ಸಾರ್ವಜನಿಕ ಸೇವೆಗೆ ಲಭ್ಯವಾಗದ ಶೌಚಾಲಯ
Team Udayavani, Sep 28, 2018, 6:05 AM IST
ಕೋಟ: ಸಾಲಿಗ್ರಾಮ ಮುಖ್ಯ ಪೇಟೆಯ ಬಸ್ಸುನಿಲ್ದಾಣದ ಬಳಿ ಎಸ್.ಎಫ್.ಸಿ.ಹಾಗೂ 14ನೇ ಹಣಕಾಸು ನಿಧಿಯಿಂದ 20ಲಕ್ಷ ವೆಚ್ಚದಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯ ಕಾಮಗಾರಿ ಮುಗಿದು ಐದು ತಿಂಗಳಾದರು ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಈ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ.ಪಂ. ಆಗಿ ಹಲವು ವರ್ಷ ಕಳೆದರು ಸಾಲಿಗ್ರಾಮದ ಮುಖ್ಯ ಪೇಟೆಯಲ್ಲಿ ಇದುವರೆಗೆ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆಯಂತಿತ್ತು ಹಾಗೂ ಅಕ್ಕ-ಪಕ್ಕದ ಮನೆಗಳನ್ನು ಆಶ್ರಯಿಸಬೇಕಾಗಿತ್ತು. ಇದೀಗ ವ್ಯವಸ್ಥಿತ ಶೌಚಾಲಯ ನಿರ್ಮಾಣವಾದ್ದರಿಂದ ಈ ಸಮಸ್ಯೆ ದೂರಾಗುವ ಭರವಸೆ ಮೂಡಿತ್ತು.
ಆದಷ್ಟುಶೀಘ್ರ ಇದನ್ನು ಉದ್ಘಾಟನೆಗೊಳಿಸಿ ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ಸಾರ್ವಜನಿಕ ಸೇವೆಗೆ
ಚುನಾವಣೆ ಕಾರಣದಿಂದ ಶೌಚಾಲಯ ಉದ್ಘಾಟನೆ ತಡವಾಯಿತು. ಇದೀಗ ಖಾಸಗಿ ಕಂಪನಿಯೊಂದಕ್ಕೆ ನಿರ್ವಹಣೆಯ ಜವಬ್ದಾರಿ ನೀಡಲಾಗಿದೆ. ಒಂದೆರಡು ದಿನದಲ್ಲಿ ಒಡಂಬದಿಕೆ ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ ಮೊದಲ ವಾರದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.
– ಶ್ರೀಪಾದ್ ಪುರೋಹಿತ್,
ಮುಖ್ಯಾಧಿಕಾರಿಗಳು , ಸಾಲಿಗ್ರಾಮ ಪ.ಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.