ ಮೊಬೈಲ್‌ ಸಪೋರ್ಟ್‌ ಮಾಡದಿದ್ದರೆ ದೂರು ಟ್ರ್ಯಾಕಿಂಗ್‌ ಬಾಕ್ಸ್‌ನಲ್ಲಿ ಪ್ರಶ್ನಾರ್ಥಕ ಚಿಹ್ನೆ ಕಾಣಿಸುತ್ತದೆ. ಆದರೆ ಕನ್ನಡದಲ್ಲಿ ಬರೆದ ದೂರು ಸಂಬಂಧಪಟ್ಟವರಿಗೆ ತಲುಪಿರುತ್ತದೆ. ಆಂಗ್ಲ ಭಾಷೆಯಲ್ಲಿ ದೂರು ಕಳುಹಿಸಿದರೆ ಉತ್ತಮ. ಫೀಡ್‌ಬ್ಯಾಕ್‌ನಲ್ಲಿ ಪೊಲೀಸ್‌ ಇಲಾಖೆಗೆ ಸಲಹೆಗಳನ್ನೂ ಕಳುಹಿಸಿಕೊಡಬಹುದು. ದಾಖಲೆಯಾಗಿ 1 ಫೊಟೋ ಅಪ್‌ಲೋಡ್‌ ಮಾಡಲು ಸಾಧ್ಯವಿದೆ. ಹೆಚ್ಚಿನ ಫೊಟೋ ಅಪ್‌ಲೋಡ್‌ಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಸಾರ್ವಜನಿಕರದ್ದು. 

ಆ್ಯಪ್‌ ನಿರ್ವಹಣಾ ತಂಡ
ಉಡುಪಿಯ ಚಿಪ್ಸಿ ಸಂಸ್ಥೆಯ ಸಂದೀಪ್‌ ಭಕ್ತ ಮತ್ತವರ ತಂಡವು ಸುರಕ್ಷಾ ಪೊಲೀಸ್‌ ಆ್ಯಪ್‌ ಅನ್ನು ಡೆವಲಪ್‌ ಮಾಡಿದ್ದು ತಾಂತ್ರಿಕ ನಿರ್ವಹಣೆಯನ್ನೂ ಮಾಡುತ್ತಿದೆ. ಆಡಳಿತಾತ್ಮಕ ನಿರ್ವಹಣೆಯನ್ನು ಎಸ್‌ಪಿ ಮತ್ತವರ ನಿರ್ದೇಶನದಲ್ಲಿ ಎಎಸ್‌ಪಿ, ಡಿಪಿಒ, ಡಿವೈಎಸ್‌ಪಿ, ಡಿಸಿಆರ್‌ಬಿ, ಡಿಎಸ್‌ಬಿ, ಎಫ್ಪಿಬಿ ಮತ್ತು ಐಟಿ ವಿಭಾಗ ನಿರ್ವಹಿಸುತ್ತಿ¤ದೆ.

ಮೊದಲ 17 ತಿಂಗಳು 702 ದೂರು ಅನಂತರದ 17 ತಿಂಗಳು 114 ದೂರು 
ಅಣ್ಣಾಮಲೈ ಅವರಿದ್ದ ಸಮಯದ 17 ತಿಂಗಳಲ್ಲಿ 702 ದೂರುಗಳು ಬಂದಿದ್ದವು. ಅದರಲ್ಲಿ 701 ದೂರು ಇತ್ಯರ್ಥಪಡಿಸಲಾಗಿತ್ತು. ಅನಂತರದ 17 ತಿಂಗಳಲ್ಲಿ ಕೇವಲ 114 ದೂರುಗಳಷ್ಟೇ ಬಂದಿವೆ. ಅಣ್ಣಾಮಲೈ ಅಧಿಕಾರಾವಧಿಯ ಅನಂತರದಲ್ಲಿ ಆ್ಯಪ್‌ನಲ್ಲಿ ಎಸ್‌ಪಿಗಳ ಹೆಸರು ಬದಲಾಗಿದೆಯೇ ಹೊರತು ಯಾವುದೇ ಅಪ್ಡೆàಟ್ಸ್‌ ಇಲ್ಲ.  

ಆ್ಯಪ್‌-ಹೀಗೆ ಡೌನ್‌ಲೋಡ್‌ ಮಾಡಿಕೊಳ್ಳಿ
ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಿ ಸುರಕ್ಷಾ ಪೊಲೀಸ್‌ ಎಂದು ಟೈಪ್‌ ಮಾಡಿ. ಬಳಿಕ ಇನ್‌ಸ್ಟಾಲ್‌ ಮಾಡಿ. ಅನಂತರ ಹೆಸರು, ಮೊಬೈಲ್‌ ನಂಬರ್‌ ಹಾಕಿ ನೋಂದಣಿ ಮಾಡಬೇಕು. ನೋಂದಣಿಯಾದರೆ ಮಾತ್ರ ಆ್ಯಪ್‌ನಲ್ಲಿ ದೂರು ದಾಖಲಿಸಲು, ವೀಕ್ಷಿಸಲು, ದಾಖಲೆ ಅಪ್‌ಲೋಡ್‌ಗೆ ಅವಕಾಶ. 

– ಚೇತನ್‌ ಪಡುಬಿದ್ರಿ 

ಟಾಪ್ ನ್ಯೂಸ್

MB-Patil-Minister

Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ “ಕೈ’ ಹಾಕಲಿದೆಯೇ?

Police-logo

CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್‌ ಪೊಲೀಸ್‌ ಠಾಣೆ ಬಂಟ್ವಾಳಕ್ಕೆ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Japan rivals: ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MB-Patil-Minister

Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ “ಕೈ’ ಹಾಕಲಿದೆಯೇ?

Police-logo

CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್‌ ಪೊಲೀಸ್‌ ಠಾಣೆ ಬಂಟ್ವಾಳಕ್ಕೆ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Japan rivals: ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.