ರಸ್ತೆ ಗುಂಡಿ ಮುಚ್ಚಲು ಊರವರಿಂದಲೇ ಶ್ರಮದಾನ
Team Udayavani, Oct 6, 2019, 5:08 AM IST
ಕುಂದಾಪುರ: ಮೂಡಬಗೆ – ಕೆಂಜಿಮನೆ ರಸ್ತೆಯ ಮಾರ್ಡಿ ಸಮೀಪದ ಕದ್ರಿಹಕ್ಲುವಿನಿಂದ ಆಜ್ರಿವರೆಗಿನ ರಸ್ತೆ ಸಂಪೂರ್ಣ ಹೊಂಡ – ಗುಂಡಿಗಳಿಂದ ಕೂಡಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇರೆ ದಾರಿ ಕಾಣದ ಊರವರು ಈಗ ಶ್ರಮದಾನದ ಮೂಲಕ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ.
ಮೂಡುಬಗೆಯಿಂದ ಕೆಂಜಿಮನೆಗೆ ತೆರಳುವ ರಸ್ತೆಯುದ್ದಕ್ಕೂ ಸುಮಾರು 7 ಕಿ.ಮೀ. ದೂರದವರೆಗೂ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟಕರವೆನಿಸಿದೆ. ಇದರಿಂದ ಈಗ ದಿನ ನಿತ್ಯ ಸಂಕಷ್ಟ ಅನುಭವಿಸುತ್ತಿರುವ ವಾಹನ ಸವಾರರು, ಯುವಕರು ಸೇರಿಕೊಂಡು ಮಳೆ ಸ್ವಲ್ಪ ಕಡಿಮೆಯಾಗಿರುವುದರಿಂದ ರಸ್ತೆಗೆ ಮಣ್ಣು ಹಾಕಿ, ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಶ್ರಮದಾನದಲ್ಲಿ ಮಾರ್ಡಿಯ ಹತ್ತಾರು ಯುವಕರು ಭಾಗವಹಿಸಿದ್ದರು.
6 ವರ್ಷಗಳ ಹಿಂದೆ ಡಾಮರೀಕರಣ
ಮೂಡುಬಗೆಯಿಂದ ಕೊಡ್ಲಾಡಿ, ಮಾರ್ಡಿ, ಆಜ್ರಿ, ಕೂಡ್ಗಿಯಾಗಿ ಕೆಂಜಿಮನೆ ಕಡೆಗೆ ಸಂಪರ್ಕ ಕಲ್ಪಿಸುವ ಸುಮಾರು 7 ಕಿ.ಮೀ. ದೂರದ ರಸ್ತೆಗೆ 6 ವರ್ಷಗಳ ಹಿಂದೆ ಡಾಮರೀಕರಣವಾಯಿತು. ಆ ಬಳಿಕ ಒಮ್ಮೆ ಅಂದರೆ 2 ವರ್ಷಗಳ ಹಿಂದೆ ಹೊಂಡ- ಗುಂಡಿ ಬಿದ್ದ ಕಡೆಗಳಲ್ಲಿ ತೇಪೆ ಹಾಕಲಾಗಿತ್ತು. ಆ ಬಳಿಕ ಇತ್ತ ಯಾರೂ ಸುಳಿಯಲೂ ಇಲ್ಲ. ಈಗ ಸಂಪೂರ್ಣ ಹದಗೆಟ್ಟು ಹೋಗಿದೆ.
ಬಸ್ ಸಂಚಾರಕ್ಕೆ ಸಂಚಕಾರ
ಈ ಮಾರ್ಗವಾಗಿ 1 ಸರಕಾರಿ ಬಸ್ ದಿನಾ 4 ಟ್ರಿಪ್ ಸಂಚರಿಸುತ್ತಿದ್ದರೆ, 2 ಖಾಸಗಿ ಬಸ್‌ಗಳು ದಿನಕ್ಕೆ 3 ಟ್ರಿಪ್ ಸಂಚರಿಸುತ್ತವೆ. ಈಗ ಹದಗೆಟ್ಟ ರಸ್ತೆಯಿಂದಾಗಿ ಈ ಮಾರ್ಗವಾಗಿ ಬಸ್‌ಗಳು ಸಂಚರಿಸಲು ಹಿಂದೇಟು ಹಾಕುತ್ತಿವೆ. ಇನ್ನಾದರೂ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ, ಈ ಮಾರ್ಗವಾಗಿ ಬಸ್ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಂಭವವೂ ಇದೆ. ಅನೇಕ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಇದೇ ಬಸ್‌ಗಳನ್ನು ಅವಲಂಬಿಸಿರುವುದರಿಂದ ಅವರಿಗೆ ತೊಂದರೆಯಾಗಲಿದೆ.
ದುರಸ್ತಿಗೆ ಆಗ್ರಹ
ಚುನಾವಣೆ ಸಮಯದಲ್ಲಿ ರಸ್ತೆಯ ದುರಸ್ತಿ ಮಾಡಿಕೊಡುತ್ತೇವೆ ಎನ್ನುತ್ತಾರೆ. ಮತದಾನದ ಮುಗಿದ ಬಳಿಕ ಜನಪ್ರತಿನಿಧಿಳು ಇತ್ತ ಗಮನ ಹರಿಸುವುದಿಲ್ಲ. ನಿತ್ಯ ಈ ಹೊಂಡ – ಗುಂಡಿಗಳಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದು, ಇನ್ನಾದರೂ ಈ ರಸ್ತೆಯ ದುರಸ್ತಿ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
Ullala: ಆಯತಪ್ಪಿ ಪಾಳು ಬಾವಿಗೆ ಬಿದ್ದು ಸ್ಥಳೀಯ ಮೀನುಗಾರ ಮೃತ್ಯು
America: ಹೊಸ ವರ್ಷದ ಸಂಭ್ರಮಾಚರಣೆ-ಜನರ ಗುಂಪಿನ ಮೇಲೆ ನುಗ್ಗಿದ ಟ್ರಕ್-ಹಲವು ಸಾ*ವು
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.