“ಮರೆಗುಳಿತನಕ್ಕೆ ಸಕಾಲಿಕ ಚಿಕಿತ್ಸೆ’
Team Udayavani, Sep 22, 2018, 7:00 AM IST
ಉಡುಪಿ: ದೊಡ್ಡಣಗುಡ್ಡೆಯ ಡಾ| ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಮಾಹೆ ವಿವಿಯ ಆಕ್ಯುಪೇಶನಲ್ ತೆರಪಿ ವಿಭಾಗ ಮತ್ತು ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ವಿಶ್ವ ಮರೆ ಗುಳಿತನ ದಿನಾಚರಣೆ ಕಮಲಾ ಎ. ಬಾಳಿಗಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಸಿ. ಎಸ್. ರಾವ್ ಉದ್ಘಾಟಿಸಿ, ಮಾತನಾಡಿ, ಮರೆಗುಳಿತನದಿಂದ ರೋಗಿಗಿಂತ ಅಧಿಕ ಬಾಧೆ ಪಡುವವರು ರೋಗಿಯ ಸಂಬಂಧಿಕರು. ಏಕೆಂದರೆ ಅವರಿಗೆ ಆ ಸಮಸ್ಯೆಯ ಅರಿವು ಇರುವುದಿಲ್ಲ. ಮರೆಗುಳಿತನ ಸಮಸ್ಯೆಯ ಸ್ವಭಾವ ಕಂಡಾಗ ತತ್‌ಕ್ಷಣ ಅವರಿಗೆ ಚಿಕಿತ್ಸೆ ಕೊಡಿಸಿದಲ್ಲಿ ಅನುಕೂಲಕರ. ಮುಂದೆ ಸಮಸ್ಯೆಯ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ| ಪಿ. ವಿ ಭಂಡಾರಿ, ಮರೆಗುಳಿತನದ ಕುರಿತು ಜನರಿಗೆ ಅರಿವು ಮೂಡಿಸುವುದು ಅವಶ್ಯವಾಗಿದೆ. ಕೆಲವರು ಮರೆತವರಂತೆ ನಟಿಸುತ್ತಾರೆ ಎಂದೆಣಿಸುತ್ತದೆ. ಆದರೆ ಅದು ಅವರ ಸಮಸ್ಯೆಯಾಗಿರಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಕಾಯಿಲೆಯ ಲಕ್ಷಣಗಳು ಕಂಡು ಬಂದಾಗಲೇ ಚಿಕಿತ್ಸೆ ನೀಡಿದಲ್ಲಿ ನರಕೋಶಗಳು ಸಾಯುವುದನ್ನು ತಡೆಯಬಹುದು. 60 ವರ್ಷದ ಮೇಲೆ ಸಾಕಷ್ಟು ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದರು.
ಡಾ|ಪಿ.ವಿ. ಭಂಡಾರಿ, ವಿರೂಪಾಕ್ಷ ದೇವರಮನೆ ಮತ್ತು ಡಾ| ಕೆ.ಎಸ್. ಲತಾ ಅವರಿಂದ ಮಾಹಿತಿ ಕಾರ್ಯಕ್ರಮ ನಡೆಯಿತು. ಮನೋ ವೈದ್ಯ ಡಾ| ದೀಪಕ ಮಲ್ಯ, ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ವಿಶ್ವನಾಥ ಹೆಗ್ಡೆ, ಕೆಎಂಸಿಯ ನೇತ್ರ ತಜ್ಞೆ ಲಾವಣ್ಯ ಜಿ. ರಾವ್ ಉಪಸ್ಥಿತರಿದ್ದರು. ಸೌಜನ್ಯ ಶೆಟ್ಟಿ ಪ್ರಾಸ್ತಾವಿಸಿದರು. ನಾಗರಾಜ್ ಸ್ವಾಗತಿಸಿ, ವೀಣಾ ಮತ್ತು ರಮಣಿ ನಿರೂಪಿಸಿ, ಮುಝಾಮಿ ವಂದಿಸಿದರು.
ಮರೆಗುಳಿತನಕ್ಕೆ ಪ್ರಮುಖ ಕಾರಣಗಳು
ಮರೆಗುಳಿತನ ಎನ್ನುವುದು 50 ವರ್ಷದ ಬಳಿಕ ಸಾಮಾನ್ಯ. ಈ ಕಾಯಿಲೆಗೆ ಪ್ರಮುಖ ಕಾರಣ ಎಂದರೆ, ಪಾರ್ಶ್ವವಾಯು ಆದಾಗ, ಮೆದುಳಿಗೆ ಸೋಂಕು ತಗುಲಿದಾಗ, ಪಾರ್ಕಿನ್‌ಸನ್ ಕಾಯಿಲೆಯಿಂದ ಬರುವ ಸಾಧ್ಯತೆ ಇದೆ. ಇದರ ಪರಿಣಾಮ ಕೆಲವರು ಡಿಪ್ರಶನ್, ಗೊಂದಲಕ್ಕೊಳಗಾಗುವುದು, ನಡವಳಿಕೆಯಲ್ಲಿ ಬದಲಾವಣೆ ಕಂಡುಬರುವ ಸಮಸ್ಯೆಗಳು ಬರುತ್ತದೆ. ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ಇಲ್ಲದ್ದಿದ್ದರೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದರಿಂದ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಬಹುದು.
– ಡಾ| ಭಂಡಾರಿ
ಕಾರ್ಯಕ್ರಮವನ್ನು ಸಿ. ಎಸ್. ರಾವ್ ಉದ್ಘಾಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.