ತುಳು ಚಿತ್ರ ಬೆಲ್ಚಪ್ಪನಿಗೆ ಎಲ್ಲೆಡೆ ಉತ್ತಮ ಸ್ಪಂದನೆ
Team Udayavani, Aug 13, 2019, 5:45 AM IST
ಮಲ್ಪೆ: ಜಯದುರ್ಗಾ ಪ್ರೊಡಕ್ಷನ್‌ನಲ್ಲಿ ಯುವ ನಿರ್ದೇಶಕ ರಜನೀಶ್ ದೇವಾಡಿಗ ನಿರ್ದೇಶನದಲ್ಲಿ ಮೂಡಿ ಬಂದ ಬೆಲ್ಚಪ್ಪ ಈಗಾಗಲೇ ಉಡುಪಿ ಮಂಗಳೂರಿನಲ್ಲಿ ಬಿಡುಗಡೆ ಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಬಿಡುಗಡೆಯಾದ ದಿನದಿಂದಲೇ ಎಲ್ಲ ಚಿತ್ರ ಮಂದಿರದಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಉತ್ತಮ ಸಂದೇಶ ನೀಡಿದರೆ ಕರಾವಳಿಯ ಜನ ಖಂಡಿತಾ ಇಷ್ಟ ಪಡುತ್ತಾರೆ ಎಂಬುದಕ್ಕೆ ಇದೀಗ ಬಿಡುಗಡೆಗೊಂಡು ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬೆಲ್ಚಪ್ಪ ತುಳು ಚಿತ್ರವೇ ಸಾಕ್ಷಿ. ಉತ್ತಮ ಕಥೆ ಕೊಟ್ಟರೆ, ಕಥೆಯ ಜತೆ ಹಾಸ್ಯ ಇದ್ದರೆ ಜನ ಖಂಡಿತಾ ಇಷ್ಟ ಪಡುತ್ತಾರೆ ಎಂಬುದನ್ನು ಬೆಲ್ಚಪ್ಪ ಮೂಲಕ ನಿರ್ದೇಶಕರು ನಿರೂಪಿಸಿದ್ದಾರೆ.
ಪ್ರಯೋಗಾತ್ಮಕ ಚಿತ್ರ
ಚಿತ್ರದಲ್ಲಿ ತುಳುವಿನ ಕೆಟ್ಟ ಹಾಸ್ಯ ಸಂಭಾಷಣೆ ಇಲ್ಲ. ಕಥೆಯ ಜತೆಗೆ ಸಾಮಾಜಿಕವಾಗಿ ಸಂದೇಶ ಸಾರುವ ಮೂಲಕ ಬೆಲ್ಚಪ್ಪ ಮನೆ – ಮನ ಗೆದ್ದಿದ್ದಾನೆ. ಇದು ರಜನೀಶ್ ಅವರ ಪ್ರಯೋಗಾತ್ಮಕ ಚಿತ್ರ ಎಂಬುದನ್ನು ಮರೆಯಬಾರದು. ಕಥೆಯ ಜತೆಗೆ ಸಾಗುವ ಹಾಸ್ಯಕ್ಕೆ ಹೆಚ್ಚು ಪ್ರಾಧ್ಯಾನತೆ ನೀಡಿದ್ದು ಕೆಲವೊಂದು ಜನರ ಅಪಪ್ರಚಾರದ ನಡುವೆಯೂ ಹಿಂದಿನ ಎಲ್ಲಾ ತುಳು ಚಿತ್ರವನ್ನು ಹಿಂದಿಕ್ಕಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ.
ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ ಅರವಿಂದ ಬೋಳಾರ್ ಚಿತ್ರ ರಸಿಕರನ್ನು ರಂಜಿಸಿದರೆ, ಮನೆಕೆಲಸದವನಾಗಿ ಹಾಸ್ಯದ ಜತೆ ಜತೆಗೆ ತನ್ನ ಜವಾಬ್ದಾರಿ ನಿರ್ವಹಿಸಿದ ಉಮೇಶ್ ಮಿಜಾರ್ ಅವರ ಪಾತ್ರವನ್ನು ಎಲ್ಲರೂ ನೆಚ್ಚಿಕೊಂಡಿದ್ದಾರೆ. ಕುಡಿತದ ದಾಸನಾಗಿ ಕೊನೆಗೆ ಸಾವಿನ ಅಂಚಿನಲ್ಲಿ ಬೀಳುವ ಸನ್ನಿವೇಶವನ್ನು ದೀಪಕ್ ರೈ ಪಾಣಾಜೆ ಚಿತ್ರ ರಸಿಕರ ಕಣ್ಣು ಒದ್ದೆ ಆಗುವಂತೆ ನಟಿಸಿದ್ದು ಅವರ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ನಟಿ ಯಶಸ್ವಿನಿ ದೇವಾಡಿಗ, ಸುಕನ್ಯಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೊಸ ಕಲಾವಿದರೇ ಕೂಡಿರುವ ಈ ಚಿತ್ರ ಅನುಭವಿಗಳಿಗೇ ಸಾಟಿ ಇಲ್ಲದಂತೆ ಕಲಾವಿದರು ಅಭಿನ ಯಿಸಿದ್ದಾರೆ. ಒಟ್ಟಾರೆಯಾಗಿ ಕೋಸ್ಟಲ್‌ವುಡ್‌ನಲ್ಲಿ ಇದೀಗ ಬೆಲ್ಚಪ್ಪದ್ದೇ ಸುದ್ದಿ ಆಗುತ್ತಿದ್ದು ಕುಟುಂಬ ಸಮೇತರಾಗಿ ಚಿತ್ರ ನೋಡಲು ತುಳುನಾಡಿನ ಜನ ಬರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.