ಯೋಗೇಶ್ವರನ ನಾಡಿನಲ್ಲಿ ಯೋಗ ಶಿಬಿರಕ್ಕೆ ಸಿದ್ಧತೆ
ಬಾಬಾ ರಾಮ್‌ದೇವ್‌ರಿಂದ ತರಬೇತಿ
Team Udayavani, Oct 13, 2019, 5:47 AM IST
ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠದ ಸಹಯೋಗದಲ್ಲಿ ಉಡುಪಿಯಲ್ಲಿ ನಡೆಯಲಿರುವ ಬೃಹತ್ ಯೋಗ ಶಿಬಿರ ಸಿದ್ಧತೆ ಭರದಿಂದ ಸಾಗುತ್ತಿದೆ.
30,000 ಜನರ ನಿರೀಕ್ಷೆ
ನ. 16ರಿಂದ 20 ವರೆಗೆ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಪ್ರಸಿದ್ಧ ಯೋಗ ಗುರು ಬಾಬಾ ರಾಮ್‌ದೇವ್ ಅವರ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಯೋಗ ನಡೆಯುವ ಶಿಬಿರದಲ್ಲಿ ಸುಮಾರು 30,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಮ್‌ದೇವ್ ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಹರಿದ್ವಾರದ 200ಕ್ಕಿಂತ ಅಧಿಕ ಯೋಗ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಹರಿದ್ವಾರದಿಂದ ಸಿದ್ಧತೆ
ಹರಿದ್ವಾರದ ಪತಂಜಲಿ ಸಮಿತಿಯ ಸದಸ್ಯರು ಪಾರ್ಕಿಂಗ್ ಏರಿಯಾದಲ್ಲಿ ಯೋಗ ಶಿಬಿರದ ವೇದಿಕೆಯನ್ನು ಸಿದ್ಧಪಡಿಸಲಿದ್ದಾರೆ. ದೀಪಾಲಂಕಾರ, ಧ್ವನಿವರ್ಧಕ, ಯೋಗ ಮ್ಯಾಟ್ ಸಹ ಆಳವಡಿಸಲಿದ್ದಾರೆ. ಹರಿದ್ವಾರದ ಕಾರ್ಯಕರ್ತರಿಗಾಗಿ ಪರ್ಯಾಯ ಶ್ರೀಪಾದರು ಶ್ರೀರಾಮಧಾಮದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಿದ್ದಾರೆ.
ಪ್ರವೇಶ ಉಚಿತ
ನ.16ರಿಂದ 20ರ ವರೆಗೆ ಬೆಳಗ್ಗೆ 5ರಿಂದ 7ವರೆಗೆ ಯೋಗ ನಡೆಯಲಿದೆ. ಶಿಬಿರದಲ್ಲಿ ಯಾರು ಬೇಕಾದರೂ ಭಾಗವಹಿಸ ಬಹುದಾಗಿದೆ. ತರಬೇತಿ ಹಾಗೂ ಪ್ರವೇಶಕ್ಕೆ ಯಾವುದೇ ಶುಲ್ಕವಿಲ್ಲ.
2011ರಲ್ಲಿ ಉಡುಪಿ
ಶಿಬಿರಕ್ಕೆ ಮೆಚ್ಚುಗೆ
2011ರಲ್ಲಿ ಉಡುಪಿ, ಮಂಗಳೂರು, ಕಾರ್ಕಳದಲ್ಲಿ ಯೋಗ ಶಿಬಿರ ನಡೆದಿತ್ತು. ಆ ಸಂದರ್ಭ ಯೋಗ ಗುರು ಬಾಬಾ ರಾಮ್‌ದೇವ್ ಅವರು ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದಯೋಗಾಸನ ಶಿಬಿರ ಗುಣಮಟ್ಟ, ಸಂಖ್ಯೆ, ಮೈದಾನದ ವಿನ್ಯಾಸ ಇತ್ಯಾದಿ ಮಾನದಂಡದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎನ್ನುವ ಘೋಷಣೆ ಮಾಡಿದ್ದರು. ಆಗ ಪೇಜಾವರ ಶ್ರೀಗಳು ಪಾಲ್ಗೊಂಡಿದ್ದರು.
ಹೆರಿಟೇಜ್ ವಿಲೇಜ್‌ಗೆ ಮೆಚ್ಚಿಗೆ
2011ರಲ್ಲಿ ಹಮ್ಮಿಕೊಂಡ ಯೋಗ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಮಣಿಪಾಲದ ಹೆರಿಟೇಜ್ ವಿಲೇಜ್‌ನ ಪ್ರಾಚೀನ ಕಟ್ಟಡಗಳ ರಚನೆ ಹಾಗೂ ರೂವಾರಿ ವಿಜಯನಾಥ ಶೆಣೈ ಅವರ ಕಾಳಜಿ, ಕತೃìತ್ವ ಶಕ್ತಿಗೆ ರಾಮ್‌ದೇವ್ ಮೆಚ್ಚುಗೆ ಸೂಚಿಸಿದ್ದರು.
101 ಉಚಿತ ಯೋಗ ಶಿಬಿರ
ಉಚಿತ ಬೃಹತ್ ಯೋಗ ಶಿಬಿರ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲೆಯ 101 ಕಡೆಗಳಲ್ಲಿ 5 ದಿನಗಳ ಉಚಿತ ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ. ಉಡುಪಿ ಆಸುಪಾಸು, ಶಿರ್ವ, ಪರ್ಕಳ, ಕಾರ್ಕಳ, ಮಲ್ಪೆ, ಮಣಿಪಾಲ ಮೊದಲಾದೆಡೆ 12 ಶಿಬಿರಗಳು ನಡೆದಿವೆ. ಉಳಿದ ಕಡೆಗಳಲ್ಲಿ ಶಿಬಿರಗಳನ್ನು ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಪತಂಜಲಿಯಲ್ಲಿ ತರಬೇತಿ ಪಡೆದ 200 ಯೋಗ ಶಿಕ್ಷಕರು ಶಿಬಿರದಲ್ಲಿ ತರಬೇತಿ ನೀಡುತ್ತಿದ್ದಾರೆ.
ಬಸ್‌ಗಳಿಗೆ ಮನವಿ
ನ.16ರಿಂದ 20ರ ವರೆಗೆ ಬಸ್ ಸೇವೆಯನ್ನು ಮುಂಜಾವ 4ರಿಂದ ಪ್ರಾರಂಭಿಸುವಂತೆ ಬಸ್ ಮಾಲಕರ ಸಂಘಕ್ಕೆ ಮನವಿ ಮಾಡಲಾಗುತ್ತದೆ.
ಶಿಬಿರಕ್ಕೆ ಅಗತ್ಯವಿರುವ ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
-ಕರಂಬಳ್ಳಿ ಶಿವರಾಮ ಶೆಟ್ಟಿ,
ಪತಂಜಲಿ ಯೋಗಪೀಠದ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.