ಮಲ್ಪೆ ಬೀಚ್: ವಾರಾಂತ್ಯ ಹೆಚ್ಚಿನ ಜನ : ಸೆ. 2ನೇ ವಾರದಿಂದ ನೀರಿಗಿಳಿಯುವ ಅವಕಾಶ?
Team Udayavani, Aug 22, 2022, 10:06 AM IST
ಮಲ್ಪೆ : ಇಲ್ಲಿನ ಕಡಲತೀರದಲ್ಲಿ ಇದೀಗ ಮಳೆಗಾಲದಲ್ಲೂ ವಾರಾಂತ್ಯದಲ್ಲಿ ಜನಸಂದಣಿ ಕಂಡು ಬರುತ್ತಿದ್ದು ಬೀಚ್ ಅಭಿವೃದ್ಧಿ ಸಮಿತಿ ಮಾತ್ರ ಯಾರನ್ನೂ ನೀರಿಗೆ ಇಳಿಯದಂತೆ ಎಚ್ಚರ ವಹಿಸುತ್ತಿದೆ. ಹಾಗಾಗಿ ಬಂದ ಪ್ರವಾಸಿಗರು ದೂರದಲ್ಲೇ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ.15ರ ವರಗೆ ಯಾವುದೇ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರುತ್ತದೆ. ಈ ಸಮಯದಲ್ಲಿ ಯಾವುದೇ ವಾಟರ್‌ನ್ಪೋರ್ಟ್ಸ್ ನಡೆಸಲು ಅನುಮತಿ ಇರುವುದಿಲ್ಲ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಡಲ ಆಬ್ಬರ ಹೆಚ್ಚಾಗಿರುವುದರಿಂದ ಬೀಚ್ ಅಭಿವೃದ್ಧಿ ಸಮಿತಿ ಪ್ರವಾಸಿಗರು ನೀರಿಗೆ ಇಳಿಯದಂತೆ ಪ್ರತಿವರ್ಷ ಮಳೆಗಾಲದಲ್ಲಿ ಬೀಚ್‌ನ ಉದ್ದಕ್ಕೂ ರಿಫ್ಲೆಕ್ಟೆಡ್ ಪಟ್ಟಿ ಮತ್ತು ಫಿಶ್‌ನೆಟ್ ತಡೆಬೇಲಿಯನ್ನು ಕಟ್ಟಿ ಮುನ್ನೆಚ್ಚರಿಕೆ ವಹಿಸುತ್ತಿದೆ. ಮೂಲಗಳ ಪ್ರಕಾರ ಸೆ. 10ರ ವರೆಗೆ ಈ ನಿಬಂìಧ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಪ್ರವಾಸಿಗರಿಗೆ ದೂರದಿಂದಲೇ ಬೀಚ್ ನೋಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಮುಂದೆ ಸಮುದ್ರದ ನೀರಿನ ಒತ್ತಡವನ್ನು ನೋಡಿಕೊಂಡು ನೀರಿಗಿಳಿಯಲು ಬಿಡಲಾಗುವುದು ಎಂದು ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.
ವಾರಾಂತ್ಯ ಹೆಚ್ಚಿನ ಜನ
ವಾರಾಂತ್ಯ ಹಾಗೂ ಕೃಷ್ಣಾಷ್ಟಮಿ ರಜೆಯ ಹಿನ್ನೆಲೆಯಲ್ಲಿ ಈ ವಾರವೂ ಕಡಲತೀರದಲ್ಲಿ ಹೆಚ್ಚಿನ ಜನರು ಕಂಡು ಬಂದಿದ್ದಾರೆ. ಶುಕ್ರವಾರ ಮತ್ತು ಶನಿವಾರ ದೂರದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿದ್ದರು ರವಿವಾರ ಮಧ್ಯಾಹ್ನದ ಬಳಿಕ ಸ್ಥಳೀಯರು ಕಂಡು ಬಂದಿದ್ದಾರೆ. 3 ದಿವಸ ಸತತ ರಜೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಹೆಚ್ಚುವರಿ ಜೀವರಕ್ಷಕರು, ಹೋಮ್ ಗಾರ್ಡ್‌ಗಳು ಇದ್ದಾರೆ.
