ಭಾರತ ಸೇವೆಗಾಗಿ ಯೋಧರನ್ನು ನೀಡಿದ ಈ ಭೂಮಿ ಧನ್ಯ: ಮಂಜಪ್ಪ
Team Udayavani, Apr 28, 2017, 12:27 PM IST
ತೆಕ್ಕಟ್ಟೆ (ಹೆಗ್ಗೂರುಬೆಟ್ಟು): ಈ ದೇಶದಲ್ಲಿ ಹೊಟ್ಟೆ ಹಸಿದವನಿಗೆ ಊಟ ಹಾಕುವ ಪದ್ಧತಿಯ ಬದಲು ಹೊಟ್ಟೆ ತುಂಬಿದವರಿಗೆ ಊಟ ಹಾಕುವ ಪ್ರವೃತ್ತಿ ಈ ಸಮಾಜದಲ್ಲಿದೆ. ಹೊಟ್ಟೆ ಹಸಿದವನಿಗೆ ಊಟ ಹಾಕುವ ಪದ್ಧತಿಯಂತೆ ಇಲ್ಲಿನ ಯುವ ಸಮುದಾಯ ನಿಜವಾಗಿಯೂ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಗ್ರಾಮದ ಯೋಧರನ್ನು ಭಾರತ ಸೇವೆಗಾಗಿ ಈ ಭೂಮಿ ಕೊಟ್ಟಿದೆ ಅದು ಈ ಭೂಮಿಯ ಧನ್ಯತೆ ಎಂದು ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಹೇಳಿದರು.
ಅವರು ಎ. 26ರಂದು ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಸೇವೆಯಲ್ಲಿರುವ ಯೋಧರನ್ನು ಗುರುತಿಸುವ ಸಲುವಾಗಿ ನಡೆದ ಸೇನಾ ಸತ್ಕಾರ -2017 ಉದ್ದೇಶಿಸಿ ಮಾತನಾಡಿದರು.
ಸೈನಿಕರಿಗೆ ಸಮ್ಮಾನ ಮಾಡುವ ಸುಯೋಗ ಒದಗಿ ಬಂದಿರುವುದೇ ತನ್ನ ಭಾಗ್ಯ. ಇಲ್ಲಿನ ಯುವಕರು ಬಹಳ ವಿಚಾರವಂತರಾಗಿದ್ದು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾದ ಗೌರವವನ್ನು ತಂದುಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಿ ಸ್ವತ್ಛ ಪರಿಸರ ಹಾಗೂ ಸ್ವಸ್ಥ ಸಮಾಜವಿರುವುದೋ ಅಲ್ಲಿ ನೆಮ್ಮದಿ ಇರುತ್ತದೆ. ಅದರಂತೆ ಯುವಕರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವದ ಉತ್ತಮ ನಾಗರಿಕರನ್ನು ಸೃಷ್ಟಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಯುವಕರು ಮಾದಕ ವ್ಯಸನಕ್ಕೆ ಬಲಿ ಬೀಳದಂತೆ ಜಾಗೃತಿ ಮೂಡಿಸಿ ಧಾರ್ಮಿಕ ಮನೋಭಾವನೆ ಬೆಳೆಸಿದಾಗ ಮಾತ್ರ ಆತ್ಮಶುದ್ಧಿ ಹಾಗೂ ಕೆಟ್ಟ ಭಾವನೆಗಳು ದೂರವಾಗುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸಾಂಕೇತಿಕವಾಗಿ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರು ನಮ್ಮ ದೇಶ ಸೇವೆಯಲ್ಲಿರುವ ಗ್ರಾಮದ ವೀರ ಯೋಧ ನಿವೃತ್ತ ಯೋಧ ಶಿವರಾಮ ಶೆಟ್ಟಿ ತೆಕ್ಕಟ್ಟೆ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವಿ ಕಾಂಚನ್ ಕೊರವಡಿ, ನವೀನ್ ಪೂಜಾರಿ ಹೆಗ್ಗೂರುಬೆಟ್ಟು, ಪ್ರಭಾಕರ ಹರಪನಕೆರೆ, ರವಿ ಶೆಟ್ಟಿ ತೆಕ್ಕಟ್ಟೆ, ಸುಧಾಕರ ಹರಪನಕೆರೆ, ಅರುಣ್ ಕೊಮೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ನಿಖೀಲ್ ನಾಯಕ್ ಇವರನ್ನು ಗುರುತಿಸಿ ಸಮ್ಮಾನಿಸಿದರು ಮತ್ತು ಛತ್ತೀಸ್‌ಗಢದ ಸುಖಾ¾ ಜಿಲ್ಲೆಯಲ್ಲಿ ನಕ್ಸಲರ ಗುಂಡಿಗೆ ಬಲಿಯಾದ 26 ಸಿಆರ್‌ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದಲ್ಲಿ ಕುಂಭಾಶಿ ಗ್ರಾ. ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ, ಮಾಜಿ ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್, ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇವರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ಕುಂಭಾಶಿ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್, ಗುರುರಾಜ, ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷ ಜಿ.ವಿ. ರಮೇಶ್ ಕಾಂಚನ್, ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಫ್ರೆಂಡ್ಸ್ ಇದರ ಮಾಜಿ ಅಧ್ಯಕ್ಷರಾದ ಆನಂದ ಪೂಜಾರಿ, ಕರಿಯ ಪೂಜಾರಿ ಹಾಗೂ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಫ್ರೆಂಡ್ಸ್ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.ಅರುಣ ಪೂಜಾರಿ ಸ್ವಾಗತಿಸಿ, ಶಿಕ್ಷಕ ಅಶೋಕ್ ತೆಕ್ಕಟ್ಟೆ ನಿರೂಪಿಸಿ, ಪ್ರಶಾಂತ್, ರವೀಶ್ ಕೊರವಡಿ ಕಾರ್ಯಕ್ರಮ ಸಂಘಟಿಸಿ, ಕೊಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಹರಪನಕೆರೆ ವಂದಿಸಿದರು.
