ಇನ್ನೂ ಈಡೇರಿಲ್ಲ ಕುರು ಜನರ ಸೇತುವೆಯ ಕನಸು
ಮಳೆಗಾಲದಲ್ಲಿ ನದಿ ದಾಟುವುದೇ ದೊಡ್ಡ ಸಾಹಸ; ಸಂಪರ್ಕಕ್ಕೆ ದೋಣಿಯೇ ಆಸರೆ
Team Udayavani, Jul 22, 2019, 5:02 AM IST
ವಿದ್ಯಾರ್ಥಿಗಳು ದೋಣಿಯಲ್ಲಿ ಸಾಗುತ್ತಿರುವುದು.
ಉಪ್ಪುಂದ: ಮರವಂತೆ ಕುರು ನಿವಾಸಿಗಳ ಬದುಕು ಅತ್ತ ಹೋಗದು ಇತ್ತ ಸಾಗದು ಎನ್ನುವಂತಾಗಿದೆ. ಸೌರ್ಪಣಿಕಾ ನದಿಯ ನಡುವೆ ಬದುಕುವ ಇವರಿಗೆ ದೋಣಿಯೇ ಸಂಪರ್ಕ ಕೊಂಡಿ. ಜನಪ್ರತಿನಿಧಿಗಳ ಭರವಸೆ ಈಡೇರದೆ ಉಳಿದಿದ್ದು ನಿವಾಸಿಗಳ ಬದುಕು ಅಭದ್ರತೆಯಿಂದ ಕೂಡಿದೆ.
ಕುರು ದ್ವೀಪ ಪ್ರದೇಶವಾಗಿದ್ದು, ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದೆ. ಈ ಪ್ರದೇಶವು 40 ಎಕರೆ ಭೂ ಭಾಗ ಹೊಂದಿದೆ. 10 ಮನೆಗಳಿವೆ. ಮೊದಲು 100ಕ್ಕೂ ಅಧಿಕ ಜನರು ಇದ್ದು, ಈಗ 60 ಜನರು ವಾಸವಾಗಿದ್ದಾರೆ. ನಡು ರಾತ್ರಿಯಲ್ಲಿ ತುರ್ತು ಆರೋಗ್ಯ ದೃಷ್ಟಿಯಿಂದ ಆಸ್ಪತ್ರಗೆ ದಾಖಲಾಗಬೇಕಾದರೆ ದೋಣಿಗೇ ಅಂಟಿಕೊಳ್ಳಬೇಕು.
ದೋಣಿ ಇದ್ದರೆ ಬದುಕು
ಮಳೆಗಾಲದ ದಿನಗಳನ್ನು ಆತಂಕದಿಂದ ಕಳೆಯುತ್ತಿದ್ದು, ಸೌರ್ಪಣಿಕಾ ನದಿ ಮುನಿಸಿಕೊಂಡಾಗ ಮನೆಯೊಳಗೆ ನೀರು ತುಂಬಿರುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯನ್ನು ಭೇದಿಸಿಕೊಂಡು ತಾವೇ ಮುಂದಾಗಿ ದೋಣಿ ಬಳಸಿಕೊಂಡು ತಮ್ಮ ಕಾಯಕಗಳಿಗೆ ತೆರಳಬೇಕು.
ಮೊದಲು ಮರವಂತೆ ವರಹಾ ಸ್ವಾಮಿ ದೇವಸ್ಥಾನದ ಹತೀರ ಪಡುಕೋಣೆಗೆ ಹೋಗಲು ದೋಣಿ ವ್ಯವಸ್ಥೆ ಮಾಡಲಾಗಿತ್ತು, ಇದರಲ್ಲಿಯೇ ಜನ ಕರು ವಿಗೂ ಪಯಣ ಮಾಡುತ್ತಿದರು. ಇದೀಗ ಅಲ್ಲಿ ಸೇತುವೆ ನಿರ್ಮಾಣವಾಗಿದ್ದರಿಂದ ದೋಣಿ ವ್ಯವಸ್ಥೆಯನ್ನು ನಿಲ್ಲಿಸಿದ್ದು, ತಮ್ಮ ಮನೆಗಳ ದೋಣಿಯೇ ಗತಿಯಾಗಿದೆ.
