ತುಳು ಲಿಪಿಗೆ ಏಕರೂಪತೆ: ಕೆ.ಪಿ. ರಾವ್ ಇರಾದೆ
Team Udayavani, Jan 23, 2021, 2:00 AM IST
ಉಡುಪಿ: ಒಂದೊಂದು ಕಡೆ ಒಂದೊಂದು ರೀತಿ ಇರುವ ತುಳು ಭಾಷೆಯ ಲಿಪಿಗೆ ಏಕರೂಪತೆ ಕೊಡುವ ಇರಾದೆ ಇದೆ ಎಂದು ಕಂಪ್ಯೂಟರ್ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್ ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಜರಗಿದ ಪರ್ಯಾಯ ಪಂಚ ಶತಮಾನೋತ್ಸವ ಸಭೆ, ಸೌರಮಧ್ವನವಮಿ ಸಂದರ್ಭ ಜರಗಿದ ತುಳುಲಿಪಿ ಕಲಿಕೆ ಕಾರ್ಯಾಗಾರದ ಉದ್ಘಾಟನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಕೊಂಡೆ ವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಪರ್ಯಾಯ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಆಶೀರ್ವ ಚನ ನೀಡಿದರು. ಮಾಜಿ ಸಚಿವ ವಿನಯ ಕುಮಾರ ಸೊರಕೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿದ್ದರು.
ಸಮ್ಮಾನ: ತುಳುಲಿಪಿ ತಜ್ಞ ಶತಾಯುಷಿ ಅಂಗಡಿಮಾರು ಕೃಷ್ಣ ಭಟ್, ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದ ದರ್ಶನಪಾತ್ರಿ ಲಕ್ಷ್ಮೀನಾರಾಯಣ ರಾವ್, ಮೂಳೆತಜ್ಞ ಡಾ| ಭಾಸ್ಕರಾ ನಂದಕುಮಾರ್, ಜಾನಪದ ವಿದ್ವಾಂಸ ರಾದ ಕೆ.ಎಲ್. ಕುಂಡಂತಾಯ, ಕುದಿ ವಸಂತ ಶೆಟ್ಟಿ, ಉರಗತಜ್ಞ ರವೀಂದ್ರ ಐತಾಳ ಪುತ್ತೂರು, ಕುಂಬಾರಿಕೆ ತಜ್ಞ ಅಣ್ಣು ಮೂಲ್ಯ, ಎರಕಶಿಲ್ಪಿ ಕಟಪಾಡಿ ಜನಾರ್ದನ ಆಚಾರ್ಯ, ನಾಟಿವೈದ್ಯ ಹಿರಿಯಡಕದ ಭಾಸ್ಕರ ಪೂಜಾರಿ, ಹಿರ್ಗಾನ ಮಜೂರು ಗರೋಡಿಯ ಪಾತ್ರಿ ಲೋಕು ಪೂಜಾರಿ, ಉಡುಪಿಯ ತುಳುಕೂಟ, ಸಿರಿ ತುಳುವ ಚಾವಡಿ, ಮಂಗಳೂರಿನ ಜೈ ತುಳುನಾಡು, ಯುವ ತುಳುನಾಡು, ತುಳುಲಿಪಿ ವಾಚಕ ಸುಭಾಸ್ ನಾಯಕ್ ಬಂಟಕಲ್ಲು, ಶಾಸನ ತಾಳೆಗರಿ ವಾಚಕ ರಾಧಾಕೃಷ್ಣ ಬೆಳ್ಳೂರು, ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವ ಪೀಟರ್ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.
ಸ್ವಂತ ಲಿಪಿ, ಕ್ಯಾಲೆಂಡರ್ ತುಳು ವೈಶಿಷ್ಟ್ಯ :
ಸ್ವಂತಲಿಪಿ ಮತ್ತು ಸ್ವಂತ ಕ್ಯಾಲೆಂಡರ್ ಇರುವ ತುಳುಲಿಪಿ ಅಧಿಕೃತ ರಾಜ್ಯ ಭಾಷೆಯಾಗಬೇಕು ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕಾಗಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದರು. ಇಂಗ್ಲಿಷ್‌ಗೆ ಕ್ಯಾಲೆಂಡರ್ ಇದ್ದರೂ ಸ್ವಂತ ಲಿಪಿ ಇಲ್ಲ. ಇದಕ್ಕೆ ಇರುವ ಲಿಪಿ ರೋಮನ್ ಲಿಪಿ. ಕನ್ನಡಕ್ಕೆ ಸ್ವಂತ ಲಿಪಿ ಇಲ್ಲ. ಇರುವುದು ಬಟ್ಟಿಪ್ರೊಲು ಲಿಪಿ. ತುಳುವಿಗೆ ಹೀಗಲ್ಲ. ಹಿಂದೆ ತುಳುವಿಗೆ ಸಮನಾದ ನಾಲ್ಕು ಭಾಷೆಗೆ ಸ್ಥಾನಮಾನ ಸಿಕ್ಕಿದರೂ ತುಳುವಿಗೆ ಸಿಗದೆ ಇರಲು ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವುದು. ನಾವು ಸಂಘಟಿತರಾಗುವ ಮೂಲಕ ಮೊದಲು ಅಧಿಕೃತ ರಾಜ್ಯ ಭಾಷೆಯಾಗಬೇಕು. ಅದು ಮಧ್ವರ ಜನ್ಮದಿನದ ದಿನವೇ ಆದಂತಾದರೆ ತುಳು ದಿನವಾಗಿ ಘೋಷಿಸಬಹುದು ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.