Konkan ರೈಲ್ವೇಯಲ್ಲಿ ಟಿಕೆಟ್‌ ರಹಿತ ಪ್ರಯಾಣ; 5 ತಿಂಗಳಲ್ಲಿ 6.79 ಕೋ.ರೂ. ದಂಡ

Team Udayavani, Feb 20, 2024, 7:45 AM IST

Konkan ರೈಲ್ವೇಯಲ್ಲಿ ಟಿಕೆಟ್‌ ರಹಿತ ಪ್ರಯಾಣ; 5 ತಿಂಗಳಲ್ಲಿ 6.79 ಕೋ.ರೂ. ದಂಡ

ಉಡುಪಿ: ರೈಲ್ವೇ ಸುರಕ್ಷೆಗೆ ಕೇಂದ್ರ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದೇ ಸಂದರ್ಭದಲ್ಲಿ ಕೆಲವೊಂದು ಬಿಗಿ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಪರಿಣಾಮ ಕೊಂಕಣ ರೈಲ್ವೇಯಲ್ಲಿ 5 ತಿಂಗಳಲ್ಲಿ ದಂಡದ ಮೂಲಕವೇ 6.79 ಕೋ.ರೂ.ಗಳನ್ನು ಪ್ರಯಾಣಿಕರಿಂದ ವಸೂಲು ಮಾಡಲಾಗಿದೆ.

5 ತಿಂಗಳಲ್ಲಿ 32,902 ಮಂದಿ ಟಿಕೆಟ್‌ ರಹಿತ ಪ್ರಯಾಣ ಮಾಡಿದ್ದು, ಅವರಿಂದ 6.79 ಕೋ.ರೂ. ದಂಡ ವಸೂಲು ಮಾಡಲಾಗಿದೆ. 2024ರ ಜನವರಿ ಯಲ್ಲಿ ಅತ್ಯಧಿಕ 9,548 ಪ್ರಯಾಣಿಕರು 2,17,97,102 ರೂ. ಪಾವತಿಸಿದ್ದಾರೆ. ಸಿಕ್ಕಿಬಿದ್ದ ಪ್ರಯಾಣಿಕರು ಟಿಕೆಟ್‌ ಹಣದ ಜತೆಗೆ ಹೆಚ್ಚುವರಿ 250 ರೂ.ಪಾವತಿಸಬೇಕಿದೆ.

ಶಿಕ್ಷೆ ಏನು?
ರೈಲ್ವೇ ಟಿಸಿಗೆ ದಂಡ ಪಾವತಿಸಲು ನಿರಾಕರಿಸಿದವರನ್ನು ಆರ್‌ಪಿಎಫ್ಗೆ ಒಪ್ಪಿಸಿ ರೈಲ್ವೇ ಕಾಯ್ದೆ ಸೆಕ್ಷನ್‌ 137ರ ಪ್ರಕಾರ ಪ್ರಕರಣ ದಾಖಲಿಸ ಲಾಗುತ್ತದೆ. ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದರೆ ಗರಿಷ್ಠ 1,000 ರೂ. ದಂಡ ವಿಧಿಸಬಹುದು. ಅದನ್ನೂ ಪಾವತಿಸಲು ನಿರಾಕರಿಸಿದರೆ ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದು. ರೈಲ್ವೇ ಪ್ಲಾಟ್‌ ಫಾರಂನೊಳಗೆ ಹೋಗಲು 10 ರೂ. ಶುಲ್ಕ ವಿಧಿಸಲಾಗುತ್ತಿದೆ. ಕೆಲವರು ಇದನ್ನೂ ಉಲ್ಲಂ ಸಿ ಹೋಗುವಂತಹ ಘಟನೆಗಳೂ ನಡೆಯುತ್ತಿವೆ ಎನ್ನುತ್ತಾರೆ ರೈಲ್ವೇ ಸಿಬಂದಿ.

