ಕುಡಿಯುವ ನೀರು ಒದಗಿಸಲು ಶತಾಯಗತಾಯ ಪ್ರಯತ್ನ


Team Udayavani, May 16, 2019, 6:10 AM IST

kudiyuva-neerigagi

ಉಡುಪಿ: ನಗರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಶತಾಯಗತಾಯ ಪ್ರಯತ್ನ ನಡೆಯುತ್ತಿವೆ. ಒಂದೆಡೆ ಶಾಸಕರು ಖುದ್ದು ಬಜೆ ಡ್ಯಾಂನಲ್ಲಿ ಹಾಜರಾಗಿ ಶ್ರಮದಾನ ಮಾಡಿದ್ದರೆ ಮತ್ತೂಂದೆಡೆ ಸಂಘ-ಸಂಸ್ಥೆಗಳೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿವೆ. ನಗರ ಸಭೆಯ ಸದಸ್ಯರು ಕೂಡ ಸ್ವತಃ ವೆಚ್ಚ ಭರಿಸಿ ನೀರು ಪೂರೈಕೆ ಮಾಡುತ್ತಿದ್ದಾರೆ.
ದಿನಕ್ಕೆ 30 ಸಾವಿರ ಲೀ. ನೀರು ಪೂರೈಕೆ ಗುಂಡಿಬೈಲು ವಾರ್ಡ್‌ನಲ್ಲಿ ಕಳೆದ
10 ದಿನಗಳಿಂದಲೂ ವಾರ್ಡ್‌ ಸದಸ್ಯರು ದಿನವೊಂದಕ್ಕೆ 30 ಸಾವಿರ
ಲೀಟರ್‌ ನೀರು ಪೂರೈಕೆ ಮಾಡುತ್ತಿ ದ್ದಾರೆ. ಸುಮಾರು 700ರಷ್ಟು ಮನೆ
ಗಳಿದ್ದು, 600 ಮನೆಗಳಿಗೆ ನೀರು ಪೂರೈಕೆಯಾಗಿದೆ. ಬೆಳಗ್ಗೆ 11 ಗಂಟೆ ಯಿಂದ ರಾತ್ರಿ 11 ಗಂಟೆಯವರೆಗೂ ನೀರು ಸರಬರಾಜು ಮಾಡಲಾಗುತ್ತಿದೆ. ನಳ್ಳಿ ನೀರು ಮಂಗಳವಾರ ರಾತ್ರಿ ಬರಲು ಆರಂಭವಾಗಿದೆ. ಉಳಿದಂತೆ ನಗರಸಭೆಯಿಂದ 1 ಬಾರಿ ಟ್ಯಾಂಕರ್‌ ನೀರು ಪೂರೈಕೆಯಾಗಿದೆ.

ರಾತ್ರಿ 2ಗಂಟೆಯವರೆಗೂ ನೀರು ಪೂರೈಕೆ
ಸುಮಾರು 400ರಿಂದ 500ರಷ್ಟು ಮನೆಗಳಿರುವ ಕುಂಜಿಬೆಟ್ಟು ವಾರ್ಡ್‌ನಲ್ಲೂ ವಾರ್ಡ್‌ ಸದಸ್ಯರು ನೀರು ಪೂರೈಸುತ್ತಿದ್ದಾರೆ. ದಿನಕ್ಕೆ 4 ಟ್ಯಾಂಕರ್‌ನಲ್ಲಿ 24 ಸಾವಿರ ಲೀ. ನೀರು ಪೂರೈಕೆ ಯಾಗುತ್ತಿದೆ. ಇಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದರೆ ರಾತ್ರಿ 12ರಿಂದ 2 ಗಂಟೆವರೆಗೆ ನೀರು ಒದಗಿಸಲಾಗುತ್ತಿದೆ. ನಗರಸಭೆಯ ನಳ್ಳಿ ನೀರು ಶನಿವಾರ ಹಾಗೂ ರವಿವಾರ ಬಂದಿದೆ.

