ಮಣಿಪಾಲ: ಹೊಸ ದಾರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾಕರು
Team Udayavani, Sep 27, 2018, 10:11 AM IST
ಉಡುಪಿ: ಇಬ್ಬರು ಛಲವಂತ ಲಿಂಗತ್ವ ಅಲ್ಪಸಂಖ್ಯಾಕರು ಸ್ವ ಉದ್ಯೋಗ ಆರಂಭಿಸಿ ಮಾದರಿಯಾಗಿದ್ದಾರೆ.
ಈ ಸಮುದಾಯದಲ್ಲಿ ಮುಖ್ಯವಾಹಿನಿಗೆ ಬಂದು ಮೌಲಿಕ ಜೀವನ ನಡೆಸಲು ಪ್ರಯತ್ನಿಸಿದ ಕೆಲವರಲ್ಲಿ ಸಂಜೀವ ಮತ್ತು ಆಶ್ವಿಜ್ ಸೇರಿದ್ದು, ಮಣಿಪಾಲ ಬಸ್ ನಿಲ್ದಾಣದಲ್ಲಿ ಫಾಸ್ಟ್ ಫುಡ್ ಅಂಗಡಿ ತೆರೆದಿದ್ದಾರೆ.
ವಂಡ್ಸೆ ಮೂಲದ ಸಂಜೀವ್
ವಂಡ್ಸೆ ಮೂಲದ ಸಂಜೀವ್ ಹೋಟೆಲ್‌ಗಳಲ್ಲಿ ಕಾರ್ಮಿಕನಾಗಿ ದುಡಿದವರು. ಆದರೆ ಲಿಂಗತ್ವ ಅಲ್ಪಸಂಖ್ಯಾಕ ಎನ್ನುವ ಕಾರಣಕ್ಕೆ ಹಿಂಸೆ ಅನುಭವಿಸಿ ಹುಟ್ಟೂರಿಗೆ ವಾಪಸು ಬಂದರು. “ಆಸರೆ’ ಟ್ರಸ್ಟ್‌ನ ಮೂಲಕ ಎಚ್‌ಐವಿ ಪೀಡಿತ ಮಕ್ಕಳ ರಕ್ಷಣೆ ಮಾಡುತ್ತಿದ್ದಾರೆ.
ಅಶ್ವಿಜ್ ಶಿಕ್ಷಿತ ಕುಟುಂಬದಲ್ಲಿ ಜನಿಸಿದ್ದರೂ ಲೈಂಗಿಕ ಅಲ್ಪಸಂಖ್ಯಾಕ ಎಂಬುದು ತಿಳಿಯುತ್ತಿದ್ದಂತೆ ಮನೆ
ಯಿಂದ ಹೊರದೂಡಲ್ಪಟ್ಟರು. ಹೊಟೇಲ್ ಕಾರ್ಮಿಕನಾಗಿ ಜೀವನ ಸಾಗಿಸುತ್ತಿದ್ದರು. ಸಂಜೀವ್ ಜತೆಗೆ ಸ್ನೇಹ ಬೆಳೆದು ಬಳಿಕ ಫಾಸ್ಟ್‌ಫುಡ್ ಸೆಂಟರ್ ತೆರೆಯಲು ನಿರ್ಧರಿಸಿದರು.
ಅಧಿಕಾರಿಗಳ ಕಿರುಕುಳ
3 ವರ್ಷದ ಹಿಂದೆಯೇ ಫಾಸ್ಟ್‌ಫುಡ್ ಕೇಂದ್ರ ಕುಂದಾಪುರದಲ್ಲಿ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳು ಬೆಂಬಲ ನೀಡಿರಲಿಲ್ಲ. ಬಳಿಕ ಡಿಸಿಯವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು. ಡಿಸಿ ಮತ್ತು ನಗರಸಭೆ ಆಯುಕ್ತರು ಮಣಿಪಾಲ ಬಸ್ ನಿಲ್ದಾಣದ ಬಳಿ ಸ್ಥಳಾವಕಾಶ ನೀಡಿದ್ದು, ಕೇಂದ್ರವನ್ನು ಮಂಗಳವಾರ ನಗರಸಭೆ ಆಯುಕ್ತ ಜನಾರ್ದನ ಉದ್ಘಾಟಿಸಿದ್ದಾರೆ.
ವರ್ಷಗಳ ಬಳಿಕ ಅಣ್ಣನ ಭೇಟಿ
ಅಶ್ವಿಜ್ ಅಣ್ಣ ಮಣಿಪಾಲದ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅಶ್ವಿಜ್ ಭೇಟಿಯಾಗಿರಲಿಲ್ಲ. ಬುಧವಾರ ಮಗಳೊಂದಿಗೆ ಕ್ಯಾಂಟಿನ್‌ಗೆ ಬಂದಅವರು “ಇವರು ನಿನ್ನ ಚಿಕ್ಕಪ್ಪ’ ಎಂದು ಪರಿಚಯಿಸಿ ತಿಂಡಿ ಖರೀದಿಸಿದರು. ಅಣ್ಣನನ್ನು ಕಂಡಾಗ ಅಶ್ವಿಜ್ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು.
ನಗರಸಭೆ ವ್ಯಾಪ್ತಿಯಲ್ಲಿ ಗೂಡಂಗಡಿ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ ಇದು ವಿಶೇಷ ಪ್ರಕರಣ ಎಂದು ಗಮನಿಸಿ ಅನುಮತಿ ನೀಡಲಾಗಿದೆ. ಭಿಕ್ಷಾಟನೆ, ವೇಶ್ಯಾವಾಟಿಕೆಯಲ್ಲಿ ತೊಡಗುವುದಕ್ಕಿಂತ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸುವುದು ಉತ್ತಮ.
ಜನಾರ್ದನ, ಪೌರಾಯುಕ್ತರು ಉಡುಪಿ ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.