ಅಮ್ಮಾ ಕ್ಷಮಿಸು…
ತಾನು ಹುಟ್ಟಿ ಬೆಳೆದಿರುವ ಊರಿನಲ್ಲಿ ಸಮ್ಮಾನವಾಗಿರುವುದು ಸಂತೋಷ ತಂದಿದೆ. ಉಡುಪಿ ಜಿಲ್ಲೆಯವರು ಭಾರತೀಯ ಸೈನ್ಯದಲ್ಲಿರುವವರು ವಿರಳ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿರುವ ಆಸಕ್ತ ಯುವಕರು ಭಾರತೀಯ ಸೈನ್ಯವನ್ನು ಸೇರಬೇಕು ಎನ್ನುವುದೇ ತನ್ನ ಹಂಬಲ. ನಾವಿಬ್ಬರು ಸಹೋದರರು ಕೂಡ ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತೇವೆ ಎನ್ನುವ ಹೆಮ್ಮೆ ನನಗಿದೆ. ಆದರೆ ಹಲವು ದಿನಗಳಿಂದಲೂ ಮನಸ್ಸಿನಲ್ಲಿ ಬೇಸರದ ಭಾವ ಕಾಡುತ್ತಿದೆ. ಇಲ್ಲಿ ನಮ್ಮನ್ನು ಸಾಕಿ ಸಲಹಿದ ಅಮ್ಮನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅಮ್ಮಾ ಕ್ಷಮಿಸು …
– ಪ್ರಭಾಕರ ಹರಪನಕೆರೆ, ಯೋಧರು ಭಾರತೀಯ ಸೇನೆ.
ಹೂಡಿಹಾಕದ್ ನೆಲ್ಗಡ್ಲಿ ಗೆದ್ದೆಗ್ ಓಡುದ್
ನಮ್ ಮಿಲಿಟ್ರಿ ಶೆಟ್ರ ಮಾರ್ಗದರ್ಶನದಿಂದ ಆರ್ಮಿಯಲ್ ಸೇವೆ ಮಾಡ್ತಿದ್ದಿ, ಸೈಕಲ್ ತಕಂಡ್ ನಾನು ಪ್ರಭಾಕರ ಅವ್ರ ಮನೀಗ್ ದಿನªಲ್ ಮೂರೂ¾ರ್ ಸಲ್ ಹೋಯಿ ಅಲ್ ಅಷ್ಟ ಹಾರR, ಇಲ್‌ಇಸ್ಟ್ ಕೊಣಿಕ್, ಇಲ್‌ಇಸ್ಟ್ ಓಡ್R ಎಂದ್ ಅವ್ರ ಮಾತ್ ಕೆಂಡ್ಕಂಡ್ ಬಂದ್ ಇಲ್ ಹೂಡಿಹಾಕದ್ ನೆಲ್ಗಡ್ಲಿ ಗೆದ್ದೆಗ್ ಓಡುದ್ … ಇದ್ರ ಫಲವಾಯಿ ಕಾರಾÌರªಗೆ (ಕಾರವಾರ) ನೆಡª ಇಂಟರ್‌ವ್ಯೂ ಅಲ್ ಇಡೀ ಗ್ರೌಂಡಲ್ ಓಡಿ ನಾವ್ ಫಸ್ಟ್ ಬಂದೀತ್ … ಆದ್ರೆ ಓಡಿ ಬಂದ್ ಹಿಂದ್ ತಿರಿY ಕಂಡ್ರೆ ನಮಿØಂದೆ ಯಾರು ಇರ್ಲಿಲ್ಲ.
– ನವೀನ್ ಪೂಜಾರಿ ಹೆಗ್ಗೂರುಬೆಟ್ಟು , ಯೋಧರು ಭಾರತೀಯ ಸೇನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.