Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ
ತೆಂಕನಿಡಿಯೂರು ಗ್ರಾಮದ ಪುರಾತನ ಅತೀ ದೊಡ್ಡ ಕೆರೆ ; ತುಂಬಿದೆ ಭಾರಿ ಪ್ರಮಾಣದ ಹೂಳು -ಕೆಸರು
Team Udayavani, May 26, 2024, 7:50 AM IST
ಮಲ್ಪೆ: ಒಂದು ಕಾಲದಲ್ಲಿ ಗ್ರಾಮದ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ತೊಟ್ಟಂ ಕುಮೆ ಕೆರೆ ಇಂದು ಕೆಸರಿನೊಂದಿಗೆ ಹೂಳು ತುಂಬಿಕೊಂಡು ತನ್ನ ನೈಜ್ಯ ಸೌಂದರ್ಯವನ್ನು ಕಳೆದುಕೊಂಡಿದೆ.
ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಟ್ಟಂ ಬಳಿಯ ಈ ಕುಮೆ ಕೆರೆ ಸುಮಾರು 2 ಎಕ್ರೆ ಅಧಿಕ ವಿಸ್ತೀರ್ಣ ಹೊಂದಿದ್ದು ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತ್ತು. ಆದರೆ ಇದೀಗ ಒತ್ತುವರಿಯಾಗಿ ಒಂದೂವರೆ ಎಕ್ರೆಯಷ್ಟು ಮಾತ್ರ ಉಳಿದಿದೆ.
ಭಾರಿ ಪ್ರಮಾಣದ ಹೂಳು
ಕೆರೆಯಲ್ಲಿ ತುಂಬಿರುವ ಭಾರಿ ಪ್ರಮಾಣದ ಹೂಳಿನಿಂದಾಗಿ ನೀರಿನ ಒರತೆಯೇ ಇಲ್ಲವಾಗಿದೆ. ಹಿಂದೆ ಮೇ ಕೊನೆಯ ವರೆಗೂ ಈ ಕೆರೆಯಲ್ಲಿ ನೀರು ತುಂಬಿಕೊಂಡಿರುತ್ತಿತ್ತಲ್ಲದೆ ಸುತ್ತಮುತ್ತಲಿನ ರೈತರು ಇದೇ ಕೆರೆಯ ನೀರನ್ನು ಉಪಯೋಗಿಸಿ ಹಿಂಗಾರು ಬೆಳೆ ಬೆಳೆಯುತ್ತಿದ್ದರು. ಒಂದು ವೇಳೆ ಕೆರೆಯಲ್ಲಿ ಹೂಳು ತೆಗೆದರೆ ಶಾಶ್ವತ ನೀರು ಸಿಗುವುದರಲ್ಲಿ ಸಂಶಯವೇ ಇಲ್ಲ , ಈ ಹಿನ್ನೆಲೆಯಲ್ಲಿ ಪುರಾತನ ಕೆರೆಯನ್ನು ಉಳಿಸುವಂತೆ ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.
ಮೀನು ಹಿಡಿಯುವ ಸಂಪ್ರದಾಯ
ಪ್ರತಿ ಸೌರಮಾನ ಯುಗಾದಿಯಂದು ಜಾತಿ ಮತ ಭೇದವಿಲ್ಲದೆ ಊರಿನವರೆಲ್ಲ ಸೇರಿ ಈ ಕೆರೆಯಲ್ಲಿ ಬಲೆ ಹಾಕಿ ಮೀನು ಹಿಡಿದು ಸಂಭ್ರಮಿಸುವ ಸಂಪ್ರದಾಯ ನಡೆಯುತ್ತಿತ್ತು. ಇತ್ತೀಚಿನ ಕೆಲವೊಂದು ವರ್ಷಗಳಲ್ಲಿ ಕೆರೆಯಲ್ಲಿ ಆ ವೇಳೆ ನೀರಿನ ಪ್ರಮಾಣ ಕಡಿಮೆಯಾಗಿ ಕೆಸರು ತುಂಬಿಕೊಂಡು ಮೀನಿನ ಸಂತತಿಯೇ ಇಲ್ಲದಂತಾಗಿದೆ. ಮೀನು ಹಿಡಿಯುವ ಸಂಪ್ರದಾಯವೂ ನಿಂತು ಹೋಗಿದೆ ಎನ್ನಲಾಗಿದೆ.
