ನಾಟಕ ಅಂದರೆ ರಂಜನೆ ಮಾತ್ರವಲ್ಲ : ಕೆ.ವಿ. ಅಕ್ಷರ
Team Udayavani, Feb 20, 2017, 3:45 AM IST
ಉಡುಪಿ: ರಂಜಿಸುವುದು ಮಾತ್ರ ನಾಟಕದ ಮೂಲ ಉದ್ದೇಶವಲ್ಲ. ನಾಟಕದಲ್ಲಿ ಸಮಾಜಮುಖೀ ಚಿಂತನೆ, ಸಮಸ್ಯೆಗಳಿಗೆ ಸ್ಪಂದನೆ ಬಹಳ ಮುಖ್ಯ ಎಂದು ರಂಗ ನಿರ್ದೇಶಕ, ನೀನಾಸಂ ಮುಖ್ಯಸ್ಥ ಅಕ್ಷರ ಕೆ.ವಿ. ಹೇಳಿದರು.
ಅವರು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಥಬೀದಿ ಗೆಳೆಯರ ಆಶ್ರಯದಲ್ಲಿ ಮುರಾರಿ-ಕೆದ್ಲಾಯ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂವಹನ ಮಾಧ್ಯಮಗಳು ಸಮೂಹ ಸಮ್ಮೊàಹಿನಿಮಾಧ್ಯಮಗಳಾಗುತ್ತಿವೆ. ಪ್ರಮುಖವಾಗಿ ಟಿ.ವಿ.ಅರಿವಳಿಕೆ (ಅನಸ್ತೇಶಿಯಾ) ಕೊಡುವ ಮಾಧ್ಯಮ ವಿದ್ದಂತೆ. ಉತ್ಸವಗಳು ಹೆಚ್ಚಾಗುತ್ತಿದ್ದು, ಅದರ ಮಹತ್ವ ಕಡಿಮೆಯಾಗುತ್ತಿದೆ. ನಾಟಕ, ಉತ್ಸವಗಳು ನಿಧಾನವಾಗಿ ತನ್ನ ಸಾಂಸ್ಕೃತಿಕ ಚಹರೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿವೆ. ಸಂಸ್ಕೃತಿಯು ಉಪಭೋಗಿಸುವ ಮಟ್ಟಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಆತ್ಮವಿಮರ್ಶೆ, ಆತ್ಮಾವಲೋಕನ ಅಗತ್ಯ ಎಂದರು.ತೆಂಕನಿಡಿಯೂರು ಸ.ಪ್ರ. ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ| ನಿಕೇತನ ಮಾತನಾಡಿ, ಮಹಿಳೆ ತಾನು ಒಬ್ಬಂಟಿಯಾಗಿ ಓಡಾಡಬಲ್ಲೆ ಎನ್ನುವ ಶಕ್ತಿಯು ರಂಗಭೂಮಿಯ ನಾಟಕ, ನೃತ್ಯಗಳಂತಹ ಕ್ರಿಯಾಶೀಲ ಚಟುವಟಿಕೆಯಿಂದ ಸಿಗುತ್ತವೆ. ನಾಡು ಮಾತ್ರವಲ್ಲ ಅಹಂಕಾರ ತುಂಬಿಕೊಂಡಿರುವ ನಾವೂ ಕೂಡ ಬರಿದಾಗುತ್ತಿದ್ದೇವೆ ಎಂದರು.
ಲೇಖಕ ವಿವೇಕ ಶಾನುಭಾಗ, ರಥಬೀದಿ ಗೆಳೆಯರ ಬಳಗದ ಅಧ್ಯಕ್ಷ ಮುರಳೀಧರ ಉಪಾಧ್ಯಾಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ, ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ನೀನಾಸಂ ಕಲಾವಿದರಿಂದ ಮಾಲತಿ ಮಾಧವ ಪ್ರದರ್ಶನಗೊಂಡಿತು. ಸಂತೋಷ್ ಬಲ್ಲಾಳ್ ಸ್ವಾಗತಿ
ಸಿದರು. ಸಂತೋಷ್ ನಾಯಕ್ ಪಟ್ಲ ನಿರ್ವಹಿಸಿದರು.
“ಸಮರ್ಥ ರಂಗಮಂದಿರವಿಲ್ಲ’
ರಂಗಭೂಮಿಯು ಸಾಂಸ್ಕೃತಿಕ, ಸಾಮಾಜಿಕವಾಗಿ ಮಹತ್ವ ಕಳೆದುಕೊಳ್ಳಲು ಮುಖ್ಯ ಕಾರಣ ಒಂದು ಭದ್ರವಾದ ನೆಲೆಗಟ್ಟು ಇನ್ನೂ ನಿರ್ಮಾಣವಾಗಿಲ್ಲ. ಸಾಂಸ್ಕೃತಿಕ ನಗರಿ ಎಂದು ಕರೆಯಿಸಿಕೊಂಡ ಉಡುಪಿಯಲ್ಲಿ ಇನ್ನೂ ಒಂದು ಸಮರ್ಥ ರಂಗಮಂದಿರ ನಿರ್ಮಾಣಗೊಂಡಿಲ್ಲ. ಇದ್ದ 2-3 ರಂಗಮಂದಿರ ಗಳು ಆಗ ಹೇಗೆ ಇದ್ದವೋ, ಈಗಲೂ ಹಾಗೆಯೇ ಇವೆ. ಯುವ ರಂಗಕರ್ಮಿಗಳ ಉತ್ಸಾಹ ನಿಜಕ್ಕೂ ಶ್ಲಾಘನೀಯ ಎಂದು ಕೆ.ವಿ. ಅಕ್ಷರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.