ಕನ್ನಡ ಶಾಲೆಗಳಿಂದ ಉತ್ತಮ ಕೆಲಸ: ಹಾಲಾಡಿ
Team Udayavani, Apr 10, 2017, 3:55 PM IST
ಬಸ್ರೂರು: ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಕನ್ನಡ ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.ಆಂಗ್ಲ ಮಾದ್ಯಮ ಶಾಲೆಗಳ ನಡುವೆ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆಯಾದರೂ ಈ ಶಾಲೆಗಳ ಶೈಕ್ಷಣಿಕ ಸಾಧನೆ ಗಮನಾರ್ಹವಾಗಿದೆ. ಕಳೆದ 23 ವರ್ಷಗಳ ಅನಂತರ ಈ ಶಾಲೆಯ ವಾರ್ಷಿಕೋತ್ಸವ ಸಂಭ್ರಮದಿಂದ ನಡೆದಿದೆ ಎಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳ್ಕೂರು ಉತ್ತರ ಶಾಲೆಯ ವಾರ್ಷಿಕೋತ್ಸವ – ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ, ಜಿ.ಪಂ. ಸದಸ್ಯೆ ಲಕ್ಷಿ ಮಂಜು ಬಿಲ್ಲವ, ಜಿಲ್ಲಾ ವಿದ್ಯಾಂಗ ಉಪನಿದೇರ್ಶಕ ಎಚ್. ದಿವಾಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸೀತಾರಾಮ ಶೆಟ್ಟಿ, ಕೆ. ಜಯಕರ ಶೆಟ್ಟಿ, ಡಾ| ಬಿ. ವಿ. ಉಡುಪ, ವೇ|ಮೂ| ಶ್ರೀಧರ ಉಡುಪ, ಆತ್ಮಾರಾಮ ಉಪಾಧ್ಯ, ಸಿ.ಆರ್.ಪಿ. ಸದಾನಂದ ಶೆಟ್ಟಿ, ತಾ. ಪಂ. ಸದಸ್ಯ ರಾಮ ಕಿಷನ್ ಹೆಗ್ಡೆ, ಗ್ರಾ. ಪಂ. ಅಧ್ಯಕ್ಷ ಅಕ್ಷತ್ ಶೇರೆಗಾರ್, ಶಾಲಾ ಎಸ್.ಡಿ.ಎಂ. ಸಿ. ಅಧ್ಯಕ್ಷ ಮಂಜು ಮೊಗವೀರ ಉಪಸ್ಥಿತರಿದ್ದು, ಶುಭಕೋರಿದರು.
ಹಳೆವಿದ್ಯಾರ್ಥಿನಿ ಸೌಮ್ಯ ಸ್ವಸ್ತಿವಾಚನ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ರೋಜಾ ಇ ಮೊಂತೆರೋ ಶಾಲಾ ವರದಿ ಮಂಡಿಸಿದರು.
ಬಳಿಕ ಮುಖ್ಯೋಪಾಧ್ಯಾಯ ಅವರನ್ನು ಸಮ್ಮಾನಿಸಲಾಯಿತು ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲೆಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಗೆ ಕಂದಾವರ ಕೆಳಾಮನೆ ದಿ| ಗೋಪಾಕೃಷ್ಣ ಶೆಟ್ಟಿ ಸ್ಮರಣಾರ್ಥ ರೂ. 3,000 ಹಾಗೂ ಫ್ರೆಂಡ್ಸ್ ಯುವಕ ಮಂಡಲದ ವತಿಯಿಂದ ರೂ. 1,000ದ ದೇಣಿಗೆಯನ್ನು ಘೋಷಿಸಲಾಯಿತು.
ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಜಯಶೀಲ ಶೆಟ್ಟಿ ಸ್ವಾಗತಿಸಿ, ಆತ್ಮಾರಾಮ ಉಪಾಧ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಶ್ರೀನಾಥ ಪೂಜಾರಿ, ಉದಯ ಪೂಜಾರಿ ಕಾರ್ಯ ಕ್ರಮ ನಿರೂಪಿಸಿದರು. ಶಿಕ್ಷಕಿ ರೇವತಿ ವಂದಿಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.