ಉಡುಪಿ ಟ್ರಾಫಿಕ್ ದಟ್ಟಣೆಗೆ ಕಡಿವಾಣಕ್ಕೆ ಕ್ರಮ: ಕಲ್ಸಂಕ ಸಹಿತ 10 ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್
Team Udayavani, Dec 23, 2022, 6:05 AM IST
ಉಡುಪಿ : ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಳವಾಗಿ ಸಾರ್ವಜನಿಕರು, ವಾಹನ ಸವಾರರು ಹೈರಾಣಾಗುತ್ತಿದ್ದು ಟ್ರಾಫಿಕ್ ನಿರ್ವಹಣೆ ವ್ಯವಸ್ಥಿತವಾಗಿಸಲು ಕಲ್ಸಂಕ ವೃತ್ತ ಸಹಿತ 10 ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈಗಾಗಲೇ ಕಲ್ಸಂಕ, ಅಂಬಾಗಿಲು, ಕೋರ್ಟ್ ಸಮೀಪ ಸಿಗ್ನಲ್ ಅಳವಡಿಕೆಗೆ ಫೌಂಡೇಶನ್ ಕೆಲಸ ನಡೆಯುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಹಾಕಲು ಸಿಗ್ನಲ್ ಲೈಟ್ ಅಳವಡಿಸುವ ಬೇಡಿಕೆ ಹಲವಾರು ವರ್ಷಗಳಿಂದ ಇದ್ದು, ಇದೀಗ ಹಂತಹಂತವಾಗಿ ಅಭಿವೃದ್ಧಿ ಗೊಳಿಸಲಾ ಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕಲ್ಸಂಕ, ಬಲಾಯಿ ಪಾದೆ, ಶಿರಿಬೀಡು, ತ್ರಿವೇಣಿ ಸರ್ಕಲ್, ಹಳೆ ಡಯಾನ ವೃತ್ತ, ಮಣಿಪಾಲ ಟೈಗರ್ ಸರ್ಕಲ್, ಎಂಐಟಿ ಸರ್ಕಲ್ ಹೆದ್ದಾರಿ ವ್ಯಾಪ್ತಿ
ಯಲ್ಲಿ ಅಂಬಾಗಿಲು, ಅಂಬಲಪಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್
ಅಳವಡಿಕೆ ಪ್ರಸ್ತಾವವಿದೆ.
ಬೆಂಗಳೂರು, ಮಂಗಳೂರಿನಂತೆ ಉಡುಪಿ ನಗರವು ಟ್ರಾಫಿಕ್ ಸಮಸ್ಯೆ ಸ್ವರೂಪ ಪಡೆಯುತ್ತಿದೆ. ಕಲ್ಸಂಕ ವೃತ್ತ, ಕೆಎಂ ಮಾರ್ಗ, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಕೆಎಂ ಮಾರ್ಗ, ಕರಾವಳಿ ಜಂಕ್ಷನ್, ಡಯಾನ ಸರ್ಕಲ್, ಅಂಬಲಪಾಡಿ ಜಂಕ್ಷನ್‌ನಲ್ಲಿ ವಾರಾಂತ್ಯ ದಿನಗಳಲ್ಲಿ ಟ್ರಾಫಿಕ್ ಜಂಜಾಟ ವಿಪರೀತವಾಗಿದೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಬೆಳಗ್ಗೆ ಮತ್ತು ಸಾಯಂಕಾಲ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿರುವಷ್ಟೆ ಒತ್ತಡ ನಗರದ ಒಳಭಾಗದ ರಸ್ತೆಗಳಲ್ಲಿಯೂ ಇರುತ್ತದೆ.
ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ನಗರದಲ್ಲಿ ಮೊದಲ ಹಂತದಲ್ಲಿ ಹತ್ತು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಪ್ರಾಯೋ ಗಿಕವಾಗಿ ಮಾತ್ರ ಮಣಿಪಾಲದಲ್ಲಿ ಸಿಗ್ನಲನ್ನು ಅಳವಡಿ ಸಿದ್ದು, ಅಂಬಾಗಿಲು, ಕಲ್ಸಂಕ, ಬಲಾಯಿಪಾದೆಯಲ್ಲಿ ಈಗಾಗಲೇ ಇದರ ಫೌಂಡೇಶನ್ ಕೆಲಸಗಳು ನಡೆಯುತ್ತಿದೆ.
– ಸುಮಿತ್ರಾ ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.