Toll Gate ಅಪರಿಮಿತ ಸುಲಿಗೆಯ ಮುನ್ಸೂಚನೆ: ವಾಹನ ಮುಷ್ಕರದ ಭೀತಿ


Team Udayavani, Jan 30, 2024, 6:45 AM IST

Toll Gate ಅಪರಿಮಿತ ಸುಲಿಗೆಯ ಮುನ್ಸೂಚನೆ: ವಾಹನ ಮುಷ್ಕರದ ಭೀತಿ

ಪಡುಬಿದ್ರಿ: ನವಯುಗ ನಿರ್ಮಾಣ ಕಂಪೆನಿಯನ್ನು ಖರೀದಿಸಿರುವ ಮುಂಬಯಿ ಮೂಲದ ಕೆಕೆಆರ್‌ ಕಂಪೆನಿಯು ಆರು ತಿಂಗಳುಗಳ ಬಳಿಕ ಇದೀಗ ಕರಾವಳಿ ಜಿಲ್ಲೆಯ ಟೋಲ್‌ಗ‌ಳಲ್ಲಿ ಅಪರಿಮಿತ ಸುಲಿಗೆಯ ಮುನ್ಸೂಚನೆ ನೀಡಿದೆ. ಸ್ಥಳೀಯ ಜನತೆ ಮತ್ತೆ ಮುಷ್ಕರದ ಭೀತಿಯಲ್ಲಿದ್ದಾರೆ.

ಈಗಾಗಲೇ ಜಿಲ್ಲೆಯ ಖಾಸಗಿ ಬಸ್‌ ಮಾಲಕರನೇಕರು ತಮ್ಮ ಹೆವಿ ಮೊಟಾರು ವಾಹನಗಳನ್ನು ಮಾರಿ ಟೋಲ್‌ ಬರೆ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಟಾಟಾ709, 807 ವಾಹನಗಳನ್ನು ಬಸ್‌ ಗಳನ್ನಾಗಿ ಪರಿವರ್ತಿಸಿ ಕರಾವಳಿ ಜಿಲ್ಲೆಗಳಲ್ಲಿ ತಮ್ಮ ಅಸ್ಮಿತೆ ಯನ್ನು ಮುಂದುವರಿಸಿದ್ದರು. ಈಗ ಅಂತಹಾ ವಾಹನಗಳಿಗೂ ಘನ ವಾಹನಗಳಷ್ಟೇ ಟೋಲ್‌ ಪಾವತಿಸಬೇಕಾಗಿದೆ. ಹಾಗಾಗಿ ತಾವು ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡು ಸಂಪು ನಡೆಸು ವುದಾಗಿ ಬಸ್‌ ಮಾಲಕರ ಸಂಘಟನೆಯು ತಿಳಿಸಿದೆ.

ಇದೇ ವೇಳೆ ಹೆಜಮಾಡಿಯಲ್ಲಿ ಸ್ಥಳೀಯರಿಗೆ ಟೋಲ್‌ವುುಕ್ತ ಸಂಚಾರ ವಿರುವುದನ್ನೂ ಟೋಲ್‌ ಆಡಳಿತವು ಗಮನಿಸಿ ಇದನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲು ಯೋಚಿಸುತ್ತಿದೆ. ಜಿಲ್ಲೆಯ ಮೂರೂ ಟೋಲ್‌ಗ‌ಳಲ್ಲಿನ ಉಚಿತ ಪ್ರವೇಶವನ್ನು ಪ್ರತಿಬಂಧಿ ಸಲೂ ಕೆಕೆಆರ್‌ ಆಡಳಿತವು ಮುಂದಾಗುವ ಸೂಚನೆಗಳೂ ದೊರೆತಿವೆ. ಈಗಾಗಲೇ ಮುಕ್ತವಾಗಿ ಸಂಚರಿಸುತ್ತಿದ್ದ ವಾಹನಗಳಿಗೂ ಮನೆ ತಲುಪಿದ ಬಳಿಕ ಹೆದ್ದಾರಿ ಸುಂಕ ಪಾವತಿಯಾಗಿರುವ ಸಂದೇಶಗಳು ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಬಸ್‌, ಲಾರಿ ಮುಂತಾದ ಘನ ವಾಹನಗಳ ಭಾರದ ಆಧಾರ ದಲ್ಲೇ ತೆರಿಗೆ ಸಂಗ್ರಹಿಸುವ ಯೋಜನೆಯನ್ನೂ ಹಾಕಿಕೊಂಡಿರು ವುದಾಗಿಯೂ ಮಾಹಿತಿಗಳು ಹೊರಬಿದ್ದಿವೆ.