ಪಣಂಬೂರು: ಪ್ರವಾಸಿಗರು ಹೆಚ್ಚು
ಪಣಂಬೂರು: ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಜೆಯಿದ್ದುದರಿಂದ ರವಿವಾರ ಪಣಂಬೂರು ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ದವಾಗಿ ಮರಳು ಕೊರೆತವಾಗಿ ಬೀಚ್ ಆಳವಾಗಿದ್ದು ಪ್ರವಾಸಿಗರಿಗೆ ನೀರಿಗಿಳಿಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಹೆಚ್ಚಿನ ಪ್ರವಾಸಿಗರು ದೂರದಲ್ಲೇ ನೋಡಿ ಸಮಾಧಾನ ಪಟ್ಟುಕೊಳ್ಳಬೇಕಾಯಿತು.
ಉಳ್ಳಾಲ: ಹೆಚ್ಚಿನ ಜನಸಂದಣಿ
ಉಳ್ಳಾಲ: ಕಳೆದ ಎರಡು ದಿನಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸಡಗರದಲ್ಲಿದ್ದ ಜನರು ರವಿವಾರ ಸೋಮೇಶ್ವರ ಮತ್ತು ಉಳ್ಳಾಲ ಬೀಚ್‌ಗಳಗೆ ತೆರಳಿದ್ದರಿಂದ ಜನಸಂದಣಿ ಅಧಿಕವಾಗಿತ್ತು, ಸಾಮಾನ್ಯವಾಗಿ ರವಿವಾರ ಸೋಮೇಶ್ವರದ ಎರಡು ಮತ್ತು ಉಳ್ಳಾಲದ ಬೀಚ್‌ನಲ್ಲಿ ಪ್ರವಾಸಿಗರ ದಂಡು ಇದ್ದರೂ, ಕಳೆದೆರಡು ದಿನಗಳಿಂದ ಅತೀ ಹೆಚ್ಚು ಪ್ರವಾಸಿಗರು ಆಗಮಿಸಿದ್ದಾರೆ. ಉಳ್ಳಾಲ ದರ್ಗಾ ವೀಕ್ಷಣೆಗೆ ಬರುವ ಸಂಖ್ಯೆಯೂ ಹೆಚ್ಚಳವಾಗಿದ್ದು, ದರ್ಗಾ ಸಂದರ್ಶಿಸುವ ಪ್ರವಾಸಿಗರು ಉಳ್ಳಾಲ ಬೀಚ್‌ಗಳಿಗೆ ಭೇಟಿ ನೀಡುತ್ತಿದ್ದಾರೆ.
ಸೋಮೇಶ್ವರ ದೇಗುಲ ಬಳಿಯ ಸಮುದ್ರತಟ, ರುದ್ರಪಾದೆ ಸೇರಿದಂತೆ ಮೂಡಾ ಸೈಟ್ ಬಳಿಯ ಬೀಚ್‌ನಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಳ ಕಂಡು ಬಂದಿದೆ. ಸಂಜೆ ವೇಳೆಗೆ ಕೆಲಕಾಲ ಮಳೆಯಾದಾಗ ಸಮುದ್ರ ತಟ ಖಾಲಿ ಯಾದೂ ಮಳೆ ನಿಂತ ಬಳಿಕ ಸಂಖ್ಯೆ ಹೆಚ್ಚಿತ್ತು. ಉಚ್ಚಿಲ ಎಂಡ್ ಪಾಯಿಂಟ್ ಕಡಲ್ಕೊರೆತ ಸಮಸ್ಯೆಯಿಂದಾಗಿ ಪ್ರವಾಸಿಗರ ಸಂಚಾರಕ್ಕೆ ತಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.