ಅಭಿವೃದ್ಧಿಗೆ ಆಗ್ರಹ
ಸುಮಾರು 15 ವರ್ಷಗಳ ಹಿಂದೆ ಈ ಕೆರೆಯ ಹೂಳನ್ನು ತೆಗೆಯಲಾಗಿತ್ತು. ಅಲ್ಲಿಂದ ಇಂದಿನವರೆಗೂ ಇಲ್ಲಿ ಯಾವ ಕಾಮಗಾರಿಯೂ ನಡೆಯದ ಕಾರಣ ಪಾಳು ಬಿದ್ದಿದೆ. ಈಗಾಗಲೇ ಕೆರೆಯ ಅಭಿವೃದ್ಧಿಗೆ ಹಲವಾರು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಕೂಡ ಸರಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ . ಗ್ರಾಮ ಪಂಚಾಯತ್ ಕೆರೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮುಂದಿನ ವರ್ಷ ಆರಂಭಕ್ಕೆ ಮನವಿ
ಕಾಮಗಾರಿ ಆರಂಭಿಸಲು ಇಲಾಖೆ ಮುಂದಾಗಿ ದ್ದರೂ, ಈ ಬಾರಿ ಮಳೆ ವಿಳಂಬವಾಗಿದ್ದರಿಂದ ಕೆರೆ ನೀರನ್ನು ಬೇರೆ ಕಡೆಗೆ ಡೈವರ್ಟ್ ಮಾಡಿದರೆ ಸಮಸ್ಯೆಯಾಗಬಹುದೆಂದು ತೆಂಕನಿಡಿಯೂರು ಗ್ರಾ. ಪಂ. ಆಡಳಿತ ಕಾಮಗಾರಿಯನ್ನು ಮುಂದಿನ ವರ್ಷ ಆರಂಭಿಸುವಂತೆ ಮನವಿ ಮಾಡಿದೆ. 4 ಕೋ. ರೂ. ವೆಚ್ಚದ ಈ ಯೋಜನೆಯಲ್ಲಿ ಹೂಳೆತ್ತುವಿಕೆ, ಕೆರೆಯ ಸುತ್ತಲೂ ದಂಡೆ ರಚನೆ, ವಾಕಿಂಗ್‌ಟ್ರ್ಯಾಕ್ ಮಾಡಲಾಗುತ್ತದೆ.
-ಅರುಣ್ ಭಂಡಾರಿ, ಎ.ಇ.ಇ.,
ಸಣ್ಣ ನೀರಾವರಿ ಇಲಾಖೆ, ಉಡುಪಿ
ಕೆರೆ ಅಭಿವೃದ್ಧಿಗೆ ಸಹಕಾರ
ಕೆರೆಯ ಹೂಳು ತೆಗೆದು ಸುತ್ತ ತಡೆಗೋಡೆ ನಿರ್ಮಿಸಿ ಮೇಲೆ ದಂಡೆ ಹಾಕಿ ಸುತ್ತಲೂ ಇಂಟರ್‌ಲಾಕ್ ಅಳವಡಿಸಿ ವಾಕಿಂಗ್ ಟ್ರ್ಯಾಕ್ ಮಾಡಿದರೆ ವಾಯು ವಿಹಾರಕ್ಕೆ ಯೋಗ್ಯವಾಗಿದೆ. ಜತೆಗೆ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಬಹುದು, ಅಂತರ್ಜಲ ಸಂರಕ್ಷಣೆಗೂ ಸಹಕಾರಿಯಾದಂತಾಗುತ್ತದೆ. ಈ ಬಗ್ಗೆ ಈಗಾಗಲೇ ಗಣೇಶೋತ್ಸವ ಸಮಿತಿಯ ವತಿಯಿಂದ ಎಲ್ಲ ಇಲಾಖೆಗೆ ಮನವಿ ಮಾಡಿ ಆಗ್ರಹಿಸಲಾಗಿದೆ.
– ಪ್ರಶಾಂತ್ ಕೆ. ಸಾಲ್ಯಾನ್, ಅಧ್ಯಕ್ಷರು,
ಸಾರ್ವಜನಿಕ ಗಣೇಶೋತ್ಸವ ಸಮಿತಿ, ತೊಟ್ಟಂ
-ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.