ತೀರ್ಥಹಳ್ಳಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ: ನಡೆಯದ ಭೂಸ್ವಾಧೀನ ಪ್ರಕ್ರಿಯೆ
Team Udayavani, Jun 20, 2019, 5:55 AM IST
ಉಡುಪಿ: ಮಲ್ಪೆ -ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಹಾದು ಹೋಗುವ ಖಾಸಗಿ ಜಾಗಗಳ ಭೂ ಸ್ವಾಧೀನವಾಗಿಲ್ಲ. ಯೋಜನೆಯ ಡಿಪಿಆರ್‌ಗೆ ಅನುಮೋದನೆ ದೊರಕಿದ್ದು, ಉಡುಪಿ- ಪರ್ಕಳ ಹೊರತು ಪಡಿಸಿ ಇತರ ಕಡೆಗಳಿಗೆ ಕಾಮಗಾರಿ ನಡೆಸಲು ಹಣ ಬಿಡುಗಡೆಯಾಗಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗುವ ಆತಂಕವಿದೆ.
ರಾಷ್ಟ್ರೀಯ ಹೆದ್ದಾರಿ ಒಟ್ಟು 24 ಗ್ರಾ.ಪಂ.ಗಳಲ್ಲಿ ರಸ್ತೆ ಹಾದುಹೋಗಲಿದೆ. ಸುಮಾರು 95.76ಹೆಕ್ಟೇರ್ ಪ್ರದೇಶದಲ್ಲಿ ಭೂಸ್ವಾಧೀನವಾಗಬೇಕಿದೆ. ಸಂತ್ರಸ್ತರಿಗೆ ಸುಮಾರು 41.47 ಕೋ.ರೂ. ಪರಿಹಾರ ಹಣ ನೀಡಬೇಕಾಗಿದೆ. ಯೋಜನೆ ಒಟ್ಟು 636 ಕೋ.ರೂ.ಗಳದು.
ಭೂಸ್ವಾಧೀನಕ್ಕೆ ಮುನ್ನ ಕಾಮಗಾರಿ!
ಮಣಿಪಾಲ, ಉಡುಪಿ, ಹೆಬ್ರಿ ಸೇರಿದಂತೆ ಒಟ್ಟು 12 ಕಡೆಗಳಲ್ಲಿ 31.987 ಕಿ.ಮೀ. ರಸ್ತೆ ಚತುಷ್ಪಥವಾಗಲಿದೆ. ಮೊದಲ ಹಂತದಲ್ಲಿ ಮಣಿಪಾಲ- ಕಡಿಯಾಳಿವರೆಗಿನ ಹೆದ್ದಾರಿ ಕಾಮಗಾರಿ ಮತ್ತು ಭೂಸ್ವಾಧೀನಕ್ಕೆ ಒಟ್ಟು 99.86 ಕೋ.ರೂ. ಮಂಜೂರಾಗಿದೆ. ಈ ಮಾರ್ಗದಲ್ಲಿ ಕೇವಲ ಶೇ. 10ರಷ್ಟು ಭಾಗ ಖಾಸಗಿ ಜಾಗ. ಮಣಿಪಾಲದ ಮಾಹೆ ಸೇರಿದಂತೆ ಇತರೆ ಖಾಸಗಿ ಜಾಗಗಳ ಮಾಲೀಕರ ಜತೆ ಶಾಸಕರು ಮಾತುಕತೆ ನಡೆಸಿ ಭೂಸ್ವಾಧೀನದ ಮುನ್ನವೇ ಕಾಮಗಾರಿ ನಡೆಸಲಾಗಿದೆ.
ಪರ್ಕಳದ ರಸ್ತೆ ನಿಧಾನ ಕಾರಣ?
ಪರ್ಕಳದಲ್ಲಿ ರಾ.ಹೆ. ಸಂಪೂರ್ಣವಾಗಿ ಖಾಸಗಿ ಜಾಗದ ಮೂಲಕ ಹಾದು ಹೋಗಲಿದೆ. ಈ ಪ್ರದೇಶದಲ್ಲಿ ಮನೆ ಮತ್ತು ಕೃಷಿ ಭೂಮಿಯಿರುವುದರಿಂದ ಹಳೆಯ ರಸ್ತೆಯನ್ನೇ ಅಗಲ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದು ಪರ್ಕಳ ಭಾಗದಲ್ಲಿ ರಸ್ತೆ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಮಲ್ಪೆ-ಆದಿಉಡುಪಿ: 44 ಕೋ.ರೂ.
ಮಲ್ಪೆ-ತೀರ್ಥಹಳ್ಳಿ ರಾ.ಹೆ.ಯ ಎರಡನೇ ಹಂತವಾಗಿ ಆದಿ ಉಡುಪಿ- ಮಲ್ಪೆ ಕಾಮಗಾರಿ ಪ್ರಾರಂಭವಾಗಲಿದೆ. ಭೂಸ್ವಾಧೀನ ಮತ್ತು ಕಾಮಗಾರಿ ಸೇರಿದಂತೆ ಒಟ್ಟು 44 ಕೋ.ರೂ.ಗಳ ಡಿಪಿಆರ್ ಅನುಮೋದನೆಯಾಗಿದೆ. ಆದರೆ ಹಣ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆಯಾದ ತತ್‌ಕ್ಷಣ ಎರಡನೇ ಹಂತದ ಪ್ರಕ್ರಿಯೆ ಪ್ರಾರಂಭವಾಗಲಿದೆ.
– ಉಡುಪಿ-ಮಣಿಪಾಲ ಭೂ ಸ್ವಾಧೀನ
– 2ನೇ ಹಂತದಲ್ಲಿ ಆದಿಉಡುಪಿ- ಮಣಿಪಾಲ ಡಿಪಿಆರ್ ಅನುಮೋದನೆ
– ಪರ್ಕಳದಲ್ಲಿ ಖಾಸಗಿ ಜಾಗದಲ್ಲಿ ತಕರಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.