ಸಂಕಷ್ಟದಲ್ಲಿ ವಿದ್ಯಾರ್ಥಿಗಳು
ಕುರುವಿನಿಂದ 20 ಮಕ್ಕಳು ನಾಡ ಕೋಟೆಗುಡ್ಡೆ ಹಾಗೂ ಇತರೆ ಶಾಲೆಗಳಿಗೆ ಹೋಗಿ ಬರಲು ದೋಣಿಯೇ ಆಸರೆಯಾಗಿದೆ. ನೀರಿನ ಅಬ್ಬರದ ನಡುವೆ ನದಿ ದಾಟುವಾಗ ಎದೆ ಝಲ್ಲೆನ್ನುತ್ತದೆ.
ಮಳೆಗಾಲದಲ್ಲಿ ಪ್ರತಿ ದಿನ ಬೆಳಗ್ಗೆ, ಸಂಜೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಸಾಹಸ ಮಾಡಬೇಕಾದ ಪರಿಸ್ಥಿತಿ.
ಕೃಷಿ ಚಟುವಟಿಕೆಗೆ ತೊಂದರೆ
ನದಿ ತುಂಬಿ ಹರಿಯುತ್ತಿರುವುದರಿಂದ ಜನತೆ ಕೃಷಿ ಉಪಕರಣಗಳನ್ನು ತರಲು ಹಾಗೂ ಬೆಳೆದ ಬೆಳೆಗಳನ್ನು ನಗರಕ್ಕೆ ಮಾರುಕಟ್ಟೆಗೆ ಸಾಗಿಸುವ ಸಂದರ್ಭ ಇವರ ಸ್ಥಿತಿ ತೀರಾ ಕಷ್ಟದ್ದು. ಮಳೆಗಾಲದಲ್ಲಿ ನೀರಿನ ಸೆಳೆತ ಅಧಿಕವಿದ್ದು. ಇಲ್ಲಿಂದ ವರಹಾ ದೇವಸ್ಥಾನದ ತೀರದ ವರೆಗೆ ಹೋಗಲು ಅಸಾಧ್ಯ.
ಮರವಂತೆ ಕೇಶವ ಬಬ್ಬೊàರ್ಯ ದೇವಸ್ಥಾನದ ಮೂಲಕ ಸುತ್ತು ಬಳಸಿ ಕಾಲು ದಾರಿಯಲ್ಲಿ ಕ್ರಮಿಸಿದಲ್ಲಿ ಮಾತ್ರ ಬೇಕಾದ ವಸ್ತುಗಳನ್ನು ತರಲು ಹೋಗಬಹುದಾಗಿದೆ.
ಕರುವಿನ ಜನರ ನೆಮ್ಮದಿಯ ಓಡಾಟಕ್ಕೆ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಇನ್ನಾದರೂ ಸೇತುವೆ ಭಾಗ್ಯ ದೊರಕಿಸುತ್ತಾರೆಯೇ ಕಾದು ನೊಡಬೇಕಿದೆ..
ಬೇಡಿಕೆಗೆ ಸ್ಪಂದಿಸಿ
ಮಳೆಗಾಲದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ನದಿ ದಾಟುವುದು ದುಸ್ಸಾಹಸ ಮಾಡಿದಂತೆ, ಮಳೆಗಾಲದಲ್ಲಿ ಆತಂಕದಿಂದಲ್ಲೇ ದಿನಗಳನ್ನು ದೂಡುವಂತಾಗಿದೆ. ಜನಪ್ರತಿನಿಧಿಗಳು ಸಮಸ್ಯೆಗಳನ್ನು ಅರಿತು ನಮ್ಮ ಬೇಡಿಕೆಗೆ ಸ್ಪಂದಿಸಲಿ.
–ರಾಮಚಂದ್ರ ಹೆಬ್ಟಾರ್,
ಕುರು ನಿವಾಸಿ
ಬೇಡಿಕೆ ಪರಿಗಣಿಸಲಾಗಿದೆ
ಕುರು ಪ್ರದೇಶದ ಜನರ ಸಮಸ್ಯೆಗಳ ಕುರಿತು ತಿಳಿದಿದ್ದೇನೆ. ಸೇತುವೆ ನಿರ್ಮಾಣವನ್ನು ಆದ್ಯತೆಯ ಮೇರೆಗೆ ಪರಿಗಣಿಸುತ್ತೇನೆ.
-ಬಿ.ಎಂ. ಸುಕುಮಾರ್ ಶೆಟ್ಟಿ,
ಬೈಂದೂರು ಶಾಸಕರು
-ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.