ಸಾಂಪ್ರದಾಯಿಕ ಮೀನುಗಾರಿಕೆ ಚುರುಕು

Team Udayavani, Jun 11, 2018, 6:20 AM IST

0906mle1e.jpg

ಮಲ್ಪೆ: ಮುಂಗಾರು ಆರಂಭಗೊಂಡಿದೆ. ಭಾರೀ ಮಳೆಗಾಳಿ ಬೀಸು ತ್ತಿದ್ದು, ಮಳೆಗಾಲದ ಪ್ರಭಾವ ತೋರಿ ಸುತ್ತಿದೆ. ಒಂದೊಮ್ಮೆ ಗಾಳಿ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಕಡಲಿ ಗಿಳಿಯಲು ನಿರ್ಧರಿಸುತ್ತಾರೆ. ಶುಕ್ರವಾರ ಬೆಣ್ಣೆಕುದ್ರು ಕುಲಮಹಾಸ್ತ್ರಿ ಮತ್ತು ವಡಭಾಂಡ ಬಲರಾಮ ದೇವರಿಗೆ ಪೂಜೆ ಸಲ್ಲಿಸಿ ಗಂಗಾಮಾತೆ ಪ್ರಸಾದವನ್ನು ಅರ್ಪಿಸಿ ಸಮುದ್ರ ಪೂಜೆ ನಡೆಸಿದ್ದಾರೆ.

ಮೀನುಗಾರಿಕೆಗೆ ರೆಡಿ
ಯಾಂತ್ರೀಕೃತ ಮೀನುಗಾರಿಕೆ ಅವಧಿ ಮುಗಿಯುತ್ತಿದ್ದಂತೆ  ಕರಾವಳಿ ಭಾಗದಲ್ಲಿ ಸಾಂಪ್ರ ದಾಯಿಕ ನಾಡದೋಣಿ ಮೀನು ಗಾರಿಕೆ ಪದ್ಧತಿ ಆರಂಭಗೊಳ್ಳು ತ್ತದೆ. ಈಗಾಗಲೇ ಮೀನು ಗಾರಿಕೆಗೆ ಬಳಸುವ ಬಲೆಗಳನ್ನು ಜೋಡಿಸುವ ಕಾಯಕ ಧಾರವನ್ನು ಮುಗಿಸಿ ಬಲೆಗಳನ್ನು ದೋಣಿಗೆ ತುಂಬಿಸಿ ಕಡಲಿಗಿಳಿಯಲು ಸಜ್ಜಾಗಿ ನಿಂತಿದ್ದಾರೆ.

ಸಹಕಾರಿ ತತ್ತ Ì
ಉಡುಪಿಯ ಮಲ್ಪೆ, ಕಾಪು, ಉಚ್ಚಿಲ, ಮಟ್ಟು, ಪಡುಕರೆ, ತೊಟ್ಟಂ, ಹೂಡೆ ಬೆಂಗ್ರೆ ಮುಂತಾದೆಡೆಗಳಲ್ಲಿ ನಾಡದೋಣಿ ಮೀನುಗಾರಿಕೆ ಹರಡಿಕೊಂಡಿದೆ. ಪ್ರತಿನಿತ್ಯ ಬೆಳಗ್ಗೆ ಮೀನುಗಾರಿಕೆಗೆ ತೆರಳುವ ಅವರು ಅದೇ ದಿನ ಸಂಜೆ ವಾಪಸಾಗುತ್ತಾರೆ.  ವರ್ಷದ 10 ತಿಂಗಳು ಯಾಂತ್ರೀಕೃತ ಬೋಟ್‌ಗಳಲ್ಲಿ ಕಾರ್ಮಿಕರಾಗಿ ದುಡಿ ಯುವ ಇವರು ಮಳೆಗಾಲದ ಎರಡು ತಿಂಗಳು ನಾಡದೋಣಿಯಲ್ಲಿ ಮಾಲಕ ರಾಗಿ ಮೀನುಗಾರಿಕೆ ನಡೆಸುತ್ತಾರೆ.  ಈ ಮೀನುಗಾರಿಕೆಯಿಂದ ಬಂದ ಲಾಭವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಸಹಕಾರಿ ತತ್ವದಡಿಯಲ್ಲಿ ಮೀನುಗಾರಿಕೆ ಮಂಗಳೂರಿನಿಂದ ಗಂಗೊಳ್ಳಿಯ ವರೆಗೆ‌ ನಡೆಯುತ್ತಿದೆ. 

