ರೇಷ್ಮೆ ಜತೆ ದೀಪಾವಳಿ ಚಿತ್ರ ಕಳುಹಿಸಲು ನಾಳೆ ಕೊನೆಯ ದಿನ

ಉಡುಪಿ, ದಕ್ಷಿಣ ಕನ್ನಡ, ಕೊಡಗು, ಕಾಸರಗೋಡಿನ ಮಹಿಳೆಯರು ಪಾಲ್ಗೊಳ್ಳಬಹುದು...

Team Udayavani, Oct 26, 2022, 5:11 PM IST

1-sddadd

ಮಣಿಪಾಲ: ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಹೊಸ ಬಟ್ಟೆ ಧರಿಸಿ, ಮನೆ ಶೃಂಗಾರಗೊಳಿಸಿ, ರಂಗೋಲಿ ಹಾಕಿ ದೀಪ ಹಚ್ಚಿ ಮನೆ ಮಂದಿಯೆಲ್ಲ ಸಂತಸದಿಂದ ಕಳೆಯುವುದೇ ಅವಿಸ್ಮರಣೀಯ ಕ್ಷಣ. ಇಂತಹ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಉದಯವಾಣಿ ಆಯೋಜಿಸಿರುವುದು ರೇಷ್ಮೆ ಜತೆ ದೀಪಾವಳಿ ಫೋಟೋ ಸ್ಪರ್ಧೆ. ಮಹಿಳೆಯರಿಗಂತೂ ರೇಷ್ಮೆ ಸೀರೆ ಅಚ್ಚುಮೆಚ್ಚಿನ ಉಡುಗೆ. ರೇಷ್ಮೆ ಸೀರೆ-ಉಡುಗೆಗಳನ್ನು ದೀಪಾ ವಳಿ ಸಂದರ್ಭ ತೊಟ್ಟು ಸಂಭ್ರಮಿಸುವು ದಷ್ಟೇ ಅಲ್ಲ; ಅವುಗಳ ಉತ್ತಮ ಫೋಟೋಗಳನ್ನು ಕಳುಹಿಸಿ ಬಹುಮಾನವನ್ನೂ ಗೆಲ್ಲಲು ಅವಕಾಶವಿದೆ.

ಕರಾವಳಿ ಕರ್ನಾಟಕದ ಜನಮನದ ಜೀವನಾಡಿ ಉದಯವಾಣಿ ತನ್ನ ಮಹಿಳಾ ಓದುಗರಿಗಾಗಿ ಉದ್ಯಾವರದ ಜವುಳಿ ಮಳಿಗೆ ಜಯಲಕ್ಷ್ಮೀ ಸಿಲ್ಕ್ಸ್ ಅವರ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬಹುದು. ಸಾಂಪ್ರದಾಯಿಕ ರೇಷ್ಮೆಯ ಪ್ರತಿಷ್ಠಿತ ಸ್ಥಾನವನ್ನು ಮತ್ತಷ್ಟು ಔನ್ನತ್ಯಕ್ಕೇರಿಸಲು ಹಾಗೂ ಆ ಮೂಲಕ ಮತ್ತೆ ಸಾಂಪ್ರದಾಯಿಕತೆಗೆ ಒತ್ತು ನೀಡುವುದು ಈ ಸ್ಪರ್ಧೆಯ ಉದ್ದೇಶ.

ಕುಟುಂಬ ಸದಸ್ಯೆಯರು, ಗೆಳತಿಯರು ಹೀಗೆ ಗುಂಪಾಗಿ ಎಲ್ಲರೂ ಸಾಂಪ್ರದಾಯಿಕವಾಗಿ ರೇಷ್ಮೆ ಸೀರೆ ಉಟ್ಟು ದೀಪಾವಳಿ ಆಚರಿಸುವ ಫೋಟೋಗಳನ್ನು ಕಳುಹಿಸಿ. ಗುಂಪಿನಲ್ಲಿ ಯಾರಾದರೂ ಒಬ್ಬರು ಕಡ್ಡಾಯವಾಗಿ ಕೆಂಪು ಬಣ್ಣದ ಸೀರೆ ಉಟ್ಟಿರಬೇಕು. ಗುಂಪಿನಲ್ಲಿ ಕನಿಷ್ಠ ಮೂರು ಮಂದಿ ಇರಲಿ. ಉತ್ತಮ ರೆಸಲ್ಯೂಶನ್‌ ಹೊಂದಿರುವ, ಕಲಾತ್ಮಕವಾಗಿರುವ, ನೈಜತೆಯಿಂದ ಕೂಡಿರುವ ವಿಶಿಷ್ಟ ಪರಿಕಲ್ಪನೆಯ ಫೋಟೋಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಮೊಬೈಲ್‌ನಿಂದ ತೆಗೆದ ಚಿತ್ರಗಳಾದರೆ ಉತ್ತಮ ರೆಸಲ್ಯೂಶನ್‌ ಇರಲಿ. ಹಳೆಯ ಚಿತ್ರ ತಿರಸ್ಕರಿಸಲಾಗುವುದು.

ಚಿತ್ರ ಕಳುಹಿಸಲು ಅ. 27 ಕೊನೆಯ ದಿನ ಸ್ಪರ್ಧೆಗೆ ಚಿತ್ರಗಳನ್ನು ಕಳುಹಿಸಲು ಅ. 27 (ಗುರುವಾರ) ಕೊನೆಯ ದಿನ. ಇದುವರೆಗೂ ಚಿತ್ರ ಕಳುಹಿಸದಿದ್ದವರು ಕೂಡಲೇ ಕಳುಹಿಸಿ. ನಿಮ್ಮ ಹೆಸರು, ಊರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ತಪ್ಪದೇ ನಮೂದಿಸಿ. ಫ‌ಲಿತಾಂಶ ಮತ್ತು ವಿಜೇತ ಫೋಟೋಗಳನ್ನು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಫೋಟೋಗಳನ್ನು ಇ-ಮೇಲ್‌ ವಿಳಾಸ [email protected] ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆ 9148594259ಗೆ ಕಳುಹಿಸಿಕೊಡಿ. ಇ-ಮೇಲ್‌ ಅಥವಾ ವಾಟ್ಸ್‌ಆ್ಯಪ್‌ ಯಾವುದಾದರೂ ಒಂದಕ್ಕೆ ಮಾತ್ರ ಚಿತ್ರಗಳನ್ನು ಕಳುಹಿಸಬಹುದು.

ಬಹುಮಾನ ವಿವರ

ಉತ್ತಮ ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನ ಗಳನ್ನು ನೀಡಲಾಗುವುದು. ಪ್ರಥಮ ಬಹುಮಾನ 25 ಸಾವಿರ ರೂ. ಬೆಲೆಯ ರೇಷ್ಮೆ ಸೀರೆ, ದ್ವಿತೀಯ ಬಹುಮಾನ 15 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ, ತೃತೀಯ ಬಹುಮಾನ 10 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ಹಾಗೂ 10 ಮಂದಿಗೆ ತಲಾ 5 ಸಾವಿರ ರೂ. ಮೌಲ್ಯದ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು.

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.