ಟ್ರಾಪಿಕಲ್ ಪಾರಾಸೈಟಾಲಜಿ ಸಮ್ಮೇಳನ
Team Udayavani, Sep 10, 2019, 5:35 AM IST
ಉಡುಪಿ: ಮಣಿಪಾಲ ಕೆಎಂಸಿ ಮೈಕ್ರೋಬಯಾಲಜಿ ವಿಭಾಗ ಆಯೋಜಿಸಿದ ಎರಡು ದಿನಗಳ 13ನೆಯ ಇಂಡಿಯನ್ ಅಕಾಡೆಮಿ ಆಫ್ ಟ್ರಾಪಿಕಲ್ ಪಾರಾಸೈಟಾಲಜಿಯ ವಾರ್ಷಿಕ ಸಮ್ಮೇಳನವು ರವಿವಾರ ಸಮಾಪನಗೊಂಡಿತು.
ಸಂಶೋಧಕರು, ಫಿಸಿಶಿಯನ್, ಸಮುದಾಯ ಆರೋಗ್ಯ ಸಿಬಂದಿ, ಪಾರಾಸೈಟಾಲಜಿಸ್ಟ್ (ಪರೋಪಜೀವಿ ರೋಗ ಶಾಸ್ತ್ರಜ್ಞರು) ರೋಗ ಶಮನದ ಬಗ್ಗೆ ಹಳೆಯ ಕ್ರಮಗಳನ್ನು ಹೇಗೆ ಸುಧಾರಿಸಬಹುದು ಮತ್ತು ಹೊಸ ತಂತ್ರಗಳನ್ನು ಹೇಗೆ ಅಳವಡಿಸಬಹುದು ಎಂಬ ಬಗ್ಗೆ ಚರ್ಚಿಸಿದರು.
ದೊಡ್ಡವರು ಮತ್ತು ಮಕ್ಕಳ ಕರುಳುರೋಗ, ಕ್ಲಿನಿಕಲ್ ಆಯಾಮ ಮತ್ತು ರೋಗಪತ್ತೆ ವಿಧಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಂಘಟನ ಸಮಿತಿ ಅಧ್ಯಕ್ಷ ಡಾ| ಕಿರಣ್ ಚಾವ್ಲಾ ಮತ್ತು ಕಾರ್ಯದರ್ಶಿ ಡಾ| ವಿನಯ ಖನ್ನಾ ಮಾತನಾಡಿದರು. ವಿವಿಧ ದೇಶಗಳ 100 ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಾಹೆ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ಮುಖ್ಯ ಅತಿಥಿ ಯಾಗಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪುದುಚೇರಿ ಬಾಲಾಜಿ ವಿದ್ಯಾಪೀಠದ ಕುಲಪತಿ ಮತ್ತು ಅಕಾಡೆಮಿ ಅಧ್ಯಕ್ಷ ಡಾ| ಸುಭಾಸ್ ಚಂದ್ರ ಪಾರಿಜ ಮಾತನಾಡಿದರು.
ಚೆನ್ನೈಯ ಡಾ| ಎಂಜಿಆರ್ ಶೈಕ್ಷಣಿಕ ಮತ್ತು ಸಂಶೋಧನ ಸಂಸ್ಥೆ ಕುಲಪತಿ ಡಾ| ಗೀತಾಲಕ್ಷ್ಮೀ, ಮಾಹೆ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ, ಕೆಎಂಸಿ ಸಹ ಡೀನ್ ಡಾ| ಚಿರಂಜಯ ಮುಖೋಪಾಧ್ಯಾಯ, ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ, ಅಕಾಡೆಮಿ ಕಾರ್ಯದರ್ಶಿ ಡಾ| ಉಜ್ಜಲ್ ಘೋಶಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.