ಇಂದಿನ ಸಾಧನೆಯೇ ಮುಂದಿನ ಯಶಸ್ಸಿನ ಗುಟ್ಟು: ಶಾಂತಾರಾಮ್ ಪ್ರಭು
Team Udayavani, Aug 22, 2017, 7:25 AM IST
ಕಾಪು : ಸತತ ಪರಿಶ್ರಮ ಮತ್ತು ಸಾಧನೆಯ ಛಲವೇ ವಿದ್ಯಾರ್ಥಿಗಳ ಯಶಸ್ಸಿನ ಮೂಲವಾಗಿದೆ. ಇಂದಿನ ಸಾಧನೆಯೇ ಮುಂದಿನ ಯಶಸ್ಸಿನ ಗುಟ್ಟು. ನಮ್ಮ ಹಿರಿಯರ ಪ್ರಾರ್ಥನೆ, ಆಶೀರ್ವಾದ ಹರಕೆಯ ಫಲದಿಂದಾಗಿ ನಮಗೆ ಇಂದಿನ ಸ್ಥಾನಮಾನ ಗೌರವಗಳು ಪ್ರಾಪ್ತಿಯಾಗುತ್ತಿವೆ ಎಂದು ನಿವೃತ್ತ ಪ್ರಾಂಶುಪಾಲ ಹೊಸನಗರ ನಿಟ್ಟೂರು ಡಾ| ಪಿ. ಶಾಂತಾರಾಮ ಪ್ರಭು ಹೇಳಿದರು.
ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಆ. 21ರಂದು ರಾಜಾಪುರ ಸಾರಸ್ವತ ಯುವ ವೃಂದದ ವತಿಯಿಂದ ಸಮಾಜ ಸಂಘಟನೆ, ಲೋಕ ಕಲ್ಯಾಣಾರ್ಥ ಏರ್ಪಡಿಸಿದ 21ನೇ ವರ್ಷದ ಸಾಮೂಹಿಕ ದುರ್ಗಾ ಹೋಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗಣಪತಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ| ಉಮಾವನಿತಾ ನಾಯಕ್, ಬಂಟಕಲ್ಲು ಮಣಿಪಾಲ ಆರ್‌ಎಸ್‌ಬಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಪಾಂಡುರಂಗ ಕಾಮತ್ ಎಳ್ಳಾರೆ ಮುಖ್ಯ ಅತಿಥಿಗಳಾಗಿದ್ದರು.
ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಠಲ ನಾಯಕ್ ಬೆಳ್ಳೆ, ವಿಷ್ಣುಮೂರ್ತಿ ನಾಯಕ್ ಮುಟ್ಟಿಕಲ್ಲು, ದೇವದಾಸ್ ಸಾಲ್ವಣ್‌ಕಾರ್ ಶಿರ್ವ, ವಯೋ ನಿವೃತ್ತಿ ಹೊಂದಿದ ಹಿರಿಯ ಶಿಕ್ಷಕ ಬಿ. ಪುಂಡಲೀಕ ಮರಾಠೆ ಇವರನ್ನು ಸಮ್ಮಾನಿಸಲಾಯಿತು.
ಎಸ್. ಎಸ್. ಎಲ್. ಸಿ, ಮತ್ತು ಪಿ. ಯು. ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಯುವ ಸಾಧಕ ಕರ್ವಾಲು ರಾಘವೇಂದ್ರ ಪ್ರಭು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಯುವ ವೃಂದದ ಗೌರವಾಧ್ಯಕ್ಷ ಕೆ. ಆರ್. ಪಾಟ್ಕರ್ ಪ್ರಸ್ತಾವನೆಗೈದರು. ಕಾರ್ಕಳ ಎಸ್‌ವಿಟಿ ಪ. ಪೂ. ಕಾಲೇಜಿನ ಪ್ರಾಚಾರ್ಯ ರಾಮದಾಸ್ ಪ್ರಭು ಸಮ್ಮಾನಪತ್ರ ವಾಚಿಸಿದರು. ಯುವ ವೃಂದದ ಅಧ್ಯಕ್ಷ ಸಂಜಯ್ ಆರ್. ನಾಯಕ್ ಸ್ವಾಗತಿಸಿದರು. ಉಮೇಶ ಪಾಟ್ಕರ್,ರûಾ ಆರ್ ಪ್ರಭು ಪರಿಚಯಿಸಿದರು. ಕಾರ್ಯದರ್ಶಿ ಆದರ್ಶ ಪಾಟ್ಕರ್ ವಂದಿಸಿದರು. ಶಿಕ್ಷಕ ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.