ರೈಲ್ವೇ ಕಾಮಗಾರಿ: 10ಕ್ಕೂ ಅಧಿಕ ರೈಲುಗಳ ಸ್ಥಗಿತ; ಸಂಚಾರ ಸಮಯ ವ್ಯತ್ಯಯ
Team Udayavani, Feb 16, 2023, 6:50 AM IST
ಉಡುಪಿ: ರೈಲ್ವೇ ಸುರಂಗದಲ್ಲಿ ಹಳಿ ಬದಲಾವಣೆ ಮತ್ತು ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ 10 ರೈಲುಗಳು ಸಂಚಾರ ಸ್ಥಗಿತಗೊಳಿಸಿವೆ. ಇನ್ನೂ ಕೆಲವು ರೈಲುಗಳ ಸಮಯದಲ್ಲಿ ವ್ಯತ್ಯಯವಾಗಲಿದೆ. ಈಗಾಗಲೇ ಸೀಸನ್ ಅವಧಿ ಆರಂಭವಾಗಿದ್ದು, ಅನೇಕ ಪ್ರಯಾಣಿಕರು ರೈಲು ಟಿಕೆಟ್ ಸಿಗದೆ ಬಸ್‌ಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.
ಮುಂಬಯಿಯ ಲೋಕಮಾನ್ಯ ತಿಲಕ್ (ಟಿ) ಸ್ಟೇಷನ್ ಯಾರ್ಡ್ ವಾಷಿಂಗ್ ಪಿಟ್ ಲೈನ್ ನಂ. 7ರಲ್ಲಿ ಮಾ. 19 ತನಕ ದುರಸ್ತಿ ಹಿನ್ನೆಲೆಯಲ್ಲಿ ನಂ. 16346 ತಿರುವನಂತಪುರ ಸೆಂಟ್ರಲ್
-ಲೋಕಮಾನ್ಯ ತಿಲಕ್ (ಟಿ) ನೇತ್ರಾ ವತಿ ಡೈಲಿ ಎಕ್ಸ್‌ಪ್ರೆಸ್ ಮತ್ತು ನಂ. 12620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ (ಟಿ) ಮತ್ಸ್ಯಗಂಧ ಡೈಲಿ ಎಕ್ಸ್‌ಪ್ರೆಸ್ ಮಾ. 18ರ ತನಕ ಪನ್ವೇಲ್ ವರೆಗೆ ಮಾತ್ರ ಸಂಚರಿಸಲಿವೆ.
ಆರಂಭ ನಿಲ್ದಾಣ ಬದಲು
ನಂ. 16345 ಲೋಕಮಾನ್ಯ ತಿಲಕ್ (ಟಿ)-ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಡೈಲಿ ಎಕ್ಸ್‌ಪ್ರೆಸ್ ಹಾಗೂ ನಂ. 12619 ಲೋಕಮಾನ್ಯ ತಿಲಕ್ (ಟಿ)-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಡೈಲಿ ಎಕ್ಸ್‌ಪ್ರೆಸ್ ಮಾ. 19ರ ವರೆಗೆ ನಿಗದಿತ ಸಮಯಕ್ಕೆ ಲೋಕಮಾನ್ಯ ಬದಲು ಪನ್ವೇಲ್‌ನಿಂದ ಪ್ರಯಾಣ ಆರಂಭಿಸಲಿವೆ.
ಮಾ. 3ರ ವರೆಗೆ ವ್ಯತ್ಯಯ
ಮಂಗಳೂರು ಹೊರವಲಯದ ಪಡೀಲ್- ಜೋಕಟ್ಟೆ ನಿಲ್ದಾಣಗಳ ನಡು ವಿನ ಕುಲಶೇಖರದ ಸುರಂಗದಲ್ಲಿ ಹಳಿ ಬದಲಾವಣೆ, ತಾಂತ್ರಿಕ ಕಾಮಗಾರಿ ಹಿನ್ನೆಲೆಯಲ್ಲಿ ಕೊಂಕಣ, ನೈಋತ್ಯ ಮತ್ತು ದಕ್ಷಿಣ ರೈಲ್ವೇಯ ರೈಲುಗಳ ಸಂಚಾರ ದಲ್ಲಿ ಮಾ. 3ರ ವರೆಗೆ ವ್ಯತ್ಯಯ ವಾಗಲಿದೆ.
ಪೂರ್ಣ ರದ್ದಾದ ರೈಲುಗಳು
ಮಂಗಳೂರು ಸೆಂಟ್ರಲ್-ಮಡ್ಗಾಂವ್ (06602/ 06601), ಅಜೆ¾àರ್ ಜಂಕ್ಷನ್-ಎರ್ನಾಕುಳಂ ಜಂಕ್ಷನ್ (12978/ 12977), ಚಂಡೀ ಗಢ ಜಂಕ್ಷನ್- ಕೊಚ್ಚುವೇಲಿ (12218/ 12217), ತಿರುನಲ್ವೇಲಿ ಎಕ್ಸ್ ಪ್ರಸ್ ಜಾಮ್‌ನಗರ- ತಿರುನಲ್ವೇಲಿ ಜಂಕ್ಷನ್ (19578/ 19577),ಹಜ್ರತ್ ನಿಜಾಮುದ್ದೀನ್- ಎರ್ನಾ ಕುಳಂ (12284/ 12283), ತಿರುನ ಲ್ವೇಲಿ ಹಂಸಫರ್ ಎಕ್ಸ್‌ಪ್ರೆಸ್ ಗಾಂಧಿ ಧಾಮ ಜಂಕ್ಷನ್- ತಿರುನಲ್ವೇಲಿ ಜಂಕ್ಷನ್ (20924/20923), ಓಖಾ- ಎರ್ನಾಕುಳಂ ಎಕ್ಸ್‌ಪ್ರೆಸ್ (16337/ 16338), ತಿರುನಲ್ವೇಲಿ ಜಂಕ್ಷನ್-ದಾದರ್ (22630/ 22629), ಇಂದೋರ್ ಜಂಕ್ಷನ್- ಕೊಚ್ಚುವೇಲಿ (20932/20931), ಪೋರ್‌ಬಂದರ್-ಕೊಚ್ಚುವೇಲಿ (20910/20909).
ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮತ್ತೆ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ವಾಗುತ್ತಿದೆ. ಮಾ. 15ರ ಬಳಿಕ ಮತ್ತೆ ಎಂದಿನಂತೆ ಸಂಚರಿಸಲಿವೆ.
– ಸುಧಾ ಕೃಷ್ಣಮೂರ್ತಿ, ಪಿಆರ್‌ಒ, ಕೊಂಕಣ ರೈಲ್ವೇ
ಭಾಗಶಃ ರದ್ದು
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (12133/ 12134) ರೈಲುಗಳು ಮಾ. 2 ತನಕ ಸುರತ್ಕಲ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವುದಿಲ್ಲ. ಮಡಗಾಂವ್-ಮಂಗಳೂರು ಸೆಂಟ್ರಲ್ (10107/ 10108) ರೈಲುಗಳು ಮಾ. 3ರ ವರೆಗೆ ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಮಂಗಳೂರು ಜಂಕ್ಷನ್ (12133/ 12134) ಡೈಲಿ ಎಕ್ಸ್ ಪ್ರಸ್‌ನ ಪ್ರಯಾಣಿಕರು ಈ ಅವಧಿಯಲ್ಲಿ ಮಂಗಳೂರು ಜಂಕ್ಷನ್ ಮತ್ತು ಸುರತ್ಕಲ್ ನಿಲ್ದಾಣಗಳ ನಡುವೆ ಸಂಚರಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.