ನಾಗರಿಕ ಸಮಿತಿಯಿಂದ ಪೂರೈಕೆ
ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ ಮತ್ತು ಪಂಚರತ್ನ ಸೇವಾ ಟ್ರಸ್ಟ್‌ ಮುಖಾಂತರ ಸಾರ್ವಜನಿಕರಿಗೆ ಕುಡಿಯುವ ನೀರು ವಿತರಿಸುವ ಕಾರ್ಯಕ್ರಮ ಮಂಗಳವಾರ ಆರಂಭಗೊಂಡಿದ್ದು, ಬುಧವಾರವೂ ಮುಂದುವರಿಯಿತು. ಅಜ್ಜರಕಾಡು, ಕೊಡಂಕೂರು, ಮಂಚಿಕೋಡಿ ಭಾಗಗಳಿಗೆ ಬುಧವಾರ ನೀರು ಸರಬರಾಜು ಮಾಡಲಾಯಿತು. 5 ಸಾವಿರ ಲೀಟರ್‌ನ 1 ಟ್ಯಾಂಕ್‌ನಲ್ಲಿ 300ರಿಂದ 500ರಷ್ಟು ಮನೆಗಳಿಗೆ ನೀರು ವಿತರಿಸಲಾಯಿತು. ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ರಾತ್ರಿ 7 ಗಂಟೆಯವರೆಗೂ ನೀರು ಸರಬರಾಜು ಮಾಡಲಾಯಿತು.

ಪ್ರಥಮ ಕರೆ ಬಂದವರಿಗೆ ಆದ್ಯತೆ
ದಿನನಿತ್ಯ ಹಲವು ಕರೆಗಳು ನಮಗೆ ಬರುತ್ತಿವೆ. ಸಮಸ್ಯೆ ಇರುವ ಎಲ್ಲ ವಾರ್ಡ್‌
ಗಳಿಗೂ ನೀರು ಪೂರೈಸುವ ಇಚ್ಛೆ ಇದೆ. ಮೊದಲು ಕರೆ ಮಾಡಿದ ವಾರ್ಡ್‌ ಗಳಿಗೆ ತೆರಳಿ ನೀರು ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು.

ಸಮಸ್ಯೆಗೆ ಸ್ಪಂದಿಸಲು ಸದಸ್ಯರ ವಿಸಿಟಿಂಗ್‌ ಕಾರ್ಡ್‌
ಸಗ್ರಿ ವಾರ್ಡ್‌ನಲ್ಲಿ ಫ್ಲ್ಯಾಟ್‌ಗಳನ್ನು ಹೊರತುಪಡಿಸಿ ಸುಮಾರು 1,500 ಮನೆಗಳಿವೆ. ದಿನಕ್ಕೆ 20 ಸಾವಿರ ಲೀ.ನಷ್ಟು ನೀರು ಇಲ್ಲಿನ ವಾರ್ಡ್‌ ಸದಸ್ಯರು ಪೂರೈಸುತ್ತಾರೆ. ನೀರಿನ ಅಭಾವ ಇದ್ದ ಸಂದರ್ಭದಲ್ಲಿ ದಿನವೊಂದಕ್ಕೆ 30ರಿಂದ 35 ಸಾವಿರ ಲೀ.ನಷ್ಟು ನೀರು ಪೂರೈಸಲಾಗಿದೆ. ಚುನಾವಾಣೆ ಆರಂಭವಾಗುವ 10 ದಿನ ಮೊದಲೇ ಇಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿತ್ತು. ದಿನವೊಂದಕ್ಕೆ 10 ಟ್ರಿಪ್‌ ಮಾಡಲಾಗುತ್ತದೆ. ಒಂದು ಮನೆಗೆ ಸುಮಾರು 300ರಿಂದ 700 ಲೀ.ನಷ್ಟು ನೀರು ವಿತರಿಸಲಾಗುತ್ತಿದೆ.

