ಸಾಮೂಹಿಕ ವಿವಾಹದಲ್ಲಿ ಸಾಧಕರಿಗೆ, ಪ್ರತಿಭಾನ್ವಿತರಿಗೆ ಸಮ್ಮಾನ
ವಿಶ್ವ ಬ್ರಾಹ್ಮಣ ಯುವ ಸಂಘಟನೆ
Team Udayavani, May 20, 2019, 6:00 AM IST
ಕಟಪಾಡಿ: ಕಾಪು ವಿಧಾನ ಸಭಾ ಕ್ಷೇತ್ರದ ವಿಶ್ವ ಬ್ರಾಹ್ಮಣ ಯುವ ಸಂಘಟನೆಯ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹದ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಪ್ರತಿಭಾವಂತರು, ಸಮಾಜದ ಸಾಧಕರನ್ನು ಗುರುತಿಸಿ ಸಮ್ಮಾನಿಸಲಾಯಿತು.
ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ರವಿವಾರ ನಡೆದ 12 ನವಜೋಡಿಗಳ ಸಾಮೂಹಿಕ ವಿವಾಹದ ಸಂದರ್ಭ ಡಾಕ್ಟರೇಟ್ ಪದವಿ ಪುರಸ್ಕೃತ ಜೋತಿಷಿ, ವಾಸ್ತುತಜ್ಞ ವೇಣೂರು ಮೋನಪ್ಪ ಆಚಾರ್ಯ, ಡಾಕ್ಟರೇಟ್ ಪದವಿ ಪುರಸ್ಕೃತ ಬಜಾರ್ ಗ್ರೂಪ್ಸ್ ಪಾಣೆಮಂಗಳೂರು ಗೋಪಾಲಕೃಷ್ಣ ಆಚಾರ್ಯ, ವೈದಿಕ ಕ್ಷೇತ್ರದ ಹಲಸಿನಕಟ್ಟೆ ಪುರೋಹಿತ್ ಮೋಹನ್ ಆಚಾರ್ಯ, ದಾರು ಶಿಲ್ಪಿ ಜನಾರ್ದನ ಆಚಾರ್ಯ ಕುರ್ಕಾಲು, ಕಟಕ ಚಲನಚಿತ್ರದ ಬಾಲಕಲಾವಿದೆ ಕು|ಶ್ಲಾಘಾ ಆಚಾರ್ಯ ಸಾಲಿಗ್ರಾಮ, ಎಷಿಯನ್ ಗೇಮ್ಸ್ ಅಥ್ಲೆಟ್ ಕುತ್ಯಾರು ಸುಕನ್ಯಾ ಆಚಾರ್ಯ, ಚಿನ್ನದ ಪದಕ ವಿಜೇತ ವಿದ್ಯಾರ್ಥಿ ಪಡುಬಿದ್ರಿ ಸೌರಭ್ ಆಚಾರ್ಯ, ನಿವೃತ್ತ ಸೈನಿಕ ವೇಣುಗೋಪಾಲ ಆಚಾರ್ಯ ಉಚ್ಚಿಲ, ಸ್ವರ್ಣ ಶಿಲ್ಪಿ ವೈ. ಪದ್ಮಾಕರ ಕೊಯಮುತ್ತೂರು ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭ ವಿಶ್ವಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷ ವೈ.ಗಣೇಶ ಆಚಾರ್ಯ ಉಚ್ಚಿಲ, ಉದ್ಯಮಿ ರಾಜೀವಿ-ಕೃಷ್ಣ ವಿ.ಆಚಾರ್ಯ ಮುಂಬೈ,ವೀಣಾ ವಿಶ್ವನಾಥ ರಾವ್ ಬೆಂಗಳೂರು, ಮುಖ್ಯ ನ್ಯಾಯಾಧೀಶೆ ಹೇಮಾವತೀ ಬೆಂಗಳೂರು, ಅಖೀಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ವೈ.ಸುದರ್ಶನ್ ಎಲ್ಲೂರು, ಮಂಗಳೂರು ಕೆನರಾ ಜುವೆಲರ್ನ ವಂದನಾ ಧನಂಜಯ ಪಾಲ್ಕೆ,ಅವಿಭಜಿತ ದ.ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಮೊಕ್ತೇಸರರಾದ ನವೀನ್ ಆಚಾರ್ಯ ಪಡುಬಿದ್ರಿ, ವಿ. ಶ್ರೀಧರ್ ಆಚಾರ್ಯ ವಡೇರ ಹೋಬಳಿ, ಪ್ರವೀಣ ಆಚಾರ್ಯ ಬಾಕೂìರು, ಸತೀಶ್ ಆಚಾರ್ಯ ದಹಿಸರ್ ಮುಂಬೈ, ಶೇಖರ್ ಆಚಾರ್ಯ ಕಾಪು, ಗಣ್ಯರಾದ ಸದಾಶಿವ ಆಚಾರ್ಯ ಪಡುಕುತ್ಯಾರು, ಪ್ರಸಾದ್ ಅತ್ತಾವರ, ವಿಶ್ವನಾಥ ಆಚಾರ್ಯ ಕರಂಬಳ್ಳಿ, ಮುರಳೀಧರ ಆಚಾರ್ಯ ಇನ್ನಂಜೆ, ಜನಾರ್ದನ ಆಚಾರ್ಯ ಬೈಕಾಡಿ, ಕೇಶವ ಆಚಾರ್ಯ ಸಗ್ರಿ, ಕಿಶೋರ್ ಆಚಾರ್ಯ, ಕೆ.ರಮೇಶ್ ಆಚಾರ್ಯ ಕೊಯಮುತ್ತೂರು, ಬೊರಿವಿಲಿ ಬಿ.ರಮೇಶ್ ಆಚಾರ್ಯ ಮಂಚಕಲ್ಲು, ರವಿ ಪುರೋಹಿತ್, ಸುರೇಶ ಆಚಾರ್ಯ ಮುಂಬಯಿ, ಹರೀಶ್ ಆಚಾರ್ಯ ಕಳತ್ತೂರು, ರತ್ನಾಕರ ಆಚಾರ್ಯ ಕುರ್ಕಾಲು, ದಿನೇಶ್ ಎರ್ಮಾಳ್, ಉಪಾಧ್ಯಕ್ಷರು, ಗೌರವ ಸಲಹೆಗಾರರು, ವಲಯಾಧ್ಯಕ್ಷರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.