ನಿಯಮಿತ ತಪಾಸಣೆ
ಪ್ರತೀ ಬೋಗಿಯಲ್ಲಿಯೂ ಟಿಸಿಗಳು ನಿಯಮಿತವಾಗಿ ಟಿಕೆಟ್‌ ಪರಿ  ಶೀಲನೆ ನಡೆಸಿದರೂ ಅವರ ಕಣ್ತಪ್ಪಿಸಿ ಒಳಪ್ರವೇಶಿಸುವವರೂ ಇದ್ದಾರೆ. ಸಿಕ್ಕಿಬೀಳುವವರ ಪೈಕಿ ಬಿಹಾರ, ಮಹಾರಾಷ್ಟ್ರ, ಗೋವಾ ಸಹಿತ ಅನ್ಯ ರಾಜ್ಯ, ಜಿಲ್ಲೆಯವರೇ ಹೆಚ್ಚು. ಸ್ಥಳದಲ್ಲಿಯೇ ದಂಡ ವಸೂಲು ಮಾಡುವ ಅಧಿಕಾರವೂ ಟಿಸಿಗಳಿಗೆ ಇರುವು  ದರಿಂದ ಟಿಕೆಟ್‌ ರಹಿತವಾಗಿ ಪ್ರಯಾಣ ಮಾಡುವವರು ಅಲ್ಲಿಯೇ ಹಣ ಪಾವತಿಸಿದರೆ ಸಮಸ್ಯೆಯಾಗದು. ಇಲ್ಲದಿದ್ದರೆ ಕೋರ್ಟ್‌, ಕಚೇರಿ ಎಂದು ಅಲೆಯ ಬೇಕಾಗುತ್ತದೆ.

ಮಾಹಿತಿ ನೀಡಬಹುದು
ಟಿಕೆಟ್‌ ರಹಿತವಾಗಿ ಪ್ರಯಾಣಿಸುವವರು ರೈಲಿನೊಳಗೆ ದುಷ್ಕೃತ್ಯ ಎಸಗುವ ಸಾಧ್ಯತೆಯೂ ಇರುತ್ತವೆ. ಇಂತಹ ಸಂದರ್ಭದಲ್ಲಿ ಅವರನ್ನು ಪತ್ತೆ ಹಚ್ಚುವುದೂ ಕಷ್ಟ. ಈ ಕಾರಣಕ್ಕೆ ಸಹಪ್ರಯಾಣಿಕರು ಕೂಡ ಈ ಬಗ್ಗೆ ಜಾಗರೂಕರಾಗುವ ಜತೆಗೆ ಅನುಮಾನಸ್ಪದ ವ್ಯಕ್ತಿಗಳು ಸಂಚಾರ ಮಾಡುತ್ತಿರುವುದು ಕಂಡುಬಂದಲ್ಲಿ ಟಿಸಿ ಅಥವಾ ಸಹಾಯವಾಣಿ ಸಂಖ್ಯೆಗೆ ತಿಳಿಸಬಹುದು. ಈಗಾಗಲೇ ಹಲವಾರು ಮಂದಿ ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ದಂಡ ವಸೂಲು ಮಾಡಲಾಗಿದೆ ಎಂದು ರೈಲ್ವೇ ಪೊಲೀಸರೊಬ್ಬರು ಮಾಹಿತಿ ನೀಡಿದರು.

ಟಿಕೆಟ್‌ ಪಡೆದುಕೊಂಡೇ ಪ್ರಯಾಣ ಮಾಡಬೇಕು. ಟಿಕೆಟ್‌ ತಪಾಸಣೆ ದಿನನಿತ್ಯ ನಡೆಸಲಾಗುತ್ತಿದೆ. ಸಿಕ್ಕಿಬಿದ್ದ ಪ್ರಯಾಣಿಕರಿಗೆ ಟಿಕೆಟ್‌ನೊಂದಿಗೆ ಹೆಚ್ಚುವರಿ ದಂಡ ವಿಧಿಸಲಾಗುವುದು.
-ಸುಧಾ ಕೃಷ್ಣಮೂರ್ತಿ,
ಪಿಆರ್‌ಒ, ಕೊಂಕಣ ರೈಲ್ವೇ

ಟಾಪ್ ನ್ಯೂಸ್

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Terror 2

Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

1-rtt

Modi; 56 ವರ್ಷಗಳಲ್ಲಿ ಗಯಾನಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

7

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

13

Udupi: 10 ತಿಂಗಳಲ್ಲಿ 228 ಕಳವು ಕೇಸ್‌!

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Gangolli

Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

10-uv-fusion

UV Fusion: ಬದುಕಿನಲ್ಲಿ ಭರವಸೆಗಳಿರಲಿ

Terror 2

Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.