Udupi; ಚುನಾವಣೆಗೆ ಬಿಗು ಬಂದೋಬಸ್ತ್: ಎಸ್‌ಪಿ ಡಾ|ಕೆ.ಅರುಣ್
Team Udayavani, Apr 21, 2024, 12:38 AM IST
ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗು ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ಕೆ.ಅರುಣ್ ತಿಳಿಸಿದ್ದಾರೆ.
ಭದ್ರತೆಗೆ ಕೇಂದ್ರ ಹಾಗೂ ರಾಜ್ಯ ಮೀಸಲು ಪೊಲೀಸ್ ಪಡೆ, ರಾಜ್ಯದ ಪೊಲೀಸರು ಸಹಿತ ಮೂರು ಹಂತದ ಭದ್ರತೆಯನ್ನು ಮತ ಎಣಿಕೆ ಕೇಂದ್ರಕ್ಕೆ ನೀಡಲಾಗಿದೆ. ಉಳಿದಂತೆ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲೂ ಭದ್ರತೆ ಕಲ್ಪಿಸಲಾಗುವುದು. ಮೂರು ಕಂಪೆನಿಯ ಆರ್ಮ್ಡ್ ಫೋರ್ಸ್ ಜಿಲ್ಲೆಗೆ ಆಗಮಿಸಲಿದೆ.
ಈಗಾಗಲೇ 900 ಮಂದಿ ರೌಡಿಗಳ ಮೂಲಕ ಮುಚ್ಚಳಿಕೆ ಬರೆಸಲಾಗಿದೆ. 12 ಜನರ ಗಡಿಪಾರು ಆದೇಶವಾಗಿದೆ. 6 ಮಂದಿಯ ಗಡಿಪಾರು ಆಗಬೇಕಿದೆ ಎಂದು ತಿಳಿಸಿದ ಅವರು, ಸಮಸ್ಯೆಗಳು ಉಂಟಾದರೆ 112ಗೆ ಕರೆ ಮಾಡಬಹುದು ಎಂದರು.
94 ಲ.ರೂ.ಮೌಲ್ಯದ ಮದ್ಯ ವಶಕ್ಕೆ
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ 94 ಲ.ರೂ.ಮೌಲ್ಯದ 15,343 ಲೀ.ಮದ್ಯ ವಶಪಡಿಸಿಕೊಳ್ಳಲಾಗಿದೆ. 1.10ಲ.ರೂ.ಮೌಲ್ಯದ ಮಾದಕ ವಸ್ತುಗಳು, 80 ಸಾವಿರ ರೂ.ಮೌಲ್ಯದ ಶರ್ಟ್ ಪ್ರಿಂಟ್, 15 ಲ.ರೂ.ನಗದು, ರೈಲ್ವೇ ಪೊಲೀಸರ ಮೂಲಕ 25 ಲ.ರೂ.ಜಪ್ತಿ ಮಾಡಲಾಗಿದೆ. 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ ಸಿಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ 1 ವಾಹನವನ್ನು ಸೀಝ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.