ಟೋಲ್‌ಪ್ಲಾಜಾದ ಆಡಳಿತವು ಕರಾವಳಿ ಜಿಲ್ಲೆಯಲ್ಲಿ ಹೆದ್ದಾರಿ ಸುಂಕ ವಸೂಲಿಗೆ ಯಾವುದೇ ಅಡೆತಡೆಗಳಿಲ್ಲವೆಂಬ ನಿರ್ಧಾರಕ್ಕೆ ಈಗಾಗಲೇ ಬಂದಂತಿದ್ದು ಈ ಕುರಿತ ಮಾಹಿತಿ ಯನ್ನೂ ತನ್ನ ಮುಖ್ಯ ಕಚೇರಿಗೆ ರವಾನಿಸಿದೆ. ಕರಾವಳಿ ಜನತೆಗೆ ಮತ್ತೂಂದು ಬರೆಯನ್ನೆ ಳೆಯಲು ಟೋಲ್‌ ಪ್ಲಾಝಾ ಆಡಳಿತವು ಮುಂದಾಗಿರುವುದು ನಿಧಾನವಾಗಿ ಯಾದರೂ ಸ್ಪಷ್ಟವಾಗುತ್ತಿದೆ.

ಟೋಲ್‌ ಅವಶೇಷ ಕೊನೆಗೂ ತೆರವು:
ಎನ್‌ಐಟಿಕೆ ಸಮೀಪ ಸಂಚಾರ ಸರಾಗ
ಸುರತ್ಕಲ್‌ ಇಲ್ಲಿನ ಎನ್‌ಐಟಿಕೆ ಸಮೀಪದ ಟೋಲ್‌ ಕೇಂದ್ರದಲ್ಲಿ ಸುಂಕ ವಸೂಲಿ ನಿಂತ ಬಳಿಕವೂ ತುಂಬ ಸಮಯದಿಂದ ಅಪಾಯಕಾರಿಯಾಗಿ ಉಳಿದಿದ್ದ ಅವಶೇಷಗಳನ್ನು ಕೊನೆಗೂ ತೆರವು ಮಾಡಲಾಗಿದೆ. ರಸ್ತೆ ಮೇಲಿದ್ದ ಬೂತ್‌ ಬೆಡ್‌, ರಸ್ತೆ ವಿಭಾಜಕ, ರಸ್ತೆ ಉಬ್ಬುಗಳ ಸಹಿತ ಎಲ್ಲ ಪಳಿಯುಳಿಕೆಗಳು ತೆರವಾಗಿ ಸಂಚಾರ ಸುಗಮವಾಗಿದೆ.

ಸುಂಕ ವಸೂಲಿ ನಿಂತ ವರ್ಷಗಳ ಬಳಿಕ ಶೆಲ್ಟರನ್ನು ಇತ್ತೀಚೆಗೆ ಕಳಚಿದ್ದರೂ ರಸ್ತೆಯ ಮೇಲಿರುವ ಡಿವೈಡರ್‌ ಹಾಗೂ ಬೂತ್‌ ಬೆಡ್‌ ಹಾಗೆಯೇ ಉಳಿದು ಅವುಗಳಿಗೆ ವಾಹನ ಢಿಕ್ಕಿ ಹೊಡೆಯುತ್ತಿದ್ದವು. ಅವಶೇಷಗಳಿಂದಾಗಿ ಒಂದು ತಿಂಗಳಲ್ಲಿ ಬರೋಬ್ಬರಿ 6 ಅಪಘಾತಗಳು ಸಂಭವಿಸಿದ ದಾಖಲೆಯೂ ಇದೆ. ಇಲ್ಲಿ ಬೀದಿ ದೀಪವೂ ಇಲ್ಲದಿರುವುದೂ ಅಪಘಾತ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಬಗ್ಗೆ ಉದಯವಾಣಿ ಸವಿವರ ವರದಿ ಮಾಡಿ ಗಮನ ಸೆಳೆದಿತ್ತು.
“ಶುಲ್ಕ ವಸೂಲಾತಿ ಕೇಂದ್ರ’ ಎಂಬ ಎರಡು ಬೃಹತ್‌ ಫ‌ಲಕಗಳು ಮಾತ್ರ ಈಗಲೂ ರಾರಾಜಿಸುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಟೋಲ್‌ ಕೇಂದ್ರ ಇತ್ತೆಂಬ ಮಾಹಿತಿ ಕೊಡುತ್ತಿದೆ. ಈ ಭಾಗದಲ್ಲಿ ದಾರಿ ದೀಪದ ಕೊರತೆಯನ್ನು ನಿವಾರಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಎನ್‌ಐಟಿಕೆಯ ನೂರಾರು ವಿದ್ಯಾರ್ಥಿಗಳು ರಸ್ತೆ ದಾಟುವ ಪ್ರಮುಖ ಸ್ಥಳ ಇದಾಗಿದ್ದು, ವಾಹನಗಳು ವೇಗವಾಗಿ ಬರುವ ಸಂದರ್ಭ ಅವಘಡ ಸಂಭವಿಸದಂತೆ ರಕ್ಷಣೆ ಒದಗಿಸಬೇಕಿದೆ.

ಟಾಪ್ ನ್ಯೂಸ್

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.