ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ
Team Udayavani, May 9, 2024, 1:12 AM IST
ಮಣಿಪಾಲ: ಮಾಹೆ ವಿಶ್ವ ವಿದ್ಯಾನಿಲಯವು ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾಯೂನಿವರ್ಸಿಟಿ ಶ್ರೇಯಾಂಕ- 2024ರಲ್ಲಿ 201-250 ಶ್ರೇಣಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಮಾಹೆಯು38.6-41.5ರ ಒಟ್ಟಾರೆ ಅಂಕ ಗಳೊಂದಿಗೆ ಕಳೆದ ಸಾಲಿನ 251-300 ಶ್ರೇಣಿಯಿಂದ 50 ಸ್ಥಾನಗಳ ಗಮ ನಾರ್ಹ ಸುಧಾರಣೆ ಹೊಂದಿದೆ.
ಟೈಮ್ಸ್ ಹೈಯರ್ ಎಜುಕೇಶನ್ ಏಷ್ಯಾ ಯೂನಿವರ್ಸಿಟಿ ಶ್ರೇಯಾಂಕ ಗಳು 2024 ಏಷ್ಯಾದ ಸಂಸ್ಥೆಗಳ ಬೋಧನೆ, ಸಂಶೋಧನೆ, ಜ್ಞಾನ ವರ್ಗಾವಣೆ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಕಾರ್ಯಕ್ಷಮತೆಯ ಸೂಚಕಗಳನ್ನು ಐದು ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ. ಬೋಧನೆ (ಕಲಿಕೆ ಪರಿಸರ), ಸಂಶೋಧನ ಪರಿಸರ (ಪರಿಮಾಣ, ಆದಾಯ ಮತ್ತು ಖ್ಯಾತಿ), ಸಂಶೋಧನ ಗುಣಮಟ್ಟ (ಉಲ್ಲೇಖದ ಪ್ರಭಾವ, ಸಂಶೋಧನ ಸಾಮರ್ಥ್ಯ, ಸಂಶೋಧನೆಯ ಶ್ರೇಷ್ಠತೆ ಮತ್ತು ಸಂಶೋಧನ ಪ್ರಭಾವ), ಅಂತಾ ರಾಷ್ಟ್ರೀಯ ದೃಷ್ಟಿಕೋನ (ಸಿಬಂದಿ, ವಿದ್ಯಾರ್ಥಿಗಳು ಮತ್ತು ಸಂಶೋಧನೆ) ಮತ್ತು ಉದ್ಯಮ (ಆದಾಯ ಮತ್ತು ಪೇಟೆಂಟ್). 31 ಪ್ರಾಂತ್ಯಗಳಿಂದ 739 ಸಂಸ್ಥೆ ಈ ಶ್ರೇಯಾಂಕ ವ್ಯಾಪ್ತಿಯಲ್ಲಿವೆ. ಜಪಾನ್ ಮತ್ತು ಭಾರತದಿಂದ 119 ವಿ.ವಿ.ಯನ್ನು ಹೊಂದಿದೆ. ಭಾರತ, ಟರ್ಕಿ, ಇರಾನ್ ಮತ್ತು ಪಾಕಿಸ್ಥಾನದಿಂದ ಹೆಚ್ಚುವರಿ 98 ವಿ.ವಿ.ಗಳನ್ನು ಕಳೆದ ವರ್ಷದಿಂದ ಸೇರಿಸಲಾಗಿದೆ.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಸಂಶೋಧನೆ, ನಾವೀನ್ಯವನ್ನು ಉತ್ತೇಜಿ ಸುವಲ್ಲಿ ಮಾಹೆ ವಿ.ವಿ. ಯಾವಾಗಲೂ ಮುಂಚೂಣಿಯಲ್ಲಿದೆ. ಶೈಕ್ಷಣಿಕ ಶ್ರೇಷ್ಠತೆ ಮತ್ತು ಕಾರ್ಯಕ್ಷಮತೆಯ ಉತ್ತುಂಗಕ್ಕಾಗಿ ಮಾಹೆ ವಿ.ವಿ. ಶ್ರಮಿಸುತ್ತದೆ. ಅಧ್ಯಾಪಕರು, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಸಾಧನೆಯಿಂದ ಇದು ಸಾಧ್ಯವಾಗಿದೆ ಎಂದು ಶ್ಲಾ ಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.