ನೀರಿನ ಸಮಸ್ಯೆ ಇದ್ದವರಿಗೆ ಕರೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವಾರ್ಡ್‌ ಸದಸ್ಯರ ಮಾಹಿತಿಯುಳ್ಳ ವಿಸಿಟಿಂಗ್‌ ಕಾರ್ಡ್‌ ಮಾಡಿ ಇಲ್ಲಿನ ನಿವಾಸಿಗಳಿಗೆ ನೀಡಲಾಗಿದೆ. ಕರೆಮಾಡಿ ತಿಳಿಸಿದ ತತ್‌ಕ್ಷಣ ವಾರ್ಡ್‌ಸದಸ್ಯರು ಸ್ಪಂದಿಸುತ್ತಾರೆ. ವಾರ್ಡ್‌ಗೆ ನೀರು ಪೂರೈಸಲು ಮಂಜುನಾಥ ಕಲ್ಕೂರ ಅವರು ತಮ್ಮ ಮನೆಯ ಬಾವಿಯಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ. ಇದರಿಂದ ದಿನವೊಂದಕ್ಕೆ 40 ಸಾವಿರ ಲೀ.ನಷ್ಟು ನೀರು ಕೃಷ್ಣಮಠ ಸಹಿತ ವಿವಿಧ ವಾರ್ಡ್‌ಗಳಿಗೆ ಪೂರೈಕೆಯಾಗುತ್ತಿದೆ.

ಮುಖ್ಯಾಂಶಗಳು
– ನೀರಿನ ಸಮಸ್ಯೆಯಿದ್ದಲ್ಲಿ ವಾರ್ಡ್‌ ಸದಸ್ಯರನ್ನು ಸಂಪರ್ಕಿಸಿ
– ವಾರ್ಡ್‌ ಸದಸ್ಯರಿಂದ ನೀರಿನ ವ್ಯವಸ್ಥೆ
– ಸದಸ್ಯರ ನಿರ್ಣಯದಿಂದ ನಗರಸಭೆಗೂ ಅನುಕೂಲ
– ನಗರಸಭೆಯಿಂದಲೂ ಕೆಲ ಪ್ರದೇಶಗಳಿಗೆ ನೀರು ಪೂರೈಕೆ

ಸಾಮೂಹಿಕ ವರುಣ ಮಂತ್ರ ಜಪ
ಉಡುಪಿಯೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನೀರಿನ ತೀವ್ರ ಕೊರತೆಯುಂಟಾಗಿದ್ದು ಅತಿ ಶೀಘ್ರ ಮಳೆಯ ಆಗಮನವಾಗಿ ಎÇÉೆಲ್ಲೂ ಸುಭಿಕ್ಷೆ ನೆಲೆಸುವಂತಾಗಲಿ ಎಂಬ ಆಶಯದೊಂದಿಗೆ ‘ವರುಣ ದೀಪ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸಾಲಿಗ್ರಾಮದ ಡಿವೈನ್‌ ಪಾರ್ಕ್‌ ನ ಉಡುಪಿ ಶಾಖೆ ಉಡುಪಿಯ ಅಜ್ಜರಕಾಡಿನಲ್ಲಿ ಹಮ್ಮಿಕೊಂಡಿದೆ.

ಬುಧವಾರ ಈ ಕಾರ್ಯಕ್ರಮ ಆರಂಭಗೊಂಡಿದ್ದು, ಮೇ 25ರ ವರೆಗೆ 11 ದಿನಗಳ ಕಾಲ ಮುಂಜಾನೆ 6 ರಿಂದ 6.15 ಹಾಗೂ ಸಂಜೆ 6ರಿಂದ 6.15ರ ವರೆಗೆ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಎದುರು ಸಾಮೂಹಿಕ ವರುಣ ಮಂತ್ರ ಜಪ ನಡೆಯಲಿದೆ.

– ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.