ಟಿಪ್ಪರ್‌ನಿಂದ ಹೆದ್ದಾರಿಗೆ ಬಿತ್ತು ಬೃಹತ್ ಗಾತ್ರದ ಕಲ್ಲು
Team Udayavani, May 18, 2019, 6:00 AM IST
ಟಿಪ್ಪರ್‌ನಿಂದ ಉರುಳಿ ಹೆದ್ದಾರಿಗೆ ಬಿದ್ದ ಕಲ್ಲುಗಳು.
ಹೆಮ್ಮಾಡಿ: ಮರವಂತೆಯ ಬ್ರೇಕ್‌ವಾಟರ್ ಕಾಮಗಾರಿಗೆ ಸಾಗಿ ಸುತ್ತಿದ್ದ ಕಲ್ಲುಗಳು ಟಿಪ್ಪರ್‌ನಿಂದ ಹೆದ್ದಾರಿ ಮಧ್ಯೆ ಬಿದ್ದ ಪ್ರಸಂಗ ಶುಕ್ರವಾರ ಮಧ್ಯಾಹ್ನ ಹೆಮ್ಮಾಡಿಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಆ ಟಿಪ್ಪರ್‌ನ ಹಿಂದೆ ಸಂಚರಿಸುತ್ತಿದ್ದ ಕಾರೊಂದು ಸ್ವಲ್ಪದರಲ್ಲೇ ಪಾರಾಗಿದೆ.
ಹೆಮ್ಮಾಡಿಯಲ್ಲಿ ಒಂದರ ಹಿಂದೆ ಒಂದು ಲಾರಿಯಲ್ಲಿ ಬೃಹತ್ ಗಾತ್ರದ ಕಲ್ಲುಗಳನ್ನು ಮರವಂತೆಯ ಕಡಲ್ಕೊರೆತ ತಡೆಗಾಗಿ ಕೈಗೊಂಡಿರುವ ಬ್ರೇಕ್ ವಾಟರ್ ಕಾಮಗಾರಿಗೆ ಸಾಗಿಸುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಈ ಕಲ್ಲು ಬಿದ್ದ ಟಿಪ್ಪರ್ ಲಾರಿಯ ಹಿಂಬಾಗಿಲು ಕೂಡ ಸರಿ ಇರಲಿಲ್ಲ. ಇದರಿಂದ ವಾಹನ ಸಂಚಾರಿಸುತ್ತಿದ್ದಾಗ ಏಕಾಏಕಿ ಚಾಲಕ ಬ್ರೇಕ್ ಹಾಕಿದ್ದು, ಈ ವೇಳೆ ಕಲ್ಲು ಉರುಳಿ ಕೆಳಕ್ಕೆ ಬಿದ್ದಿದೆ.
ಶುಕ್ರವಾರ ಹಲವೆಡೆಗಳಲ್ಲಿ ಶುಭ ಸಮಾರಂಭಗಳು ಕೂಡ ಇದ್ದುದರಿಂದ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಿತ್ತು. ಈ ಸಂದರ್ಭದಲ್ಲಿ ಹೀಗೆ ಟಿಪ್ಪರ್‌ನಿಂದ ಬೀಳುವ ಕಲ್ಲುಗಳು ಬೇರೊಂದು ವಾಹನಗಳ ಮೇಲೆ ಬಿದ್ದರೆ ಏನು ಗತಿ ಎನ್ನುವುದು ಇಲ್ಲಿ ನಿಲ್ಲಿಸಿದ್ದ ವಾಹನ ಸವಾರರೊಬ್ಬರು ಪ್ರಶ್ನಿಸಿದರು.
ಈ ರೀತಿಯ ಘಟನೆಗಳು ಇದು ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. ಆಗಾಗ ಇಂತಹ ಪ್ರಸಂಗ ಹೆದ್ದಾರಿಯಲ್ಲಿ ನಡೆಯುತ್ತಿದ್ದು, ಹೆದ್ದಾರಿ ಕಾಮಗಾರಿ ಕೂಡ ನಡೆಯುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರ ಸಹಿತ ಎಲ್ಲ ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ.
ಕಠಿನ ಕ್ರಮಕ್ಕೆ ಆಗ್ರಹ
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಯಾವುದೇ ರಸ್ತೆ ಸಂಚಾರ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸದೇ, ನಿಯಮ ಬಾಹಿರವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದುದರಿಂದಲೇ ಈ ಇಂತಹ ಘಟನೆ ನಡೆಯುತ್ತಿದ್ದು, ಇಂತಹ ನಿರ್ಲಕ್ಷé ವಹಿಸುವ ಚಾಲಕರ ವಿರುದ್ಧ ಕಠಿನ ಕ್ರಮಕೈಗೊಳ್ಳಬೇಕು ಎಂದು ಹೆಮ್ಮಾಡಿಯ ವಾಹನ ಸವಾರರೊಬ್ಬರು ಆಗ್ರಹಿಸಿದ್ದಾರೆ.
ಪರಿಶೀಲನೆ ನಡೆಸಿ,ಕ್ರಮ
ಈ ಬಗ್ಗೆ ಗಮನಕ್ಕೆ ಬಂದಿದೆ. ಮಾಹಿತಿ ಪಡೆದು, ಪರಿಶೀಲನೆ ನಡೆಸಿದ ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸರಿಯಾಗಿ ಮಾರ್ಗಸೂಚಿಗಳನ್ನು ಅನುಸರಿಸದೇ ಕಲ್ಲು ಸಾಗಾಟ ಮಾಡುವುದು ನಿಯಮ ಬಾಹಿರ. ಈ ಬಗ್ಗೆ ಸಂಚಾರ ಉಲ್ಲಂಘನೆಯಡಿ ಏನು ಕ್ರಮಗಳಿವೆಯೋ ಅದನ್ನು ತೆಗೆದುಕೊಳ್ಳಲಾಗುವುದು.
– ಪ್ರಮೀಳಾ, ಎಸ್‌ಐ, ಸಂಚಾರಿ ಠಾಣೆ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.