40 ಗುಂಪುಗಳ ಮೀನುಗಾರಿಕೆ
ಕಾಪುವಿನಿಂದ ಕೋಡಿಬೆಂಗ್ರೆಯ ವರೆಗೆ ಒಟ್ಟು  40 ಡಿಸ್ಕೋ ಫಂಡ್‌ಗಳಿವೆ. ಅಂದರೆ 40 ಗುಂಪುಗಳು ಮೀನುಗಾರಿಕೆ ನಡೆಸುತ್ತವೆ. ಒಂದು ಗುಂಪಿನಲ್ಲಿ ಕನಿಷ್ಠ  35 ಗರಿಷ್ಠ 60 ಮಂದಿ ಇರುತ್ತಾರೆ. 800ಕ್ಕೂ ಅಧಿಕ ಟ್ರಾಲ್‌ದೋಣಿಗಳು, 30 ಕೈರಂಪಣಿ ದೋಣಿಗಳು ಮಳೆಗಾಲದಲ್ಲಿ ಮೀನುಗಾರಿಕೆ ನಡೆಸುತ್ತವೆ.  ಸುಮಾರು 30 ಸಾವಿರ ಮಂದಿ ಮೀನುಗಾರರು ನೇರವಾಗಿ ನಾಡದೋಣಿ ಮೀನುಗಾರಿಕೆಯಲ್ಲಿ  ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕರ ರಹಿತ ಸೀಮೆಎಣ್ಣೆ  ಪ್ರಮಾಣ ಹೆಚ್ಚಳಕ್ಕೆ ಆಗ್ರಹ
ನಾಡದೋಣಿ ಮೀನುಗಾರಿಕೆಗೆ ಸರಕಾರ ನೀಡುತ್ತಿರುವ ಕರರಹಿತ ಸೀಮೆಎಣ್ಣೆಯ ಪ್ರಮಾಣವನ್ನು ತಿಂಗಳಿಗೆ 400 ಲೀ.ಗೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದುವರೆಗೂ ಈಡೇರಲಿಲ್ಲ.  ಪ್ರಸ್ತುತ ತಿಂಗಳಿಗೆ 185 ಲೀ. ಮಾತ್ರ ನೀಡಲಾಗುತ್ತಿದ್ದು ನಾಡದೋಣಿ ಒಂದು ಟ್ರಿಪ್‌ ಮೀನುಗಾರಿಕೆ ನಡೆಸಬೇಕಿದ್ದರೂ ಕನಿಷ್ಠ  100ರಿಂದ 150 ಲೀ. ಅಗತ್ಯವಿದೆ. ಹೊಸ ಸರಕಾರ ಮೀನುಗಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕರರಹಿತ ಸೀಮೆ ಎಣ್ಣೆಯ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ. 

ಸಿಗಡಿ ಮೀನು ದೊರೆತರೆ ಲಾಭ
ಕಳೆದ ವರ್ಷ ನಾಡದೋಣಿ ಮೀನುಗಾರಿಕೆ ಹೆಚ್ಚು ಆಶಾದಾಯಕವಾಗಿರಲಿಲ್ಲ.  ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸಲು ಸಿಗುವ ದಿನ ಬಹಳ ಕಡಿಮೆ. ಬೆಲೆಬಾಳುವ ಸಿಗಡಿ ಮೀನು ದೊರೆತರೆ ಲಾಭದಾಯಕ ಮೀನುಗಾರಿಕೆ. ಉಳಿದಂತೆ ಬಂಗುಡೆ, ಬೂತಾಯಿ ಇನ್ನಿತರ ಸಣ್ಣಪುಟ್ಟ ಮೀನುಗಳು ದೊರೆತರೆ ಪ್ರಯೋಜನವಿಲ್ಲ. ಈ ಸಲದ ವಾತಾವರಣವನ್ನು ನೋಡುವಾಗ ಸಿಗಡಿ ಮೀನು ಸಿಗುವ ನಿರೀಕ್ಷೆ ಇದೆ. 
– ಕೃಷ್ಣ ಸುವರ್ಣ, ಪಡುತೋನ್ಸೆ ಬೆಂಗ್ರೆ

ಸಮುದ್ರಪೂಜೆ ಆದ ಮೇಲೆ ಮೀನುಗಾರಿಕೆ
ಮಲ್ಪೆಯ ನಾಡದೋಣಿ ಮೀನುಗಾರ ಸಂಘದ ವತಿಯಿಂದ ಶುಕ್ರವಾರ ಸಮುದ್ರಪೂಜೆ ನಡೆಸಲಾಗಿದೆ. ಆ ದಿನದಿಂದ ಯಾವತ್ತು ಬೇಕಾದರೂ ಮೀನುಗಾರಿಕೆಗೆ ತೆರಳಬಹುದಾಗಿದೆ.  
– ಜನಾರ್ದನ ತಿಂಗಳಾಯ, ಅಧ್ಯಕ್ಷರು, ಮಲ್ಪೆ ನಾಡದೋಣಿ ಮೀನುಗಾರರ ಸಂಘ

– ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.