ಮಣಿಪಾಲದ ಟೈಗರ್ ಸರ್ಕಲ್ ತೆರವು
Team Udayavani, Jan 31, 2019, 1:00 AM IST
ಉಡುಪಿ: ಶೈಕ್ಷಣಿಕ ನಗರಿ ಮಣಿಪಾಲದ ಅಂದ ಹೆಚ್ಚಿಸುವಂತಿದ್ದ ಟೈಗರ್ ಸರ್ಕಲ್ ಇನ್ನು ನೆನಪು ಮಾತ್ರ…!
ಹೌದು, ಪರ್ಕಳ-ಮಲ್ಪೆ (12 ಕಿ.ಮೀ.)ರಾ. ಹೆ. 169ಎ ಯ ಪ್ರಥಮ ಹಂತದ ಕಾಮಗಾರಿಯ ನಿಮಿತ್ತ ಹಲವಾರು ವರ್ಷಗಳ ಇತಿಹಾಸ ಇರುವ ಈ ಸರ್ಕಲ್ ಅನ್ನು ಸೋಮವಾರ ತಡರಾತ್ರಿ ತೆರವುಗೊಳಿಸಲಾಯಿತು.
ಹೀಗಿದೆ ಟೈಗರ್ ಸರ್ಕಲ್ ಕಥೆ
ಉಪೇಂದ್ರ ಪೈ ಮತ್ತು ಟಿಎಂಎ ಪೈ ಅವರು ಮಣಿಪಾಲವನ್ನು ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಈಗಿನ ಕೋ-ಆಪರೇಟಿವ್ ಬ್ಯಾಂಕ್ ಜಾಗದಲ್ಲಿ ಉಪೇಂದ್ರ ಪೈ ಅವರು ವಾಸಿಸುತ್ತಿದ್ದರು. ಒಂದು ದಿನ ಉಪೇಂದ್ರ ಪೈ ಅವರ ಹೆಂಡತಿ ಮನೆಯಿಂದ ಹೊರಗೆ ಬರುವಾಗ ಹುಲಿಯೊಂದು ಆ ಜಾಗದಲ್ಲಿ ಮಲಗಿತ್ತು. ಸ್ವಲ್ಪ ಹೊತ್ತಿನ ಅನಂತರ ಅದು ತನ್ನಷ್ಟಕ್ಕೆ ಎದ್ದುಹೋಯಿತು. ಈ ಕಾರಣದಿಂದಾಗಿ ಇದಕ್ಕೆ ‘ಟೈಗರ್ಸರ್ಕಲ್’ ಎಂಬ ಹೆಸರು ಬಂತು ಎಂದು ಸಾಹಿತಿ ‘ಅಂಶುಮಾಲಿ’ ಅವರು ಉಪೇಂದ್ರ ಪೈ ಅವರ ಕುರಿತ ಪುಸ್ತಕ ‘ನಾಡಿಗೆ ನಮಸ್ಕಾರ’ದಲ್ಲಿ ಇದನ್ನು ಉಲ್ಲೇಖೀಸಿದ್ದಾರೆ.
ಮುಂದೇನು?
ಟೈಗರ್ಸರ್ಕಲ್ ಅಂದರೆ ಮಣಿಪಾಲದ ಕೇಂದ್ರ ಸ್ಥಳ ಅನ್ನುವಷ್ಟು ಪ್ರಸಿದ್ಧಿ ಪಡೆದಿದ್ದು, ಇದರ ತೆರವಿನ ಅನಂತರ ಮುಂದೇನು ಅನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ. ಮುಂದೆ ಸರ್ಕಲ್ ಆಗಬೇಕೆಂದಿದ್ದರೆ ಭೂ ಸಾರಿಗೆ ಇಲಾಖೆಯ ಅನುಮತಿ ಕಡ್ಡಾಯವಾಗಿರುತ್ತದೆ. ಪ್ರಸ್ತುತ ಇಲ್ಲಿ ನೇರ ರಸ್ತೆ ಮಾಡುವ ನೀಲನಕ್ಷೆ ಇದೆ. ಟ್ರಾಫಿಕ್ ಬಗ್ಗೆಯೂ ವಿವಿಧ ಯೋಜನೆಗಳು ರೂಪುಗೊಳ್ಳುವ ಸಾಧ್ಯತೆಯಿದೆ.
ಬಸ್ ಬೇ
ಮಂಗಳೂರು-ಮಣಿಪಾಲ ಸಹಿತ ಅನೇಕ ಕಡೆಗಳಿಂದ ಬರುವ ಬಸ್ಸು, ಇತರ ವಾಹನಗಳು ಇಲ್ಲಿ ಸುತ್ತುಹೊಡೆದು ಹೋಗುವುದು ವಾಡಿಕೆ. ಆದರೆ ಮುಂದೆ ಹಾಗಾಗುವುದಿಲ್ಲ. ಬದಲಿಗೆ ಇಲ್ಲಿ ಬಸ್ಬೇ ನಿರ್ಮಿಸುವ ಯೋಜನೆಯೂ ಇದೆ ಎಂದು ಹೆದ್ದಾರಿ ಇಲಾಖೆಯ ಮೂಲಗಳು ಉದಯವಾಣಿಗೆ ತಿಳಿಸಿವೆ. ಮಣಿಪಾಲದ ಬಸ್ ನಿಲ್ದಾಣ ಸಹಿತ ವಿವಿಧ ಅಭಿವೃದ್ಧಿ ಯೊಜನೆಗಳ ಪ್ರಸ್ತಾವನೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.